More

    ಮಂಗಳೂರಿನಲ್ಲಿ ಅಧಿಕ ಮಲೇರಿಯಾ

    ಮಂಗಳೂರು: ಕೋವಿಡ್ ಎರಡನೇ ಅಲೆ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂೆ ಮತ್ತಿತರ ಕಾಯಿಲೆಗಳ ಬಗ್ಗೆ ಜನರು ಆತಂಕ ಪಡುವಂತಾಗಿದೆ. ರಾಜ್ಯದ ಇತರ ಜಿಲ್ಲೆಗಳ ಅಂಕಿ ಅಂಶಗಳಿಗೆ ಹೋಲಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಮಲೇರಿಯಾ ಪ್ರಕರಣಗಳಿವೆ.
    ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಿನಿಂದ ಮಲೇರಿಯಾ ಏರಿಕೆಯಾಗುತ್ತಿದೆ. ಜೂನ್ ತಿಂಗಳ ಅಂತ್ಯದ ವೇಳೆಗೆ 312 ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ 285 ಪ್ರಕರಣಗಳಿವೆ.

    ಜಿಲ್ಲೆಯಲ್ಲಿ 2019ರಲ್ಲಿ 2,797 (ಪಾಲಿಕೆ ವ್ಯಾಪ್ತಿಯಲ್ಲಿ 2,593) ಹಾಗೂ 2020ರಲ್ಲಿ 1397 (ಪಾಲಿಕೆ ವ್ಯಾಪ್ತಿ 1306) ಮಲೇರಿಯಾ ಪ್ರಕರಣ ದಾಖಲಾಗಿತ್ತು. ಪ್ರತಿ ವರ್ಷವೂ ಪಾಲಿಕೆ ವ್ಯಾಪ್ತಿಯಲ್ಲೇ ಮಲೇರಿಯಾ ಪ್ರಕರಣ ಹೆಚ್ಚಾಗಿ ದಾಖಲಾಗುತ್ತಿರುವುದು ಅಚ್ಚರಿ ಉಂಟು ಮಾಡಿದೆ.
    2019ರಲ್ಲಿ ಜಿಲ್ಲೆಯಲ್ಲಿ 1539 ಡೆಂೆ ಪ್ರಕರಣ ದಾಖಲಾಗಿ, 20ಕ್ಕಿಂತಲೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಮಂಗಳೂರು ನಗರದಲ್ಲಿ ವ್ಯಾಪಕವಾಗಿದ್ದರಿಂದ ವೈದ್ಯರು, ಆರೋಗ್ಯ ಕಾರ್ಯಕರ್ತರು, ಅಧಿಕಾರಿ ವರ್ಗದವರು, ಸಾರ್ವಜನಿಕರು ಸಮರೋಪಾದಿಯಲ್ಲಿ ಕೆಲಸ ಮಾಡಿದ್ದರು. 2020ರಲ್ಲಿ 239 ಪ್ರಕರಣಗಳಷ್ಟೇ ದಾಖಲಾಗಿದ್ದವು. ಈ ಬಾರಿ ಜೂನ್ ಅಂತ್ಯದ ವೇಳೆಗೆ 186 ಪ್ರಕರಣ ಪತ್ತೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಡೆಂೆ ಪ್ರಕರಣಗಳು ಪತ್ತೆಯಾಗುತ್ತಿವೆ.

    ಗ್ರಾಮ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಡೆಂೆ, ಮಲೇರಿಯಾ ಮೊದಲಾದ ಸಾಂಕ್ರಾಮಿಕ ರೋಗ ತಡೆಗಟ್ಟಲು ಕಾರ್ಯಪಡೆ ರಚಿಸಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್ ತಿಳಿಸಿದ್ದಾರೆ.

    ಈ ವರ್ಷ ಏಪ್ರಿಲ್, ಮೇ ತಿಂಗಳಿನಲ್ಲಿ ಬಿಟ್ಟು ಬಿಟ್ಟು ಮಳೆ ಸುರಿದ ಕಾರಣ ಡೆಂೆ, ಮಲೇರಿಯಾ ಸೊಳ್ಳೆ ಉತ್ಪತ್ತಿಯಾಗಿ ಪ್ರಕರಣ ಹೆಚ್ಚಾಗಿದೆ. ಯಾವುದೇ ರೀತಿಯ ಜ್ವರದ ಲಕ್ಷಣ ಕಂಡು ಬಂದರೆ ಡೆಂೆ, ಮಲೇರಿಯಾ, ಕರೊನಾ ಪರೀಕ್ಷೆ ನಡೆಸಲಾಗುತ್ತದೆ. ಜನರು ನಿರ್ಲಕ್ಷೃ ವಹಿಸದೆ ಆಸ್ಪತ್ರೆಗೆ ಬಂದು ಅಥವಾ ಮೊಬೈಲ್ ವಾಹನದ ವ್ಯವಸ್ಥೆಯಲ್ಲಿ ತಪಾಸಣೆ ಮಾಡಿಕೊಳ್ಳಬೇಕು.
    – ಡಾ.ಕಿಶೋರ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ, ದಕ್ಷಿಣ ಕನ್ನಡ

    ಉಡುಪಿಯಲ್ಲಿ ಡೆಂೆ ಪ್ರಕರಣ ಹೆಚ್ಚಳ
    ಉಡುಪಿ: ಸದ್ಯ ಮಲೇರಿಯಾ ನಿಯಂತ್ರಣದಲ್ಲಿದ್ದು, ಡೆಂೆ ಜ್ವರ ಪ್ರಕರಣಗಳು ಹೆಚ್ಚುತ್ತಿವೆ. ಜೂನ್ ತಿಂಗಳಲ್ಲಿ 150ಕ್ಕೂ ಅಧಿಕ ಡೆಂೆ ಪ್ರಕರಣಗಳು ವರದಿಯಾಗಿವೆ. ಮಳೆ ನಿರಂತರ ಸುರಿದರೆ ಸೊಳ್ಳೆ ಉತ್ಪತ್ತಿಗೆ ಅವಕಾಶವಿರುವುದಿಲ್ಲ. ಮಳೆ-ಬಿಸಿಲಿನ ವಾತಾವರಣ ಹೆಚ್ಚಿದೆ. 5-6 ದಿನ ಒಂದು ಕಡೆ ನೀರು ನಿಂತರೆ ಅಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತದೆ. ಡೆಂೆ ಹರಡುವ ಈಡಿಸ್ ಈಜಿಪ್ಟಿ ಸೊಳ್ಳೆ ಬೊಗಸೆ ನೀರಿನಲ್ಲಿ ಲಕ್ಷಾಂತರ ಸೊಳ್ಳೆ ಉತ್ಪತ್ತಿ ಮಾಡುತ್ತದೆ. ಮನೆಯ ಒಳಗಿನ ರೆಫ್ರಿಜರೇಟರ್ ಕೆಳಭಾಗ, ಕೂಲರ್‌ನಲ್ಲಿಯೂ ಈ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ ಎನ್ನುತ್ತಾರೆ ವೈದ್ಯರು.

    ಕಳೆದ ಆರು ತಿಂಗಳಲ್ಲಿ 10 ಮಲೇರಿಯಾ ಪ್ರಕರಣಗಳಷ್ಟೇ ವರದಿಯಾಗಿವೆ. ಆದರೆ, ಜನವರಿಯಿಂದ ಜೂನ್‌ವರೆಗೆ ಜಿಲ್ಲೆಯಲ್ಲಿ 188 ಡೆಂೆ ಪ್ರಕರಣ ಪತ್ತೆಯಾಗಿದೆ. ಇದರಲ್ಲಿ 30ಕ್ಕೂ ಹೆಚ್ಚಿನ ಪ್ರಕರಣ ಹೊರ ಜಿಲ್ಲೆಯದು. ಕಳೆದ ವರ್ಷ 12 ತಿಂಗಳಲ್ಲಿ 214 ಡೆಂೆ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 139 ಜಿಲ್ಲೆಯದ್ದು. ಜೂನ್‌ವರೆಗೆ 92 ಪ್ರಕರಣ ಪತ್ತೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 6 ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಡೆಂೆ ಪ್ರಕರಣ ದುಪ್ಪಟ್ಟಾಗಿದೆ.

    ಎಲ್ಲೆಲ್ಲಿ ಡೆಂೆ ಪ್ರಕರಣ ಹೆಚ್ಚು?: ಕಳೆದೊಂದು ತಿಂಗಳಲ್ಲಿ ಜಿಲ್ಲೆಯ 33 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಡೆಂೆ ಪ್ರಕರಣ ಗುರುತಿಸಲ್ಪಟ್ಟಿದೆ. ಉಡುಪಿ ನಗರ, ಮೂಡಬೆಟ್ಟು, ಕಾಪು, ಅಜೆಕಾರು, ಈದು, ಹಿರಿಯಡ್ಕ ಮತ್ತು ಹೆಬ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಕರಣ ದೃಢಪಟ್ಟಿದೆ.

    ಡೆಂೆ ಪ್ರಕರಣ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಡೆಂೆ ಜ್ವರವನ್ನು ನಿರ್ಲಕ್ಷೃ ಮಾಡದೆ ತಕ್ಷಣ ಚಿಕಿತ್ಸೆ ಪಡೆಯಬೇಕು. ಕಾರ್ಮಿಕ ಕಾಲೊನಿ ಶೆಡ್‌ಗಳ ಬಳಿ, ಮಲ್ಪೆ ಮೀನುಗಾರಿಕಾ ಬಂದರು, ಜಿಲ್ಲೆಯಲ್ಲಿರುವ ಕಲ್ಲು ಗಣಿಗಾರಿಕೆಯ ಗುಂಡಿಗಳಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಕೆಮಿಕಲ್, ಜೈವಿಕ ವಸ್ತುಗಳನ್ನು ಸಿಂಪಡಿಸಲಾಗುತ್ತಿದೆ.
    – ಡಾ. ಪ್ರಶಾಂತ್ ಭಟ್, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts