More

    ಡೆಂಗ್ಯೂಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಬ್ಬರ ಬಲಿ!

    ಕಾರವಾರ: ರಾಜ್ಯಾದ್ಯಂತ ದಿನೇದಿನೆ ಡೆಂಘೀ ಜ್ವರ ಪ್ರಕರಣಗಳು ಏರಿಕೆಯಾಗಿದ್ದು, ಆರೋಗ್ಯ ಇಲಾಖೆ ಪ್ರಕಾರ ಕಳೆದ 20 ದಿನಗಳಲ್ಲಿ 1,404 ಮಂದಿಗೆ ಜ್ವರ ದೃಢಪಟ್ಟಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂಗೆ ಇಬ್ಬರು ಬಲಿಯಾಗಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ:  ಬಿಗ್​ಬಾಸ್​​ ಸ್ಪರ್ಧಿ ವರ್ತೂರ್ ಸಂತೋಷ್​​ಗೆ ಹುಲಿ ಉಗುರು ಕೊಟ್ಟಿದ್ಯಾರು?; ಮಗನ ಬಂಧನದ ಹಿಂದೆ ಇದೆ ಷಡ್ಯಂತ್ರವಿದೆ ಎಂದ ತಾಯಿ! 

    ಭಟ್ಕಳದ ಖಾಝಿಯಾ ಸ್ಟ್ರೀಟ್ ನಿವಾಸಿಯಾಗಿದ್ದ ಮೊಹಮ್ಮದ್ ಮೀರಾನ್ ಸಾದಾ (77) ಡೆಂಗ್ಯೂ ಜ್ವರದಿಂದ ಸಾವು ಕಂಡಿದ್ದಾರೆ. ನಿನ್ನೆ ರಾತ್ರಿ ಮಾವಿನಕುರ್ವ ಪಂಚಾಯ್ತಿ ವ್ಯಾಪ್ತಿಯ ತಲಗೋಡು ನಿವಾಸಿ ಪ್ರಜ್ವಲ್ ಗೋವಿಂದ ಕಾರ್ವಿ (24)ಡೆಂಗ್ಯೂಗೆ ಬಲಿಯಾಗಿದ್ದಾನೆ.

    ಇದನ್ನೂ ಓದಿ: ವರ್ತೂರು ಸಂತೋಷ್ ಬಳಿ ಇರೋದು ಒರಿಜಿನಲ್ ಹುಲಿ ಉಗುರು!; ಆರೋಪ ಸಾಬೀತಾದರೆ ಎಷ್ಟು ವರ್ಷ ಶಿಕ್ಷೆ? 

    ಭಟ್ಕಳದ ಮೊಹಮ್ಮದ್ ಮೀರಾನ್ ಸಾದಾ (77) ಮೃತರು. ಭಟ್ಕಳದ ಖಾಝಿಯಾ ಸ್ಟ್ರೀಟ್ ನಿವಾಸಿಯಾಗಿದ್ದ ಮೀರಾನ್ ಸಾದಾ ಅವರು ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಇದೀಗ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಮೊಹಮ್ಮದ್ ಮೀರಾನ್ ಡೆಂಗ್ಯೂನಿಂದಲೇ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳಿಂದ ಯಾವುದೇ ಖಚಿತ ಮಾಹಿತಿ ಇಲ್ಲ.

    ಇದನ್ನೂ ಓದಿ: ಮೈಸೂರು ಹೆದ್ದಾರಿಯ ಟೋಲ್ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ BMW ಕಾರು

    ಭಾನುವಾರ ಮಾವಿನಕುರ್ವ ಪಂಚಾಯ್ತಿ ವ್ಯಾಪ್ತಿಯ ತಲಗೋಡು ನಿವಾಸಿ ಪ್ರಜ್ವಲ್ ಗೋವಿಂದ ಕಾರ್ವಿ (24) ಬಲಿಯಾಗಿದ್ದರು. ಇಬರು ಸಾಗರಶ್ರೀ ಬೋಟ್‍ನಲ್ಲಿ ಮೀನುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದು, ಒಂದು ವಾರದಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಿಸದೇ ಭಾನುವಾರ ಮೃತಪಟ್ಟಿದ್ದರು.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಬಳಕೆ ಹೆಚ್ಚಳ; 1 ಕೋಟಿ ಖಾಸಗಿ ವಾಹನಗಳು ಗಡಿ ದಾಟುವ ನಿರೀಕ್ಷೆ!

    ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ರವರು ಮಾತನಾಡಿ, ಭಟ್ಕಳದಲ್ಲಿ ಅತೀ ಹೆಚ್ಚು ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಭಟ್ಕಳದ ಬಂದರಿನಲ್ಲಿ ಮೀನುಗಾರಿಕೆ ನಡೆಸುವ ನಾಲ್ಕು ಜನರಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು ಜಿಲ್ಲೆಯಲ್ಲಿ 26 ಜನರು ಡೆಂಗ್ಯೂದಿಂದ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಇನ್ನು ಮಲೇರಿಯಾದಿಂದ 8 ಜನ, ಇಲಿಜ್ವರಕ್ಕೆ 32 ಮಂದಿ ಬಳಲುತಿದ್ದಾರೆ ಎಂದು ಹೇಳಿದ್ದಾರೆ.

    ವರ್ತೂರು ಸಂತೋಷ್ ಬಳಿ ಇರೋದು ಒರಿಜಿನಲ್ ಹುಲಿ ಉಗುರು!; ಆರೋಪ ಸಾಬೀತಾದರೆ ಎಷ್ಟು ವರ್ಷ ಶಿಕ್ಷೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts