More

    ವಾಯು ಮಾಲಿನ್ಯ; ಶಾಲೆಗಳಿಗೆ ಚಳಿಗಾಲದ ರಜೆ ಘೋಷಿಸಿದ ದೆಹಲಿ ಸರ್ಕಾರ

    ನವದೆಹಲಿ: ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಕಾರಣ ದೆಹಲಿ ಸರ್ಕಾರ ನವೆಂಬರ್ 9 ರಿಂದ 18 ರವರೆಗೆ ಶಾಲೆಗಳಲ್ಲಿ ಚಳಿಗಾಲದ ಆರಂಭಿಕ ವಿರಾಮವನ್ನು ಘೋಷಿಸಿದೆ.

    ದೆಹಲಿಯ ಮಾಲಿನ್ಯ ಮಟ್ಟ ಮತ್ತಷ್ಟು ಹದಗೆಟ್ಟಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.ಇದರಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯ ಶಾಲೆಗಳಿಗೆ ಇಂದೂ ಕೂಡ ರಜೆ ಮುಂದುವರಿಸಿ ಸರ್ಕಾರ ಆದೇಶ ಹೊರಡಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ವಾಯು ಮಾಲಿನ್ಯದ ನಡುವೆ ದೆಹಲಿ ಸರ್ಕಾರವು ನವೆಂಬರ್ 9 ರಿಂದ 18 ರವರೆಗೆ ಶಾಲೆಗಳಲ್ಲಿ ಚಳಿಗಾಲದ ಆರಂಭಿಕ ವಿರಾಮವನ್ನು ಬುಧವಾರ ಘೋಷಿಸಿದೆ.

    “ವಾಯು ಮಾಲಿನ್ಯದ ದೃಷ್ಟಿಯಿಂದ, ಎಲ್ಲಾ ಶಾಲೆಗಳು ಡಿಸೆಂಬರ್ ಚಳಿಗಾಲದ ವಿರಾಮವನ್ನು ಈಗ ನವೆಂಬರ್ 9 ರಿಂದ 18 ರವರೆಗೆ ಮರು ನಿಗದಿಪಡಿಸಲಾಗಿದೆ. ಈ ಕುರಿತಾಗಿ ಪೋಷಕರಿ ಮಾಹಿತಿ ನೀಡಿ.” ಎಂದು ದೆಹಲಿ ಶಿಕ್ಷಣ ಇಲಾಖೆ ಸೂಚನೆಯಲ್ಲಿ ತಿಳಿಸಿದೆ.

    ದೆಹಲಿ ಮತ್ತು ಅದರ ಉಪನಗರಗಳಲ್ಲಿನ ಗಾಳಿಯ ಗುಣಮಟ್ಟವು ಬುಧವಾರ ಬೆಳಿಗ್ಗೆ ಮತ್ತೆ ತೀವ್ರ ವರ್ಗಕ್ಕೆ ಇಳಿದಿದೆ, ನೆರೆಯ ರಾಜ್ಯಗಳಲ್ಲಿ ಸುಡುವ ಭತ್ತದ ಒಣಹುಲ್ಲಿನ ಹೊಗೆಯು ರಾಷ್ಟ್ರ ರಾಜಧಾನಿಯಲ್ಲಿನ ವಾಯುಮಾಲಿನ್ಯದ ಮೂರನೇ ಒಂದು ಭಾಗವನ್ನು ಹೊಂದಿದೆ.

    ಅಂಕಿಅಂಶಗಳ ಪ್ರಕಾರ, ದೆಹಲಿಯ 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ ಮತ್ತಷ್ಟು ಹೆಚ್ಚಾಗಿದ್ದು ಆತಂಕ ಮೂಡಿಸಿದೆ.ಸೊನ್ನೆ ಮತ್ತು 5೦ ರ ನಡುವಿನ ವಾಯು ಸೂಚ್ಯಂಕವನ್ನು ’ಉತ್ತಮವಾಗಿದ್ದು 51 ಮತ್ತು 100 ’ತೃಪ್ತಿದಾಯಕ’, 101ಮತ್ತು 200 ’ಮಧ್ಯಮ’, 201ಮತ್ತು 300 ’ಕಳಪೆ’, 301 ಮತ್ತು 400 ’ಅತ್ಯಂತ ಕಳಪೆ’ ಮತ್ತು 401 ಮತ್ತು 500 ’ತೀವ್ರ’ ಎಂದು ಪರಿಗಣಿಸಲಾಗುತ್ತದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

    ವಾಯು ಮಾಲಿನ್ಯವನ್ನು ತಡೆಗಟ್ಟಲು ಆನಂದ್ ಮಹೀಂದ್ರಾ ನೀಡಿದ್ರು ಸೂಪರ್ ಐಡಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts