More

    ಪಿಎಫ್​ ಗ್ರಾಹಕರಿಗೆ ಸಿಗಲಿದೆ ಏಳು ಲಕ್ಷ ರೂ. ವಿಮಾ ಹಣ..!

    ನವದೆಹಲಿ: ಕರೊನಾ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ನೆರವಾಗಲು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ಠೇವಣಿ ಆಧಾರಿತ ವಿಮಾ ಯೋಜನೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿದೆ.

    ಭವಿಷ್ಯ ನಿಧಿ ಸಂಸ್ಥೆಯ ಕೇಂದ್ರೀಯ ಮಂಡಳಿ ಟ್ರಸ್ಟಿಗಳು ಬುಧವಾರ ನಡೆಸಿದ ಸಭೆಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಅದರಂತೆ, ಠೇವಣಿ ಆಧಾರಿತ ವಿಮಾ ಯೋಜನೆ (ಎಂಪ್ಲಾಯೀಸ್​ ಡಿಪಾಸಿಟ್​ ಲಿಂಕ್ಡ್​ ಇನ್ಶುರೆನ್ಸ್​- ಈಡಿಎಲ್​ಐ) ಅನ್ವಯ ನೀಡಲಾಗುತ್ತಿದ್ದ ಮೊತ್ತವನ್ನು 7 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ.

    ಇದನ್ನೂ ಓದಿ; ರೇಷ್ಮೆ ಬೆಳೆಗಾರರಿಗೆ ಸಿಹಿ ಸುದ್ದಿ; ಚೀನಾ ಸಿಲ್ಕ್​ ಬ್ಯಾನ್​…? ಸ್ವಾವಲಂಬನೆಗೆ ಸೂತ್ರ…! 

    ಈ ಮೊದಲು ಈ ಮೊತ್ತ 6 ಲಕ್ಷ ರೂ.ಗಳಾಗಿತ್ತು. ಇದನ್ನು ಏಳು ಲಕ್ಷ ರೂ.ಗಳಿಗೆ ಏರಿಕೆ ಮಾಡಿ ವಿಮಾ ಯೋಜನೆಯ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದಕ್ಕೆ ಮಂಡಳಿ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ತಿಳಿಸಿದೆ.

    ಈಡಿಎಲ್​ಐ ಭವಿಷ್ಯ ನಿಧಿ ಕಾರ್ಮಿಕರಿಗೆ ನೀಡಲಾಗುವ ಕಡ್ಡಾಯ ವಿಮಾ ಯೋಜನೆಯಾಗಿದೆ. ಆದರೆ, ಇದಕ್ಕೆ ಕಾರ್ಮಿಕರು ವಂತಿಗೆ ನೀಡಬೇಕಿಲ್ಲ. ಉದ್ಯೋಗದಾತರು ಹಾಗೂ ಕೇಂದ್ರ ಸರ್ಕಾರ ಈ ಮೊತ್ತ ಭರಿಸುತ್ತದೆ. ಭವಿಷ್ಯ ನಿಧಿ ಗ್ರಾಹಕರು ನೈಸರ್ಗಿಕ ಕಾರಣ, ಕಾಯಿಲೆ ಅಥವಾ ಅಪಘಾತಗಳಲ್ಲಿ ಮೃತಪಟ್ಟರೆ ಅವರ ಕುಟುಂಬ ಅಥವಾ ನಾಮ ನಿರ್ದೇಶಿತರಿಗೆ ಪರಿಹಾರ ಮೊತ್ತ ನೀಡಲಾಗುತ್ತದೆ.

    ಇದನ್ನೂ ಓದಿ; ಎದೆಹಾಲಿಗೆ ಮುಗಿಬಿದ್ದ ಪುರುಷರು; ತೂಕ ಇಳಿಕೆ, ಶಕ್ತಿ ವರ್ಧನೆ ಕಾರಣ..! ತಜ್ಞರು ಹೇಳೋದೇನು? 

    ಈ ಮೊತ್ತ ಕಾರ್ಮಿಕರ ಸಂಬಳವನ್ನು ಆಧರಿಸಿರುತ್ತದೆ. ಕಳೆದ 12 ತಿಂಗಳಲ್ಲಿ ಪಡೆದ ಸರಾಸರಿ ಸಂಬಳದ 30 ಪಟ್ಟು ಅಥವಾ ಗರಿಷ್ಠ 7 ಲಕ್ಷ ರೂ.ಗಳನ್ನು ಪಾವತಿ ಮಾಡಲಾಗುತ್ತದೆ.  ಹಿಂದಿನ 12 ತಿಂಗಳಲ್ಲಿ ಒಂದಕ್ಕಿಂತ ಹೆಚ್ಚು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೂ ಕೂಡ ಪರಿಗಣಿಸಲಾಗುತ್ತದೆ. ಪರಿಹಾರದ ಕನಿಷ್ಠ ಮೊತ್ತ 2.5 ಲಕ್ಷ ರೂ. ಆಗಿದೆ.

    ಇಳಿಕೆಯಾಯ್ತಾ ಪಿಎಫ್​ ಬಡ್ಡಿದರ? ಈ ಬಾರಿ ಸಿಗೋದು ಎಷ್ಟು? ಸಭೆಯ ನಿರ್ಧಾರವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts