More

    ನಾಲ್ಕು ತಿಂಗಳ ಬಾಕಿ ವೇತನಕ್ಕಾಗಿ ಅಕ್ಷರ ದಾಸೋಹ ನೌಕರರ ಪ್ರತಿಭಟನೆ

    ದೇವದುರ್ಗ: ಅಕ್ಷರ ದಾಸೋಹ ಯೋಜನೆ ನೌಕರರಿಗೆ ಬಾಕಿ ಇರುವ ಐದು ತಿಂಗಳ ವೇತನ ನೀಡುವಂತೆ ಒತ್ತಾಯಿಸಿ ಪಟ್ಟಣದ ತಾಪಂ ಕಚೇರಿ ಮುಂದೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು ಸಂಯೋಜಿತ) ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಅಸಮರ್ಪಕ ವೇತನ, ಅನಗತ್ಯ ಕಿರುಕುಳದಿಂದ ನೌಕರರು ಕೆಲಸ ನಿರ್ವಹಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ಹಾಗೂ ಮೇ ತಿಂಗಳ 15 ದಿನದ ವೇತನ ಬಾಕಿ ನೀಡಬೇಕು. ಜನವರಿಯಿಂದ ಹೆಚ್ಚಳವಾದ ವೇತನ ಬಾಕಿಯಿದ್ದು, ತಕ್ಷಣ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು ಉತ್ತಮ ಆಹಾರ ಧಾನ್ಯವನ್ನು ಸಮಯಕ್ಕೆ ಸರಿಯಾಗಿ ಪೂರೈಕೆ ಮಾಡಬೇಕು. ಮುಖ್ಯಶಿಕ್ಷಕರು ಹಾಗೂ ಎಸ್ಡಿಎಂಸಿ ಕಿರುಕುಳ ತಪ್ಪಿಸಬೇಕು. ಅಡುಗೆಯ ಎಲ್ಲ ಜವಾಬ್ದಾರಿ ಮುಖ್ಯ ಅಡುಗೆಯವರಿಗೆ ನೀಡಬೇಕು ಎಂದು ಒತ್ತಾಯಿಸಿದರು.

    ಪ್ರಮುಖರಾದ ಪದ್ಮಾ, ಲಕ್ಷ್ಮೀ, ಮಂಜುಳಾ, ಸಂಗಮ್ಮ, ಪರ್ವಿನ್, ಮುತ್ತಮ್ಮ, ಜಿ.ಎಚ್.ವಿಶ್ವನಾಥ, ಮೌನೇಶ ಮಕ್ತೂಮ್ ಇತರರಿದ್ದರು. ಇದಕ್ಕೂ ಮುನ್ನ ಎಪಿಎಂಸಿ ಆವರಣದಿಂದ ತಾಪಂ ಕಚೇರಿವರೆಗೆ ರ‌್ಯಾಲಿ ನಡೆಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts