More

    ಗೂಗಲ್ ಎಂಟರ್ಪ್ರೈಸಸ್​ಗೆ 10 ಲಕ್ಷ ರೂ. ದಂಡ ವಿಧಿಸಿದ ದೆಹಲಿ ಹೈಕೋರ್ಟ್!

    ನವದೆಹಲಿ: ಕೆಲವು ಸಂಸ್ಥೆಗಳ ಚಿಹ್ನೆ ಮತ್ತು ಹೆಸರುಗಳ ಬಳಕೆ ಮಾಡುವಂತಿಲ್ಲ. ಬಳಕೆ ಮಾಡಿದ್ದೇ ಆದಲ್ಲಿ ಕಂಪನಿಗಳು ಪ್ರಕರಣ ದಾಖಲಿಸಿಲಿ ದಂಡ ವಸೂಲಿ ಮಾಡುತ್ತವೆ. ಹೀಗೆ ಗೂಗಲ್ ಸಂಸ್ಥೆಯ ಹೆಸರು ಮತ್ತು ಟ್ರೇಡ್​ಮಾರ್ಕ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಗೂಗಲ್ ಎಂಟರ್​ಪ್ರೈಸಸ್ ಮತ್ತಿತರ ಕೆಲ ಸಂಸ್ಥೆಗಳ ಮೇಲೆ ದೆಹಲಿ ಹೈಕೋರ್ಟ್ 10 ಲಕ್ಷ ರೂ ದಂಡ ವಿಧಿಸಿದೆ.

    ಗೂಗಲ್ ಎಂಟರ್​ಪ್ರೈಸಸ್ ಸಂಸ್ಥೆಗೂ ಗೂಗಲ್ ಎಲ್​ಎಲ್​ಸಿಗೂ ಯಾವುದೇ ಸಂಬಂಧ ಇಲ್ಲ. ತಾನು ಗೂಗಲ್​ನ ಭಾಗ ಎಂದು ಬಿಂಬಿಸಿಕೊಂಡು, ಅದರ ಟ್ರೇಡ್​ಮಾರ್ಕನ್ನು ಬಳಸಿಕೊಂಡು ಗೂಗಲ್ ಎಂಟರ್ಪ್ರೈಸಸ್ ವಂಚನೆ ಎಸಗುತ್ತಿತ್ತು ಎಂಬುದು ಆರೋಪ. ಗೂಗಲ್ ಎಂಟರ್​ಪ್ರೈಸಸ್ ಪ್ರೈ ಲಿ ಸಂಸ್ಥೆ ಆರೋಪಿ ನಂಬರ್ ಒನ್ ಆಗಿತ್ತು. ಇ ಕುಟಿರ್ ಟೆಕ್ನಾಲಜಿ ಮತ್ತು ಎಕ್ಸ್​ಟೆನ್ಷನ್ ಮ್ಯಾನೇಜ್ಮೆಂಟ್ ಲಿ ಮತ್ತರದ ನಿರ್ದೇಶಕ ಚಂದರ್ ಶೇಖರ್ ಅವರು ಎರಡು ಮತ್ತು ಮೂರನೇ ಆರೋಪಿಗಳೆನಿಸಿದ್ದರು.

    ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ‘ಜೋಶ್’ ನಟಿ ಪೂರ್ಣಾ

    ಈ ಬಗ್ಗೆ ಗೂಗಲ್ ಎಲ್​ಎಲ್​ಸಿ ಕಾನೂನು ಮೊಕದ್ದಮೆ ಹಾಕಿತ್ತು. ದೆಹಲಿ ಹೈಕೊರ್ಟ್​ನಲ್ಲಿ ವಿಚಾರಣೆ ನಡೆದು, ಗೂಗಲ್ ಎಂಟರ್​ಪ್ರೈಸಸ್ ಮೇಲಿನ ಆರೋಪ ನಿಜವೆಂದು ಸಾಬೀತಾಯಿತು. ಟ್ರೇಡ್​ಮಾರ್ಕ್ ದುರುಪಯೋಗದಿಂದ ಗೂಗಲ್ ಎಲ್​ಎಲ್​ಸಿಗೆ ಹಾನಿ ಆಗಿರುವ ಹಿನ್ನೆಲೆಯಲ್ಲಿ 10 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ದೆಹಲಿ ಹೈಕೋರ್ಟ್ ಗೂಗಲ್ ಎಂಟರ್​ಪ್ರೈಸಸ್ ಹಾಗೂ ಅದರ ಅಂಗಸಂಸ್ಥೆಗಳಿಗೆ ಆದೇಶ ಹೊರಡಿಸಿತು.

    ಇದನ್ನೂ ಓದಿ: ಬುಲೆಟ್ ಪ್ರೂಫ್ ‘ಬಕೆಟ್’ ತೊಟ್ಟು ಕೊರ್ಟ್​​ಗೆ ಬಂದ ಇಮ್ರಾನ್ ಖಾನ್!
    ಗೂಗಲ್ ಹೆಸರಲ್ಲಿ ಹಣ ವಂಚನೆ ಹೇಗೆ?: ಮೂರು ಆರೋಪಿ ಸಂಸ್ಥೆಗಳು ಗೂಗಲ್​ನ ಟ್ರೇಡ್​ಮಾರ್ಕ್​ಗಳನ್ನು ಬಳಸಿಕೊಂಡು ಸಾರ್ವಜನಿಕರನ್ನು ನಂಬಿಸುವ ಕೆಲಸ ಮಾಡಿದ್ದವು. ಗೂಗಲ್ ಎಂಟರ್ಪ್ರೈಸಸ್​ನ ಬ್ಯಾಂಕ್ ಖಾತೆಗೆ ಹಣ ಹಾಕಿದರೆ ಗೂಗಲ್ ಜೊತೆ ಜೋಡಿತವಾದ ಸಂಸ್ಥೆಯಲ್ಲಿ ಉದ್ಯೋಗ ಸಿಗುತ್ತದೆ ಎಂದು ಭರವಸೆ ನೀಡಿದ್ದವು. ಇದನ್ನು ನಂಬಿ ಹಲವು ಸಾರ್ವಜನಿಕರು ವಂಚನೆಗೊಳಗಾಗಿರುವುದು ಗೊತ್ತಾಗಿದೆ.

    ಇದನ್ನೂ ಓದಿ: ನನ್ನ ಮುಖ ತೋರಿಸಿದರೆ ಮತ ಬರುವುದಿಲ್ಲವೆಂದು ಬೊಮ್ಮಾಯಿ ಚಿತ್ರನಟರ ಮುಂದೆ ಶರಣಾಗಿದ್ದಾರೆ: ಕಾಂಗ್ರೆಸ್​​

    2011ರಲ್ಲಿ ಡೆಸ್ಕ್ ಜಾಬ್​ಗಳಿಗೆ ಗೂಗಲ್ ಇಂಡಿಯಾ ಮತ್ತು ಈ ಆರೋಪಿ ಸಂಸ್ಥೆಗಳ ಮಧ್ಯೆ ಸಹಕಾರ ಒಪ್ಪಂದ ಆಗಿದೆ ಎನ್ನುವಂತಹ ಸುದ್ದಿಗಳು ಪ್ರಕಟವಾಗಿದ್ದವು. ಈ ಹಿನ್ನೆಲೆಯಲ್ಲಿ ಗೂಗಲ್ ಎಲ್​ಎಲ್​ಸಿ ಕೋರ್ಟ್ ಮೆಟ್ಟಿಲೇರಿತ್ತು. ಇ ಕುಟಿರ್ ಟೆಕ್ನಾಲಜಿ ಈಗಲೂ ಕೂಡ ತಾನು ಗೂಗಲ್ ಮತ್ತು ಟಾಟಾ ಕಮ್ಯೂನಿಕೇಶನ್ಸ್ ಸಂಸ್ಥೆಗಳಿಗೆ ಚಾನಲ್ ಪಾರ್ಟ್ನರ್ ಎಂದು ತನ್ನ ಟ್ವಿಟ್ಟರ್ ಪ್ರೊಫೈಲ್​ನಲ್ಲಿ ಹೇಳಿಕೊಂಡಿದೆ. ದೆಹಲಿ ಹೈಕೋರ್ಟ್​ನಲ್ಲಿ ಗೂಗಲ್ ಎಲ್​ಎಲ್​ಸಿ ಹಾಕಲಾಗಿದ್ದ ಕಾನೂನು ಮೊಕದ್ದಮೆಯಲ್ಲಿ, ಆರೋಪಿ ಸಂಸ್ಥೆಗಳು ಯಾವ ರೀತಿ ವಂಚನೆ ಎಸಗುತ್ತಿದ್ದವು ಎಂಬ ಕುತೂಹಲಕಾರಿ ಮಾಹಿತಿಯನ್ನು ಕೋರ್ಟ್ ಕೂಡ ಈ ವಿಚಾರವನ್ನು ಎತ್ತಿ ತೋರಿಸಿದೆ.

    ರೈಲು ನಿಲ್ದಾಣದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts