More

    ಹಳ್ಳಿಕಾರ ಮಠ ಸ್ಥಾಪನೆಗೆ ಚಿಂತನೆ

    ಚಿಕ್ಕಮಗಳೂರು: ಒಂದು ಜನಾಂಗದ ಸರ್ವಾಂಗೀಣ ಅಭಿವೃದ್ಧಿ ತನ್ನಿಂದ ತಾನೆ ಆಗುವುದಿಲ್ಲ. ನಿದಿರ್ಷ್ಟ ಗುರಿ ಮತ್ತು ಅದನ್ನು ಬೆಂಬಲಿಸುವ ಗುರು ಇರಬೇಕು ಎಂದು ಶ್ರೀ ಹಳ್ಳಿಕಾರ ಮಠ ಟ್ರಸ್ಟ್ ಅಧ್ಯಕ್ಷ ನಾಗಯ್ಯ ಹೇಳಿದರು.

    ಹಿರೇಮಗಳೂರು ಶ್ರೀದೇವಿ ಭವನದಲ್ಲಿ ಭಾನುವಾರ ಜಿಲ್ಲಾ ಹಳ್ಳಿಕಾರ ಸಂಘ ಹಮ್ಮಿಕೊಂಡಿದ್ದ 3ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

    ಯಾವುದೆ ಸಮುದಾಯದಲ್ಲಿ ಮಠ ಸ್ಥಾಪನೆಯಾಗಿ ಅಲ್ಲಿನ ಗುರುಗಳು ಒಂದು ಕರೆ ನೀಡಿದರೆ ಸಮಾಜವೇ ಅವರ ಹಿಂದೆ ನಿಲ್ಲುತ್ತದೆ ಹಾಗೂ ಸರ್ಕಾರದಿಂದ ಸಮುದಾಯದ ಅಭಿವೃದ್ಧಿಗೆ ಸಿಗಬೇಕಾದ ಸವಲತ್ತುಗಳು ಸ್ವಾಮೀಜಿಗಳ ಮೂಲಕ ಪಡೆಯಲು ಸಹಕಾರಿಯಾಗುತ್ತದೆ ಎಂದರು.

    ಹಳ್ಳಿಕಾರರು ಈವರೆಗೂ ಸರ್ಕಾರದ ಸವಲತ್ತು ಪಡೆದುಕೊಂಡಿಲ್ಲ. ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕಾದರೆ ಪೀಠ ಸ್ಥಾಪನೆಯೊಂದಿಗೆ ಸ್ವಾಮೀಜಿಯನ್ನು ನೇಮಿಸಿ ರಾಜ್ಯದಲ್ಲಿರುವ ಸಮುದಾಯವನ್ನು ಒಗ್ಗೂಡಿಸುವ ಅಗತ್ಯವಿದೆ. ವಿದ್ಯಾಸಂಸ್ಥೆ ಹಾಗೂ ದೇವಾಲಯಗಳನ್ನು ಸ್ಥಾಪಿಸಿದರೆ ಮಕ್ಕಳ ಭವಿಷ್ಯಕ್ಕೆ ಹಾಗೂ ಧಾರ್ವಿುಕ ಕೆಲಸ ಕಾರ್ಯಗಳಿಗೆ ಸಹಕಾರಿಯಾಗುತ್ತದೆ ಎಂಬ ಆಲೋಚನೆಯೂ ಇದೆ ಎಂದು ಹೇಳಿದರು.

    ಜಿಲ್ಲಾಧ್ಯಕ್ಷ ಸೋಮಶೇಖರ್ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆ, ಸಭೆ ಸಮಾರಂಭಕ್ಕಾಗಿ ಹಳ್ಳಿಕಾರ ಭವನ ಅವಶ್ಯವಿದೆ. ಸಂಘಕ್ಕೆ ನಿವೇಶನ ಮಾಡುವ ಉದ್ದೇಶವಿದೆ. ಸಿಎ ಸೈಟ್ ಇರುವ ಬಗ್ಗೆಯೂ ಮಾಹಿತಿಯಿದೆ. ಸರ್ಕಾರದ ನಿಯಮಾನುಸಾರ ಪಡೆಯಲು ಎಲ್ಲರೂ ಸಹಕರಿಸಬೇಕು ಎಂದರು.

    ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿಯ 20 ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ರೂ. ವಿದ್ಯಾರ್ಥಿ ವೇತನದೊಂದಿಗೆ ಪುರಸ್ಕಾರ, ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.

    ಹಿರಿಯ ಮುಖಂಡ ಶ್ರೀಧರ್, ಯುವಕ ಸಂಘದ ರಾಜ್ಯಾಧ್ಯಕ್ಷ ಸತೀಶ್, ಗೌರವಾಧ್ಯಕ್ಷ ವಸಂತಕುಮಾರ್, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ, ಜಿಲ್ಲಾ ಉಪಾಧ್ಯಕ್ಷ ಸುಭಾಷ್, ಪ್ರಧಾನ ಕಾರ್ಯದರ್ಶಿ ಮಲ್ಲೇಶ್, ಖಜಾಂಚಿ ನಟರಾಜ್, ಶ್ರೀನಿವಾಸ್, ದ್ವಾರಕೀಶ್, ಯತೀಶ್, ಮೋಹನ್, ಬ್ಯಾಟೇಗೌಡ, ಚಂದ್ರಶೇಖರ್, ಉಪನ್ಯಾಸಕಿ ಪದ್ಮಾಲತಾ ಯತೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts