More

    ಭಾರತ ಡೇವಿಸ್ ಕಪ್ ಪಂದ್ಯ ಮುಂದೂಡಿಕೆ

    ನವದೆಹಲಿ: ಕರೊನಾ ವೈರಸ್ ಭೀತಿಯಿಂದಾಗಿ ಫಿನ್​ಲ್ಯಾಂಡ್ ವಿರುದ್ಧದ ಭಾರತ ಡೇವಿಸ್ ಕಪ್ ಪಂದ್ಯ 2021ಕ್ಕೆ ಮುಂದೂಡಿಕೆ ಯಾಗಿದೆ. ಮ್ಯಾಡ್ರಿಡ್​ನಲ್ಲಿ ನಿಗದಿಯಾಗಿದ್ದ ಫೈನಲ್ ಸೇರಿದಂತೆ ಪ್ರಸಕ್ತ ವರ್ಷದ ಎಲ್ಲ ಪಂದ್ಯಗಳನ್ನು ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್) ಮುಂದೂಡಿದೆ.

    ಪೂರ್ವನಿಗದಿಯಂತೆ ಭಾರತ ತಂಡ ವಿಶ್ವ ಗ್ರೂಪ್-1 ಪಂದ್ಯವಾಡಲು ಸೆಪ್ಟೆಂಬರ್​ಗೆ ಪ್ರಯಾಣ ಬೆಳಸಬೇಕಿತ್ತು. ಇದೀಗ ಮುಂದಿನ ವರ್ಷದ ಮಾರ್ಚ್ ಅಥವಾ ಸೆಪ್ಟೆಂಬರ್​ನಲ್ಲಿ ಪಂದ್ಯ ನಡೆಯುವ ಸಾಧ್ಯತೆಗಳಿವೆ. ವಿಶ್ವ ನಂ.1. ನೊವಾಕ್ ಜೋಕೊವಿಕ್ ಆಯೋಜಿಸಿದ್ದ ಪ್ರದರ್ಶನ ಪಂದ್ಯದಿಂದಾಗಿ ನಾಲ್ವರು ಸ್ಟಾರ್ ಆಟಗಾರರಿಗೆ ಕರೊನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಐಟಿಎಫ್ ಈ ನಿರ್ಧಾರ ಪ್ರಕಟಿಸಿದೆ.

    ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಂಡಿದ್ದು, ಮೂರು ತಿಂಗಳ ಅವಧಿಯಲ್ಲಿ ಲಾಜಿಸ್ಟಿಕ್ಸ್ ಸಮಸ್ಯೆಗಳಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಐಟಿಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

    ‘ಕರೊನಾ ಕವಚ್’​ ಇದ್ದರೆ ಸಾಕು ಚಿಂತೆ ದೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts