More

    ಐಸಿಎಸ್‌ಇ ಫಲಿತಾಂಶ: ಬೆಂಗಳೂರಿನ ವಿದ್ಯಾರ್ಥಿಗಳು ಟಾಪರ್

    ಬೆಂಗಳೂರು ದೆಹಲಿಯ ದಿ ಕೌನ್ಸಿಲ್ ಆ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್(ಐಎಸ್‌ಸಿಇ) ಐಸಿಎಸ್‌ಇ 10ನೇ ತರಗತಿ ಮತ್ತು ಐಎಸ್‌ಸಿ 12ನೇ ತರಗತಿಯ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ.

    ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಐಸಿಎಸ್‌ಇ ಪರೀಕ್ಷೆಯಲ್ಲಿ ಶೇ.99.80 ಅಂಕ ಪಡೆದು ಟಾಪರ್‌ಗಳಾಗಿ ಪ್ರಥಮ ಸ್ಥಾನ ಪಡೆದಿದ್ದಾರೆ. ಗ್ರೀನ್‌ವುಡ್ ಹೈನ ಅದ್ರಿತಾ ತ್ರಿಪಾಠಿ, ಸರ್ಜಾಪುರ ಶಾಖೆಯ ಬೆಥನಿ ಹೈ ಮೆಹೆರ್ ಎ್.ಅನ್ಸಿಲ್ ಮತ್ತು ಬಿಷಪ್ ಕಾಟನ್ ಬಾಲಕರ ಶಾಲೆಯ ವರುಣ್. ಶೇ.99.80 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಐಎಸ್‌ಸಿಯಲ್ಲಿ ಗ್ರೀನ್‌ವುಡ್ ಹೈನ ಮೈಥಿಲಿ ಅಯ್ಯರ್ ಶೇ.98.75 ಅಂಕಗಳನ್ನು ಪಡೆದಿದ್ದಾರೆ.

    ಕರ್ನಾಟಕದಲ್ಲಿ ಐಸಿಎಸ್‌ಇ ಶೇ.99.83 ಮತ್ತು ಐಎಸ್‌ಸಿ ಶೇ.99.49 ಲಿತಾಂಶ ಬಂದಿದೆ. ಐಸಿಎಸ್‌ಇ 405 ಮತ್ತು ಐಎಸ್‌ಸಿ 51 ಶಾಲೆಗಳಿಂದ ಕ್ರಮವಾಗಿ 27,826 ಮತ್ತು 2,364 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

    ಎಂದಿನಂತೆ ಎರಡೂ ಪರೀಕ್ಷೆಯಲ್ಲೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಐಸಿಎಸ್‌ಇ ನಲ್ಲಿ ಬಾಲಕಿಯರು ಶೇ.99.93 ಉತ್ತೀರ್ಣರಾದರೆ, ಬಾಲಕರು ಶೇ.99.73 ಪಾಸ್ ಆಗಿದ್ದಾರೆ. ಐಎಸ್‌ಸಿನಲ್ಲಿ ಬಾಲಕಿಯರು ಶೇ.99.76 ಮತ್ತು ಬಾಲಕರು ಶೇ.99.18 ಉತ್ತೀರ್ಣರಾಗಿದ್ದಾರೆ.
    ಐಸಿಎಸ್‌ಇ ಯನ್ನು 20 ಭಾರತೀಯ ಭಾಷೆಗಳು ಸೇರಿ ಒಟ್ಟು 60 ವಿಷಯಗಳಲ್ಲಿ ನಡೆಸಲಾಗಿತ್ತು. ಇದರಲ್ಲಿ 13 ವಿದೇಶಿ ಮತ್ತು 1 ಕ್ಲಾಸಿಕಲ್ ಭಾಷೆ ಕೂಡ ಸೇರಿದೆ. ಅದೇ ರೀತಿ ಐಎಸ್‌ಸಿಯನ್ನು 47 ವಿಷಯಗಳಲ್ಲಿ ನಡೆಸಿದ್ದು, ಇದರಲ್ಲಿ 12 ಭಾರತೀಯ, 4 ವಿದೇಶಿ ಮತ್ತು 2 ಕ್ಲಾಸಿಕಲ್ ಭಾಷೆ ಸೇರಿದೆ.
    10ನೇ ತರಗತಿಗೆ ನೋಂದಾಯಿಸಿದ್ದ 27,826 ವಿದ್ಯಾರ್ಥಿಗಳ ಪೈಕಿ 27,779(ಶೇ.99.83) ವಿದ್ಯಾರ್ಥಿಗಳು ಪಾಸ್ ಆಗಿದ್ದು, 47 ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಅದೇ ರೀತಿ 12ನೇ ತರಗತಿಗೆ ನೋಂದಾಯಿಸಿದ್ದ 2,364 ವಿದ್ಯಾರ್ಥಿಗಳ ಪೈಕಿ 2,352(ಶೇ.99.49) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 12 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

    10ನೇ ತರಗತಿಯಲ್ಲಿ ಪರಿಶಿಷ್ಟ ಜಾತಿ 1,734 ವಿದ್ಯಾರ್ಥಿಗಳು ಹಾಗೂ ಪರಿಶಿಷ್ಟ ಪಂಗಡದ 395 ವಿದ್ಯಾರ್ಥಿಗಳು, ಹಿಂದುಳಿದ ವರ್ಗಕ್ಕೆ ಸೇರಿದ 11,693 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಅದೇ ರೀತಿ 12ನೇ ತರಗತಿಯಲ್ಲಿ 79 ಪರಿಶಿಷ್ಟ ಜಾತಿ ಮತ್ತು 26 ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ 326 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.

    ಶಿಕ್ಷಕರ ಪ್ರೀತಿ, ಬೆಂಬಲ ಮತ್ತು ಮಾರ್ಗದರ್ಶನ ನೀಡಿದ್ದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನನ್ನ ಹೆತ್ತವರು ಮತ್ತು ಸ್ನೇಹಿತರ ಬೆಂಬಲವಿಲ್ಲದಿದ್ದರೆ ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲ. ಗ್ರೀನ್‌ವುಡ್ ಹೈ ನನಗೆ ವಿವಿಧ ನಾಯಕತ್ವದ ಪಾತ್ರಗಳ ಜೊತೆಗೆ ಹಲವಾರು ಆಂತರಿಕ ಮತ್ತು ಬಾಹ್ಯ ವೇದಿಕೆಗಳಲ್ಲಿ ಭಾಗವಹಿಸಲು ಅವಕಾಶಗಳನ್ನು ನೀಡಿರುವುದು ವಿವಿಧ ವಿಷಯಗಳ ಬಗ್ಗೆ ಹೆಚ್ಚಿನ ದೃಷ್ಟಿಕೋನ ಹೊಂದಲು ಸಹಾಯ ಮಾಡಿದೆ.
    – ಅದ್ರಿತಾ ತ್ರಿಪಾಠಿ, ಐಸಿಎಸ್‌ಇ ಟಾಪರ್ ಗ್ರೀನ್‌ವುಡ್ ಹೈ

    ನನ್ನ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿರುವುದಕ್ಕೆ ರೋಮಾಂಚನಗೊಂಡಿದ್ದೇನೆ. ಗ್ರೀನ್‌ವುಡ್ ಹೈನಲ್ಲಿರುವ ನನ್ನ ಶಿಕ್ಷಕರ ಹಾಗೂ ಪಾಲಕರ ಬೆಂಬಲ ಮತ್ತು ಪ್ರೇರಣೆಯಿಂದ ಟಾಪರ್ ಆಗಲು ಸಾಧ್ಯವಾಯಿತು.
    – ಮೈಥಿಲಿ ಅಯ್ಯರ್, ಐಎಸ್‌ಇ ಟಾಪರ್ ಗ್ರೀನ್‌ವುಡ್ ಹೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts