More

    ಬಿಗ್​ಬಾಸ್​​ ಸ್ಪರ್ಧಿ ವರ್ತೂರ್ ಸಂತೋಷ್​​ಗೆ ಹುಲಿ ಉಗುರು ಕೊಟ್ಟಿದ್ಯಾರು?; ಮಗನ ಬಂಧನದ ಹಿಂದೆ ಷಡ್ಯಂತ್ರವಿದೆ ಎಂದ ತಾಯಿ!

    ಬೆಂಗಳೂರು: ವರ್ತೂರು ಸಂತೋಷ್ ಅವರು ಹುಲಿ ಉಗುರಿನಿಂದ ಲಾಕೆಟ್ ಮಾಡಿಕೊಂಡಿದ್ದರು. ಇದನ್ನು ಧರಿಸಿಯೇ ಅವರು ಬಿಗ್ ಬಾಸ್ ಮನೆಗೆ ಬಂದಿದ್ದರು. ಈ ಕುರಿತಾಗಿ ದೂರು ದಾಖಲಾಗಿತ್ತು. ಅರಣ್ಯಾಧಿಕಾರಿಗಳು ಬಿಗ್ ಬಾಸ್ ಮನೆ ಒಳಗೆ ತೆರಳಿ ವರ್ತೂರು ಸಂತೋಷ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತಾಗಿ ಸಂತೋಷ್ ತಾಯಿ ಮಾತನಾಡಿ ಆರೋಪವನ್ನು ತಳ್ಳಿ ಹಾಕಿದ್ದಾರೆ.

    ವೈಲ್ಡ್​ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿ ಸಂತೋಷ್ ಅವರ ಬಂಧನವಾಗಿದ್ದು, ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ಅನ್ನು ಅವರು ಹಾಕಿಕೊಂಡಿದ್ದರು. ಈ ಕುರಿತು ಶರತ್ ಎನ್ನುವವರು ದೂರು ನೀಡಿದ್ದರು. ಈ ಹಿನ್ನೆಲೆ ವರ್ತೂರು ಸಂತೋಷ್ ನನ್ನ ಬಂಧಿಸಿ, ಸದ್ಯ ಅರಣ್ಯಾಧಿಕಾರಿಗಳಿಂದ ಸಂತೋಷ್ ಅವರ ವಿಚಾರಣೆ ನಡೆಯುತ್ತಿದೆ.

    ಬಿಗ್​ಬಾಸ್​​ ಸ್ಪರ್ಧಿ ವರ್ತೂರ್ ಸಂತೋಷ್​​ಗೆ ಹುಲಿ ಉಗುರು ಕೊಟ್ಟಿದ್ಯಾರು?; ಮಗನ ಬಂಧನದ ಹಿಂದೆ ಷಡ್ಯಂತ್ರವಿದೆ ಎಂದ ತಾಯಿ!

    ವರ್ತೂರ ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಹುಲಿ ಉಗುರು ಬಂದಿದ್ದು ಹೇಗೆ? ಯಾರು ಕೊಟ್ಟರು? ಎಲ್ಲಿಂದ ಖರೀದಿ ಮಾಡಿದಿದ್ದೀರಿ? ಎಷ್ಟು ಮಂದಿಗೆ ಈ ರೀತಿ ಉಗುರು ಮಾರಲಾಗಿದೆ ಹೀಗೆ ಇತ್ಯಾದಿ ಪ್ರಶ್ನೆಗಳನ್ನು ಅರಣ್ಯಾಧಿಕಾರಿಗಳು ಸಂತೋಷ್ ಮುಂದೆ ಇಟ್ಟಿದ್ದಾರೆ. ಅದಕ್ಕೆ ಸಂತೋಷ್ ಕೂಡ ಉತ್ತರ ನೀಡಿದ್ದಾರೆ.

    ಅಪರಿಚತರು ಹುಲಿ ಉಗುರನ್ನು ಮಾರಲು ತಂದಿದ್ದರು. ಅವರು ಯಾರು ಎನ್ನುವುದು ನನಗೆ ಗೊತ್ತಿಲ್ಲ. ಮಾರಾಟ ಮಾಡುತ್ತಿರುವ ವಿಷಯ ಗೆಳೆಯರಿಂದ ತಿಳಿಯಿತು. ಹಣ ಕೊಟ್ಟು ಇದನ್ನು ಖರೀದಿ ಮಾಡಿದ್ದೇನೆ. ನಾನು ವ್ಯಕ್ತಿಯೊಬ್ಬನಿಂದ ಹುಲಿ ಉಗುರು ಖರೀದಿಸಿದ್ದೆ ಎಂದು ವರ್ತೂರ ಸಂತೋಷ್ ಅಧಿಕಾರಿಗಳ ಮುಂದೆ ಹೇಳಿದ್ದಾರೆ.

    ಬಿಗ್​ಬಾಸ್​​ ಸ್ಪರ್ಧಿ ವರ್ತೂರ್ ಸಂತೋಷ್​​ಗೆ ಹುಲಿ ಉಗುರು ಕೊಟ್ಟಿದ್ಯಾರು?; ಮಗನ ಬಂಧನದ ಹಿಂದೆ ಷಡ್ಯಂತ್ರವಿದೆ ಎಂದ ತಾಯಿ!

    ವರ್ತೂರು ಸಂತೋಷ್ ಬಂಧನ ಸೆನ್ಸೇಷನ್ ಸೃಷ್ಟಿ ಮಾಡಿದೆ. ಬಿಗ್ ಬಾಸ್ ಮನೆಯಿಂದಲೇ ಅವರನ್ನು ವಶಕ್ಕೆ ಪಡೆದಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

    ವರ್ತೂರ್​ ಸಂತೋಷ್​​ ತಾಯಿ ಹೇಳುವುದೇನು?: ನನ್ನ ಮಗ ವರ್ತೂರು ಸಂತೋಷ್ ಬಂಧನ ಹಿಂದೆ ಷಡ್ಯಂತ್ರ ಇದೆ. ಪುತ್ರ ಸಂತೋಷ್ ಬೆಳವಣಿಗೆ ಸಹಿಸದೇ ಈ ಷಡ್ಯಂತ್ರ ಮಾಡಿದ್ದಾರೆ. ನನ್ನ ಮಗ ಅನೇಕ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದಾನೆ. ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ . ಸಿಟಿಯಲ್ಲಿ ತೆಗದುಕೊಂಡು ಬಂದೆ ಎಂದು ಹೇಳಿದ್ದನು. ನಾನು ಚೈನ್​​ ಮಾಡಿಸಿದ್ದೇನೆ. ಚೈನ್​​ ಮಾಡಿಸಿ 10 ವರ್ಷಗಳೆ ಕಳೆದಿದೆ. ಆದರೆ ಇದನ್ನು ಯಾರೋ ಬೇಕು ಎಂದು ಮಾಡಿದ್ದಾರೆ. ಇವರು ಬೆಳೆಯುತ್ತಿರುವುದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ. ನನ್ನ ಮಗ ಅರೆಸ್ಟ್​​ ಆಗಿರುವುದು ತುಂಬಾ ನೋವನ್ನು ತರಿಸುತ್ತಿದೆ. ಆ ಸರವನ್ನು ಧರಿಸಿದ್ದು ಇದೆ ಮೊದಲು ಅಲ್ಲ. ಆದರೆ ಇದೆ ಮೊದಲ ಬಾರಿ ಈ ಕುರಿತಾಗಿ ಇಂತಹ ಪ್ರಶ್ನೆ ಬಂದಿದೆ ಎಂದು ಮಂಜುಳಾ ಹೇಳಿದ್ದಾರೆ.

    ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಇವರ ಬಂಧನ: ಈ ಆರೋಪ ಸಾಬೀತಾದರೆ 3ರಿಂದ 7 ವರ್ಷಗಳವರೆಗೆ ಶಿಕ್ಷೆ ಆಗುತ್ತದೆ. 10,000ರಿಂದ 25,000ದವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ. ಇದು ನಾನ್ ಬೇಲ್ ಕೇಸ್ ಆಗಿರುವುದರಿಂದ ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಅವರನ್ನು ಪ್ರೊಡ್ಯೂಸ್ ಮಾಡಲಾಗುತ್ತೆ ಎಂದಿದ್ದಾರೆ ವಲಯ ಅರಣ್ಯ ಅಧಿಕಾರಿಗಳು. ಈ ಪ್ರಕರಣ ಯಾವ ರೀತಿಯಲ್ಲಿ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

    ವರ್ತೂರು ಸಂತೋಷ್ ಬಳಿ ಇರೋದು ಒರಿಜಿನಲ್ ಹುಲಿ ಉಗುರು!; ಆರೋಪ ಸಾಬೀತಾದರೆ ಎಷ್ಟು ವರ್ಷ ಶಿಕ್ಷೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts