More

    ದೆಹಲಿ ವಿಧಾನಸಭೆ ಚುನಾವಣೆ: ಮತದಾನದ ಅಂತಿಮ ಪ್ರಮಾಣ ಪ್ರಕಟಿಸದ ಚುನಾವಣಾ ಆಯೋಗದ ನಡೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೇಜ್ರಿವಾಲ್

    ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯ ಮತದಾನ ಫೆ.8ರ ಸಂಜೆ 6ಗಂಟೆಗೆ ಮುಕ್ತಾಯವಾಗಿದ್ದು, ಇನ್ನೂ ಮತದಾನದ ಅಂತಿಮ ಪ್ರಮಾಣ ಎಷ್ಟು ಎಂಬುದನ್ನು ಚುನಾವಣಾ ಆಯೋಗ ಪ್ರಕಟಿಸಿಲ್ಲವೇಕೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಳವಳ ವ್ಯಕ್ತಪಡಿಸಿದ್ದಾರೆ.

    ಇದು ನಿಜಕ್ಕೂ ಆಘಾತಕಾರಿ ವಿಚಾರ ಎಂದು ಹೇಳಿರುವ ಕೇಜ್ರಿವಾಲ್, ಮತದಾನ ಪ್ರಕ್ರಿಯೆ ಪೂರ್ಣಗೊಂಡು ಗಂಟೆಗಳೇ ಕಳೆದರೂ ಮತದಾನದ ಅಂತಿಮ ಪ್ರಮಾಣದ ಪ್ರಕಟಿಸಲು ವಿಳಂಬ ತೋರುತ್ತಿರುವುದು ಸರಿಯಲ್ಲ ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೇಜ್ರಿವಾಲ್, ಚುನಾವಣಾ ಆಯೋಗ ಏನು ಮಾಡುತ್ತಿದೆ ಎಂದೂ ಪ್ರಶ್ನಿಸಿದ್ದಾರೆ.

    ಮತದಾನ ಪ್ರಕ್ರಿಯೆ ಶನಿವಾರ ಸಂಜೆ ಮುಕ್ತಾಯವಾದ ಬಳಿಕ ರಾತ್ರಿ ಕೊನೆಯ ಮತದಾನ ಪ್ರಮಾಣ ಶೇಕಡ 61.46 ಎಂದು ಚುನಾವಣಾ ಆಯೋಗ ಪ್ರಕಟಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಇನ್ನೊಬ್ಬ ಆಪ್ ನಾಯಕ ಸಂಜಯ್ ಸಿಂಗ್, ಬಹುಶಃ ದೇಶದ ಇತಿಹಾಸದಲ್ಲೇ ಇದು ಮೊದಲ ಬಾರಿ ಚುನಾವಣಾ ಆಯೋಗ ಮತದಾನ ಎಷ್ಟಾಗಿದೆ ಎಂಬ ಡೇಟಾ ಪ್ರಕಟಿಸದೇ ಇರುವಂಥದ್ದು ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts