More

    ರೈಲು ನಿಲ್ದಾಣದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ!

    ಉತ್ತರ ಪ್ರದೇಶ: ಮಹಿಳೆಯೊಬ್ಬರು ಝಾನ್ಸಿ ಜಿಲ್ಲೆಯ ವೀರಾಂಗನ ಲಕ್ಷ್ಮೀಬಾಯಿ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಗರ್ಭಿಣಿ ಮತ್ತು ಆಕೆಯ ಪತಿ ದೆಹಲಿಯಿಂದ ದಾಮೋಹ್‌ಗೆ ಸೋಮವಾರ ರಾತ್ರಿ ಪ್ರಯಾಣಿಸುತ್ತಿದ್ದರು. ಮಹಿಳೆ ಹೆರಿಗೆ ನೋವು ಅನುಭವಿಸುತ್ತಿದ್ದು, ಯಾರೂ ಸಹಾಯ ಮಾಡಲು ಸಿದ್ಧರಿರಲಿಲ್ಲ. ಈ ವೇಳೆ ಹಣ್ಣಿನ ಜ್ಯೂಸ್ ಮಾರಾಟಗಾರ ಮಾಡಿರುವ ಮಾಸ್ಟರ್​ ಪ್ಲ್ಯಾನ್​ ಹೇಳಿದ್ರೆ ನೀವು ಖಂಡಿತಾ ಮೆಚ್ಚಿಕೊಳ್ಳುತ್ತಿರ.
    ಹಣ್ಣಿನ ಜ್ಯೂಸ್ ಮಾರಾಟಗಾರ ತನ್ವೀರ್ ಮಿರ್ಜಾ ದಂಪತಿಯನ್ನು ನೋಡಿದ ತಕ್ಷಣ, ಅವರ ಟಿಕೆಟ್‌ನಲ್ಲಿ ಮುದ್ರಿಸಲಾದ ಪಿಎನ್‌ಆರ್ ಸಂಖ್ಯೆಯನ್ನು ನೀಡಿ ಸಹಾಯಕ್ಕಾಗಿ ರೈಲ್ವೆಗೆ ಟ್ವೀಟ್ ಮಾಡಿದ್ದಾರೆ. ರೈಲ್ವೆ ಸಚಿವಾಲಯ ಸ್ಪಂದಿಸಿದ್ದು, 20 ನಿಮಿಷಗಳ ನಂತರ ವೈದ್ಯರ ತಂಡವು ಸ್ಥಳಕ್ಕೆ ಆಗಮಿಸಿ ಮಹಿಳೆಗೆ ಚಿಕಿತ್ಸೆ ನೀಡಿದೆ. ನಂತರ, ಗರ್ಭಿಣಿ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದರು ಎಂದು ತಿಳಿದುಬಂದಿದೆ.

    ಇದನ್ನೂ ಓದಿ: ಬುಲೆಟ್ ಪ್ರೂಫ್ ‘ಬಕೆಟ್’ ತೊಟ್ಟು ಕೊರ್ಟ್​​ಗೆ ಬಂದ ಇಮ್ರಾನ್ ಖಾನ್!

    ಹೆರಿಗೆಯ ಸಮಯದಲ್ಲಿ ಮಹಿಳೆಯನ್ನು ಮುಚ್ಚಲು ಕಂಬಳಿಗಳನ್ನು ಹಿಡಿದಿದ್ದರು. ತಾಯಿ ಮತ್ತು ಗಂಡು ಮಗುವನ್ನು ಈಗ ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಣ್ಣಿನ ಜ್ಯೂಸ್ ಮಾರಾಟಗಾರ ತನ್ವೀರ್ ಅವರ ತ್ವರಿತ ಪ್ರತಿಕ್ರಿಯೆಗಾಗಿ ದಂಪತಿ ಧನ್ಯವಾದ ತಿಳಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದೂ ಮಹಿಳೆ ಕುಟುಂಬಸ್ಥರು ತಿಳಿಸಿದ್ದಾರೆ.

    ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ‘ಜೋಶ್’ ನಟಿ ಪೂರ್ಣಾ
    ಹಣ್ಣಿನ ಜ್ಯೂಸ್ ಮಾರಾಟಗಾರ ತನ್ವೀರ್ ಮಿರ್ಜಾ ಮಾತನಾಡಿ, “ಗರ್ಭಿಣಿ ನೋವಿನಿಂದ ಬಳಲುತ್ತಿರುವುದನ್ನು ನಾನು ನೋಡಿದೆ ಮತ್ತು ಆಕೆಯ ಪತಿ ಸಹಾಯಕ್ಕಾಗಿ ಹುಡುಕುತ್ತಿದ್ದರೂ ಪ್ರಯೋಜನವಾಗಲಿಲ್ಲ. ನಾನು ಸ್ಥಳಕ್ಕೆ ಧಾವಿಸಿ ಅವರ ರೈಲು ಟಿಕೆಟ್ ನೀಡುವಂತೆ ಕೇಳಿದೆ. ನಾನು ಪಿಎನ್‌ಆರ್‌ ತೆಗೆದುಕೊಂಡೆ. ಟಿಕೆಟ್ ಮೇಲೆ ನಂಬರ್ ಪ್ರಿಂಟ್ ಮಾಡಿ ರೈಲ್ವೆಗೆ ಟ್ವೀಟ್ ಮಾಡಿದ್ದಾರೆ. ತಕ್ಷಣ ವೈದ್ಯರು ಬಂದು ಮಹಿಳೆಗೆ ಚಿಕಿತ್ಸೆ ನೀಡಿದರು. ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ’ ಎಂದು ಹೇಳಿದ್ದಾರೆ.

    30 ಸಾವಿರ ರೂ. ಲಂಚ ಕೇಳಿದ ಪೊಲೀಸರು..ಟವೆಲ್‌ ಕಟ್ಟಿಕೊಂಡು ಠಾಣೆಗೆ ಬಂದ ತಂದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts