More

    ಲಾಕ್​ಡೌನ್​ ಕುರಿತ ಯುವಕನ ಪ್ರಶ್ನೆಗೆ ದೆಹಲಿ ಪೊಲೀಸರು ನೀಡಿದ ಉತ್ತರ ಕಂಡು ನೆಟ್ಟಿಗರು ಫುಲ್​ ಖುಷ್​!

    ನವದೆಹಲಿ: ಮಹಾಮಾರಿ ಕರೊನಾ ಭೀತಿಯಿಂದಾಗಿ ಇಡೀ ದೇಶವೇ ಸ್ತಬ್ಧವಾಗಿದೆ. ಸೋಂಕು ತಡೆಗಟ್ಟಲು ಎಲ್ಲರೂ ಮನೆಯಲ್ಲೇ ಉಳಿಯಿರಿ ಎಂದು ಕೇಂದ್ರ ಸರ್ಕಾರ ಖಡಕ್​ ಸಂದೇಶವನ್ನು ರವಾನಿಸಿದೆ. ಹೀಗಿರುವಾಗ ಯುವಕನೊಬ್ಬ ಲಾಕ್​ಡೌನ್​ ಬಗ್ಗೆ ವಿಚಾರಿಸಲು ಟ್ವೀಟ್​ ಮಾಡಿದಾಗ, ಅದಕ್ಕೆ ದೆಹಲಿ ಪೊಲೀಸರು ನೀಡಿದ ಉತ್ತರ ಎಲ್ಲರ ಮನಗೆದ್ದಿದೆ.

    ಅಷ್ಟಕ್ಕೂ ಯುವಕ ಪೊಲೀಸರ ಬಳಿ ಕೇಳಿದ್ದೇನೆಂದರೆ, ”ಸರ್​ ನಮ್ಮ ಮನೆಯಿಂದ 2 ಕಿ.ಮೀ ದೂರದಲ್ಲಿರುವ ನನ್ನ ಸ್ನೇಹಿತನನ್ನು ಕೆಲ ಕಾರ್ಯನಿಮಿತ್ತ ಭೇಟಿ ಮಾಡಲು ಅವರ ಮನೆಗೆ ತೆರಳಬಹುದೇ” ಎಂದು ಪ್ರಶ್ನಿಸಿದ್ದಾನೆ.

    ಇದಕ್ಕೆ ಉತ್ತರ ನೀಡಿರುವ ದೆಹಲಿ ಪೊಲೀಸರು ”ನೀವು ನಿಜವಾದ ಸ್ನೇಹಿತರಾಗಿದ್ದರೆ ಮನೆಯಲ್ಲೇ ಉಳಿಯಿರಿ. ವಿಡಿಯೋ ಕಾಲ್​ ಮೂಲಕ ಮಾತನಾಡಿ” ಎಂದಿದ್ದಾರೆ. ಹಾಗೇ ಮನೆಯಲ್ಲೇ ಉಳಿದು ಜೀವಗಳನ್ನು ಉಳಿಸಿ ಎಂದೂ ಸಲಹೆ ನೀಡಿದ್ದಾರೆ.

    ಕಿಲ್ಲರ್​ ಕರೊನಾ ತಡೆಗೆ ದೆಹಲಿ ಪೊಲೀಸರ ಜಾಗೃತಿಯನ್ನು ಕಂಡ ಅನೇಕ ನಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಎಂಥಾ ಅದ್ಭುತ ಪ್ರತಿಕ್ರಿಯೆ ಎಂದು ನೆಟ್ಟಿಗರೊಬ್ಬರು ಮೆಚ್ಚಿಗೆ ಸೂಚಿಸಿದ್ದಾರೆ. ಮತ್ತೋರ್ವ ಶ್ರೇಷ್ಠ ಉತ್ತರ ಮತ್ತು ಅತ್ಯುತ್ತಮ ಸಲಹೆ ಎಂದಿದ್ದಾರೆ. ಹೀಗೆ ನಾನಾ ರೀತಿಯಲ್ಲಿ ನೆಟ್ಟಿಗರು ದೆಹಲಿ ಪೊಲೀಸರು ಜಾಲತಾಣದಲ್ಲಿ ಕೊಂಡಾಡಿದ್ದಾರೆ.

    ನಿನ್ನೆ ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ನಿನ್ನೆ ಮಧ್ಯರಾತ್ರಿಯಿಂದಲೇ ಮುಂದಿನ 3 ವಾರಗಳ ಕಾಲ ಇಡೀ ರಾಷ್ಟ್ರವನ್ನೇ ಲಾಕ್​ಡೌನ್​ ಮಾಡಲು ಘೋಷಿಸಿದ್ದಾರೆ. ಕರೊನಾ ವೈರಸ್​ನಿಂದ ಬಚಾವಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ದಾರಿ ಎಂದು ಸಲಹೆ ನೀಡಿದ್ದಾರೆ. (ಏಜೆನ್ಸೀಸ್​)

    ವಿಮಾನದಲ್ಲಿ ಕರೊನಾ ಸೋಂಕಿತರು ಇರಬಹುದೆಂಬುದನ್ನು ಕೇಳಿ ಪೈಲಟ್​ಗಳಿಬ್ಬರು ಮಾಡಿದ್ದನು ಕೇಳಿದ್ರೆ ಶಾಕ್​ ಖಂಡಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts