More

    ಆಡಳಿತಸ ರ್ಕಾರಗಳಿಂದ ಕಾರ್ಮಿಕರಿಗೆ ನಿರಂತರ ಶೋಷಣೆ

    ದೇವದುರ್ಗ: ಆಡಳಿತ ನಡೆಸಿದ ಸರ್ಕಾರಗಳು ಬಂಡವಾಳಗಾರರ ಹಾಗೂ ಕಾರ್ಪೋರೇಟ್ ಕಂಪನಿಗಳ ಗುಲಾಮರಾಗಿ ದುಡಿಯವ ವರ್ಗ ಹಾಗೂ ಕಾರ್ಮಿಕರನ್ನು ನಿರಂತರ ಶೋಷಣೆ ಮಾಡುತ್ತಾ ಬರುತ್ತಿವೆ. ಆಧುನೀಕ ಯುಗದಲ್ಲೂ ಕಾರ್ಮಿಕರು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಸಿಐಟಿಯು ತಾಲೂಕು ಸಂಚಾಲಕ ಗಿರಿಯಪ್ಪ ಪೂಜಾರಿ ಆರೋಪಿಸಿದರು.

    ಪಟ್ಟಣದ ಎಪಿಎಂಸಿ ಆವರಣದ ಹಮಾಲಿ ಕಾರ್ಮಿಕರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಸಿಐಟಿಯು ಧ್ವಜಾರೋಹಣ ನೆರವೇರಿಸಿ ಸೋಮವಾರ ಮಾತನಾಡಿದರು. ಬಿಜೆಪಿ ಸರ್ಕಾರ ಬಂದ ನಂತರ ಕಾರ್ಮಿಕರ ಶೋಷಣೆ ಮತ್ತಷ್ಟು ಹೆಚ್ಚಾಗಿದೆ. ಕಾರ್ಮಿಕರ ಪರವಾಗಿದ್ದ ಕಾಯ್ದೆ, ಕಾನೂನುಗಳನ್ನು ಮೊಟಕುಗೊಳಿಸಲಾಗಿದೆ ಎಂದು ದೂರಿದರು.

    ಇದನ್ನೂ ಓದಿ: ದೇವರು, ಧರ್ಮದ ಹೆಸರಲ್ಲಿ ಶೋಷಣೆ : ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿಕೆ

    ಕನಿಷ್ಠ ವೇತನ ಕಾಯ್ದೆ ತೆಗೆದು ದಿನಗೂಲಿ-ಹೊರಗುತ್ತಿಗೆ ಪದ್ಧತಿ ಜಾರಿ ಮಾಡಲಾಗಿದೆ. ಬೋನಸ್, ಗ್ರಾಚ್ಯೂಟಿ, ಭವಿಷ್ಯ ನಿಧಿ ಕಾಯ್ದೆ ತೆಗೆದು, ಹೊಸ ಪಿಂಚಣಿ ಯೋಜನೆ ಜಾರಿಗಳಿಸಿ ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡುತ್ತಿದ್ದಾರೆ. ಎಪಿಎಂಸಿ, ಕೃಷಿ ವಲಯ ಹಾಗೂ ಸಾರ್ವಜನಿಕರ ವಲಯಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂದು ಆಪಾದಿಸಿದರು.

    ಕಾರ್ಮಿಕರ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು. ಅಂಗನವಾಡಿ ನೌಕರರ ಸಂಘಟನೆ ಅಧ್ಯಕ್ಷೆ ರಂಗಮ್ಮ ಅನ್ವರ್, ಜನವಾದಿ ಮಹಿಳಾ ಸಂಘಟನೆ ಸದಸ್ಯೆ ಶೇಖಮ್ಮ ದೇಸಾಯಿ, ಜಿ.ಬಸವರಾಜ, ಶಿವಪ್ಪ ಬಲ್ಲಿದವ್, ಮುಖಂಡರಾದ ಯೂಸೂಫ್ ಗ್ವಾಡಿಕರ್, ಶೋಭಾ, ರೇಣುಕಾ, ಸೂಫ್ ನಾಗೂಂಡಿ, ಪಂಚಯ್ಯ, ರಮಾದೇವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts