More

    ಸಂಸ್ಕೃತ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದ ಮುಸ್ಲಿಂ ವಿದ್ಯಾರ್ಥಿ!

    ಲಕ್ನೋ: ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಕೃಷಿ ಕಾರ್ಮಿಕ ಸಲಾವುದ್ದೀನ್ ಎಂಬವರ 17 ವರ್ಷದ ಮಗ ಮಹಮ್ಮದ್ ಇರ್ಫಾನ್ ಎಂಬಾತ ಉತ್ತರ ಪ್ರದೇಶ ಮಾಧ್ಯಮಿಕ ಸಂಸ್ಕೃತ ಶಿಕ್ಷಾ ಪರಿಷತ್ತು ಮಂಡಳಿಯ ಉತ್ತರ ಮಾಧ್ಯಮ (12ನೇ ತರಗತಿ) ಪರೀಕ್ಷೆಯಲ್ಲಿ 82.71% ಅಂಕಗಳನ್ನು ಗಳಿಸುವ ಮೂಲಕ ಅಗ್ರಸ್ಥಾನ ಪಡೆದಿದ್ದಾನೆ.

    ಭವಿಷ್ಯದಲ್ಲಿ ಸಂಸ್ಕೃತ ಅಧ್ಯಾಪಕನಾಗಬೇಕೆಂಬ ಕನಸನ್ನು ಹೊತ್ತಿರುವ ಇರ್ಫಾನ್, 10 ಮತ್ತು 12ನೇ ತರಗತಿಯ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಟಾಪ್ 20 ವಿದ್ಯಾರ್ಥಿಗಳ ಸಾಲಿನಲ್ಲಿರುವ ಏಕೈಕ ಮುಸ್ಲಿಂ ವಿದ್ಯಾರ್ಥಿಯಾಗಿದ್ದಾನೆ. ಇಲ್ಲಿನ ವಿದ್ಯಾರ್ಥಿಗಳಿಗೆ ಇತರ ವಿಷಯಗಳ ಜತೆ ಸಂಸ್ಕೃತ ಮತ್ತು ಸಾಹಿತ್ಯ ಕಡ್ಡಾಯ ವಿಷಯಗಳಾಗಿತ್ತು.

    ಮಗನ ಸಾಧನೆ ಕಂಡು ಖುಷಿಪಟ್ಟ ಇರ್ಫಾನ್ ತಂದೆ, ”ನನ್ನ ಮಗನನ್ನು ಸಂಪೂರ್ಣಾನಂದ ಸರ್ಕಾರಿ ಸಂಸ್ಕೃತ ಶಾಲೆಗೆ ಸೇರಿಸಿದ್ದೆ. ಯಾಕೆಂದರೆ ನಾನೊಬ್ಬ ದಿನಗೂಲಿ ಕೃಷಿ ಕಾರ್ಮಿಕನಾಗಿದ್ದು, 300 ರೂ. ಗಳಂತೆ ದೈನಂದಿನ ದಿನಗೂಲಿಯನ್ನು ಪಡೆಯುತ್ತೇನೆ. ಅದರಲ್ಲೂ ನನಗೆ ತಿಂಗಳ ಪೂರ್ತಿ ಕೆಲಸವಿರುವುದಿಲ್ಲ. ಇದ್ದಾಗಷ್ಟೇ ದುಡಿತ. ನನಗಿದ್ದ ಒಬ್ಬನೇ ಮಗ ಹೆಚ್ಚಿನ ವಿದ್ಯಾಭ್ಯಾಸ ಪಡೆಯಬೇಕೆಂಬುದು ನನ್ನ ಆಸೆಯಾಗಿತ್ತು. ಆದರೆ ನನ್ನ ಮಗಳನ್ನು ಖಾಸಗಿ ಶಾಲೆಗೆ ಸೇರಿಸಲು ತನ್ನ ಬಳಿ ಹಣ ಇರಲಲ್ಲವೆಂದು ಹಾಗಾಗಿ ತಾನು ಭರಿಸಬಹುದಾದ ಶುಲ್ಕವಿದ್ದ ಸಂಪೂರ್ಣಾನಂದ ಸರ್ಕಾರಿ ಸಂಸ್ಕೃತ ಶಾಲೆಗೆ ಸೇರಿಸಿದೆ. ಅಲ್ಲಿನ ವಾರ್ಷಿಕ ಶಾಲಾ ಶುಲ್ಕ 400-500 ರೂ. ಮಾತ್ರವಾಗಿತ್ತು”ಎಂದಿದ್ದಾರೆ.

    ಮಗನ ಕುರಿತು ಮುಂದುವರೆದು ಮಾತನಾಡಿದ ಸಲಾವುದ್ದೀನ್, ಇರ್ಫಾನ್​ ಚಿಕ್ಕಂದಿನಿಂದಲೂ ಓದಿನಲ್ಲಿ ಬಹಳ ಚುರುಕು. ಶಾಲೆಗೆ ಸೇರಿದ ಮೊದಲ ದಿನವೇ ಸಂಸ್ಕೃತ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದ್ದನು. ಅಷ್ಟೆ ಅಲ್ಲ ಯಾವುದೇ ವಿಷಯದಲ್ಲೂ ಆತ ಹಠ ಮಾಡುತ್ತಿರಲಿಲ್ಲ. ಮನೆಯ ಕಷ್ಟದ ಪರಿಸ್ಥಿತಿ, ಬಡತನವನ್ನು ಅರ್ಥಮಾಡಿಕೊಂಡು ಹೋಗುತ್ತಿದ್ದ. ಹಾಗೂ ನಮಗೆ ಸಿಮೆಂಟ್ ಮನೆ ಇರಲಿಲ್ಲ. ಆದರೆ ಒಂದು ತಿಂಗಳ ಹಿಂದೆ ಸರ್ಕಾರದ ಯೋಜನೆಯಡಿ, ನಾವು ‘ಪಕ್ಕಾ ಮನೆ’ ಕಟ್ಟಲು ಹಣವನ್ನು ಪಡೆದಿದ್ದೇವೆ ಎಂದರು.

    “ಜನರು ಭಾಷೆಯ ಜತೆ ಧರ್ಮವನ್ನು ಯಾಕೆ ಮಧ್ಯದಲ್ಲಿ ತರುತ್ತಾರೋ ನನಗೆ ಗೊತ್ತಿಲ್ಲ. ಒಬ್ಬ ಹಿಂದು ಉರ್ದು ಭಾಷೆಯನ್ನು ಕಲಿಯಬಹುದು. ಅದೇ ರೀತಿ ಒಬ್ಬ ಮುಸ್ಲಿಂ ಸಂಸ್ಕೃತದಲ್ಲಿ ಸಾಧನೆ ಮಾಡಬಹುದು. ಇವೆಲ್ಲವೂ ಅವರವರ ಆಯ್ಕೆಯ ವಿಚಾರ. ನಾನು ಪದವೀಧರನಾಗಿದ್ದೇನೆ ಆದಕಾರಣ ಶಿಕ್ಷಣದ ಮಹತ್ವವನ್ನು ಅರಿತುಕೊಂಡಿದ್ದೇನೆ” ಎಂದರು.

    ಇದನ್ನೂ ಓದಿ: ಮನ್ ಕೀ ಬಾತ್​ಗೆ ಗೈರಾದ ವಿದ್ಯಾರ್ಥಿಗಳಿಗೆ ದಂಡ!

    ನಾನಂತೂ ನನ್ನ ಮಗನನ್ನು ಯಾವ ವಿಷಯದಲ್ಲೂ ತಡೆಯಲಿಲ್ಲ. ಈಗ ನನ್ನ ಮಗ ಇರ್ಫಾನ್​ ಬಹಳ ಅಚ್ಚುಕಟ್ಟಾಗಿ ಸಂಸ್ಕೃತವನ್ನು ಮಾತನಾಡುತ್ತಾನೆ ಹಾಗೂ ಬರೆಯುತ್ತಾನೆ. ಉತ್ತರ ಮಾಧ್ಯಮ 12 ನೇ ತರಗತಿಯಲ್ಲಿ ಒಟ್ಟು 13,738 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆದಿದ್ದು, ಅವರುಗಳ ಪೈಕಿ ನನ್ನ ಮಗ ಟಾಪ್​ ಅಂಕ ಪಡೆದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.

    ಉತ್ತರ ಪ್ರದೇಶ ಮಾಧ್ಯಮಿಕ ಸಂಸ್ಕೃತ ಶಿಕ್ಷಾ ಪರಿಷತ್ತು ಬುಧವಾರ (ಮೇ 3) ಪೂರ್ವ ಮಾಧ್ಯಮ (9 ಮತ್ತು 10 ನೇ ತರಗತಿ), ಮತ್ತು ಉತ್ತರ ಮಾಧ್ಯಮ (11 ಮತ್ತು 12 ನೇ ತರಗತಿ) ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಿತ್ತು. ಈ ಪೈಕಿ ಉತ್ತರ ಮಾಧ್ಯಮ 12 ನೇ ತರಗತಿಯಲ್ಲಿ 13,738 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಮತ್ತು 12,243 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮಾಧ್ಯಮ 11 ನೇ ತರಗತಿಯಲ್ಲಿ ಒಟ್ಟು 13,620 ಪರೀಕ್ಷಾರ್ಥಿಗಳಲ್ಲಿ 11,579 ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

    ಭಾರತದ ಚಿನ್ನದ ಬೇಡಿಕೆ ಶೇ.17 ಇಳಿಕೆ: ವಿಶ್ವ ಚಿನ್ನ ಮಂಡಳಿ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts