More

    ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸವಾಲಾಗದ ಕೆಕೆಆರ್; 7 ವಿಕೆಟ್ ಜಯ ದಾಖಲಿಸಿದ ರಿಷಭ್ ಪಂತ್ ಪಡೆ

    ಅಹಮದಾಬಾದ್: ಇನಿಂಗ್ಸ್‌ನ ಮೊದಲ ಓವರ್‌ನಲ್ಲೇ 6 ಬೌಂಡರಿ ಸಿಡಿಸುವುದರೊಂದಿಗೆ ಯುವ ಬ್ಯಾಟ್ಸ್‌ಮನ್ ಪೃಥ್ವಿ ಷಾ (82 ರನ್, 41 ಎಸೆತ, 11 ಬೌಂಡರಿ, 3 ಸಿಕ್ಸರ್) ತೋರಿದ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್-14ರ ತನ್ನ 7ನೇ ಪಂದ್ಯದಲ್ಲಿ ಕೋಲ್ಕತ ನೈಟ್ ರೈಡರ್ಸ್‌ ಎದುರು 7 ವಿಕೆಟ್ ಜಯ ದಾಖಲಿಸಿತು.

    ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಕೆಕೆಆರ್ ತಂಡ ಇನಿಂಗ್ಸ್‌ನ ಆರಂಭದಲ್ಲಿ ಶುಭಮಾನ್ ಗಿಲ್ (43 ರನ್, 38 ಎಸೆತ, 3 ಬೌಂಡರಿ, 1 ಸಿಕ್ಸರ್) ಮತ್ತು ಸ್ಲಾಗ್ ಓವರ್‌ಗಳಲ್ಲಿ ಆಂಡ್ರೆ ರಸೆಲ್ (45*ರನ್, 27 ಎಸೆತ, 2 ಬೌಂಡರಿ, 4 ಸಿಕ್ಸರ್) ತೋರಿದ ಉತ್ತಮ ಆಟದಿಂದ 6 ವಿಕೆಟ್‌ಗೆ 154 ರನ್ ಪೇರಿಸಿತು. 33ನೇ ಜನ್ಮದಿನದ ಸಂಭ್ರಮದಲ್ಲಿದ್ದ ಆಲ್ರೌಂಡರ್ ಆಂಡ್ರೆ ರಸೆಲ್ ಸ್ಲಾಗ್ ಓವರ್‌ಗಳಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಪ್ರತಿಯಾಗಿ ಡೆಲ್ಲಿ ಪೃಥ್ವಿ, ಶಿಖರ್ ಧವನ್ (46 ರನ್, 47 ಎಸೆತ, 4 ಬೌಂಡರಿ, 1 ಸಿಕ್ಸರ್) ಜೋಡಿಯ ಬಿರುಸಿನ ಬ್ಯಾಟಿಂಗ್‌ನಿಂದ 16.3 ಓವರ್‌ಗಳಲ್ಲಿ 3 ವಿಕೆಟ್‌ಗೆ 156 ರನ್‌ಗಳಿಸಿ ಜಯ ದಾಖಲಿಸಿತು.

    ಕೆಕೆಆರ್: 6 ವಿಕೆಟ್‌ಗೆ 154 (ಶುಭಮಾನ್ ಗಿಲ್ 43, ಆಂಡ್ರೆ ರಸೆಲ್ 45*, ರಾಹುಲ್ ತ್ರಿಪಾಠಿ 19, ಅಕ್ಷರ್ ಪಟೇಲ್ 32ಕ್ಕೆ 2, ಲಲಿತ್ ಯಾದವ್ 13ಕ್ಕೆ 2, ಅವೇಶ್ ಖಾನ್ 31ಕ್ಕೆ 1), ಡೆಲ್ಲಿ ಕ್ಯಾಪಿಟಲ್ಸ್: 16.3 ಓವರ್‌ಗಳಲ್ಲಿ 3 ವಿಕೆಟ್‌ಗೆ 156 (ಪೃಥ್ವಿ ಷಾ 82, ಶಿಖರ್ ಧವನ್ 46, ರಿಷಭ್ ಪಂತ್ 16, ಪ್ಯಾಟ್ ಕಮ್ಮಿನ್ಸ್ 24ಕ್ಕೆ 3).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts