More

    ಜೆಡಿಎಸ್​ ತೊರೆಯಲಿದ್ದಾರೆ ಹಲವು ಶಾಸಕರು… ತಲ್ಲಣ ಮೂಡಿಸಿದೆ ಈ ಹೇಳಿಕೆ

    ತುಮಕೂರು: ಬಿಜೆಪಿ‌ ಜೊತೆ ಜೆಡಿಎಸ್ ಕೈ ಜೋಡಿಸಿದ್ರೆ ಜೆಡಿಎಸ್​ನ ಕೆಲ ಶಾಸಕರು ಪಕ್ಷ ತೊರೆಯುತ್ತಾರಾ? ಎಂಬ ಪ್ರಶ್ನೆ‌ ಮೂಡಿದೆ.

    ಗಾಗಲೇ ಕಾಂಗ್ರೆಸ್​ ಸೇರಲು ಜೆಡಿಎಸ್​ ಮನೆಯಿಂದ ಒಂದು ಕಾಲು ಹೊರ ಇಟ್ಟಿರುವ ಗುಬ್ಬಿ ಶಾಸಕ ಎಸ್​.ಆರ್​. ಶ್ರೀನಿವಾಸ್, ಬಿಜೆಪಿ ನಿಲುವುಗಳನ್ನು ವಿರೋಧಿಸಿದವನು. ವಾಮ ಮಾರ್ಗದಲ್ಲಿ ಅಧಿಕಾರ ಅನುಭವಿಸುವ ಆಸೆ ನನಗಿಲ್ಲ. ಕುಮಾರಸ್ವಾಮಿ ನಿಲುವಿಗೆ ಅನೇಕ ನಮ್ಮ ಪಕ್ಷದ ಶಾಸಕರ ವಿರೋಧವಿದೆ. ಇದರಲ್ಲಿ ನನ್ನ ಸ್ನೇಹಿತರೂ ಇದ್ದಾರೆ. ಅದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಎಚ್ಚರಿಸಿದ್ದಾರೆ. ಈ ಸ್ಫೋಟಕ ಹೇಳಿಕೆ ಇಂತಹದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿದ್ದು, ಜೆಡಿಎಸ್​ಗೆ ತಲ್ಲಣ ಮೂಡಿಸಿದೆ. ಇದನ್ನೂ ಓದಿರಿ ತುಮಕೂರಲ್ಲಿ ದೇವೇಗೌಡ ಸೋತಿದ್ದು ಏಕೆ ಗೊತ್ತಾ? ಜೆಡಿಎಸ್​ ಶಾಸಕರೇ ಬಿಚ್ಚಿಟ್ಟ ಸತ್ಯ ಇದು…

    ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್​ ಶಾಸಕ ಶ್ರೀನಿವಾಸ್, ಕೆ.ಎನ್. ರಾಜಣ್ಣ ನಮಗೆ ಗಾಡ್​ಫಾದರ್ ಇದ್ದಂಗೆ. ಇವತ್ತು ಮನೆಗೆ ಕೆರೆದರು ಹಾಗಾಗಿ ಬಂದೆ ಎಂದರು. ಬಿಜೆಪಿ ಜತೆ ಜೆಡಿಎಸ್​ ಕೈಜೋಡಿಸಿದರೆ ಹಲವು ಶಾಸಕರು ಪಕ್ಷ ತೊರೆಯಲಿದ್ದಾರೆ. ಈ ಮನಸ್ಥಿತಿ ಜೆಡಿಎಸ್​ನ ಹಲವರಿಗೆ ಇದೆ. ಅಸಮಾಧಾನ ಇದೆ ಎಂದಾಗ ಅನೇಕರು ಪಕ್ಷ ತೊರೆಯುವ ಬಗ್ಗೆ ಚರ್ಚೆಯಾಗಿದೆ ಅಂತಲೇ ಅರ್ಥ. ಕೆಲವರು ಈಗಾಗಲೇ ತಮ್ಮ ಅಭಿಪ್ರಾಯ ಹೇಳಿದ್ದಾರೆ ಎಂದರು.

    ಇನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ಸೋಲಿಸಲು ಬಿಜೆಪಿ ಜತೆ ಜೆಡಿಎಸ್​ಗೆ ಒಳ ಒಪ್ಪಂದ ಆಗಿದ್ದು ಸತ್ಯ ಎನ್ನುವ ಮೂಲಕ ಸಿದ್ದರಾಮಯ್ಯರ ಆರೋಪಕ್ಕೆ ದ್ವನಿಗೂಡಿಸಿದ ಜೆಡಿಎಸ್​ ಶಾಸಕ ಶ್ರೀನಿವಾಸ್​, ನಾನು ಈಗಲೂ ಜೆಡಿಎಸ್ ನಲ್ಲಿದ್ದೇನೆ. ಆದರೆ, ಎರಡೂವರೆ ವರ್ಷದವರೆಗೆ ನಿರ್ಲಿಪ್ತರಾಗಿದ್ದು, ಆ ನಂತರ ಕಾರ್ಯಕರ್ತರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವೆ ಎನ್ನುವ ಮೂಲಕ ಪಕ್ಷ ತೊರೆಯುವ ಬಗ್ಗೆ ಸುಳಿವು ಕೊಟ್ಟರು.

    ಗಂಡನ ರಾಸಲೀಲೆ ವೃತ್ತಾಂತ ಬಿಚ್ಚಿಟ್ಟ ಹೆಂಡತಿ! ಈತನ ಚಾನ್ಸ್​ ಆಸೆಗೆ ಬಲಿಯಾದ್ರೆ ಬದುಕೇ ನರಕ…

    ಜೆಡಿಎಸ್​ ಮನೆಗೆ ಬಂದ ಸಿ.ಎಂ.ಇಬ್ರಾಹಿಂ! ನಾನು ಮತ್ತು ದೇವೇಗೌಡರು ತಂದೆ-ಮಗ ಇದ್ದಂತೆ…

    ನಾನು ತುಂಬಾ ತಪ್ಪು ಮಾಡುತ್ತಿರುವೆ, ನೀವೆಲ್ಲರೂ ಬಂದು ನನ್ನ ಶವದ ಮೇಲೆ ಮಣ್ಣು ಹಾಕಿ… ಇದೇ ನನ್ನ ಕೋರಿಕೆ

    ಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts