More

    ಬೆಂಗಳೂರಿಗರೇ, ಎಚ್ಚರ! 3 ತಿಂಗಳಲ್ಲಿ 6 ಪಟ್ಟು ಹೆಚ್ಚಿದೆ ಡೆಂಘೆ ಜ್ವರ

    ಬೆಂಗಳೂರು: ಕಳೆದ ಮೂರು ತಿಂಗಳಲ್ಲಿ, ಬೆಂಗಳೂರಿನಲ್ಲಿ ಡೆಂಘೆ ಜ್ವರದ ಪ್ರಕರಣಗಳು ಆರು ಪಟ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ. ಮೇ 2021 ರಲ್ಲಿ 102 ಡೆಂಗ್ಯೂ ಕೇಸುಗಳು ವರದಿಯಾಗಿದ್ದರೆ, ಆಗಸ್ಟ್​ 2021ರಲ್ಲಿ 677 ಕೇಸುಗಳು ದಾಖಲಾಗಿವೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗ ಮಾಹಿತಿ ನೀಡಿದೆ.

    ಮೇ ತಿಂಗಳಿಂದ ಆಗಸ್ಟ್​ ಕೊನೆಯವರೆಗೆ ಬೆಂಗಳೂರು ನಗರದಲ್ಲಿ 12,203 ರಕ್ತದ ಸ್ಯಾಂಪಲ್​ಗಳನ್ನು ಡೆಂಘೆ ಜ್ವರದ ಪರೀಕ್ಷೆಗಾಗಿ ಸಂಗ್ರಹಿಸಲಾಗಿತ್ತು. ಇವುಗಳಲ್ಲಿ 1,304 ಜನರಿಗೆ ಪಾಸಿಟೀವ್​ ಬಂದಿತ್ತು. ಪೂರ್ವ ವಲಯದಲ್ಲಿ ಅತಿ ಹೆಚ್ಚು, ಅಂದರೆ 438 ಡೆಂಘೆ ಪ್ರಕರಣಗಳು ವರದಿಯಾಗಿವೆ ಎಂದು ಪಾಲಿಕೆ ತಿಳಿಸಿದೆ. (ಏಜೆನ್ಸೀಸ್)

    ಭಾರತದಲ್ಲಿ ಕರೊನಾ ಚೇತರಿಕೆ ದರ ಎಷ್ಟು ಗೊತ್ತೆ?

    ಕರೊನಾ ಸಾವಿನ ನಿಜವಾದ ಲೆಕ್ಕ ಕೊಡಿ: ರಾಮಲಿಂಗಾರೆಡ್ಡಿ ಆಗ್ರಹ

    ಹರಿಯಾಣ: ರೈತರ ಪ್ರತಿಭಟನೆ ಅಂತ್ಯ; ಲಾಠಿಚಾರ್ಜ್​ ಪ್ರಕರಣದ ತನಿಖೆ ಆದೇಶಿಸಿದ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts