More

    ಪದವಿ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯೂ ರದ್ದು?

    ನವದೆಹಲಿ: ಅಂತಿಮ ವರ್ಷದ ಪದವಿ ಪರೀಕ್ಷೆಯನ್ನು ರದ್ದು ಮಾಡುವುದಕ್ಕೆ ಯುಜಿಸಿ (ವಿಶ್ವವಿದ್ಯಾಲಯಗಳ ಅನುದಾನ ಆಯೋಗ) ಸರ್ಕಾರಕ್ಕೆ ಸಲಹೆ ನೀಡಿದೆ. ಕರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿರುವ ಈ ಸಮಯದಲ್ಲಿ ಪರೀಕ್ಷೆ ನಡೆಸದೆಯೇ ಹಿಂದಿನ ಸೆಮಿಸ್ಟರ್​ಗಳ ಫಲಿತಾಂಶದ ಆಧಾರದ ಮೇಲೆ ತೇರ್ಗಡೆಗೊಳಿಸಲು ಯುಜಿಸಿಯ ಸಮಿತಿಯೊಂದು ಶಿಫಾರಸು ಮಾಡಿದೆ.

    ಹಿಂದಿನ ಸೆಮಿಸ್ಟರ್​ಗಳ ಫಲಿತಾಂಶದ ಆಧಾರದ ಮೇಲೆ ನೀಡುವ ಫಲಿತಾಂಶವು ವಿದ್ಯಾರ್ಥಿಗಳಿಗೆ ತೃಪ್ತಿದಾಯಕವಾಗಿಲ್ಲದಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಕರೊನಾ ಸಮಸ್ಯೆ ಮುಗಿದ ನಂತರ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಸಲಹೆಯಲ್ಲಿ ತಿಳಿಸಲಾಗಿದೆ. ಹರಿಯಾಣ ವಿವಿ ಉಪಪ್ರಾಂಶುಪಾಲರಾದ ಆರ್.ಸಿ. ಕುಹಾದ್ ನೇತೃತ್ವದ ಸಲಹಾ ಸಮಿತಿ ಈ ಸಲಹೆ ನೀಡಿದೆ. ಐಐಟಿಯಂತಹ ಪ್ರತಿಷ್ಠಿತ ವಿದ್ಯಾಲಯಗಳು ಆನ್​ಲೈನ್​ನಲ್ಲೇ ತರಗತಿಯನ್ನು ಮುಂದುವರಿಸುವುದಾಗಿ ತಿಳಿಸಿವೆ.

    ಇದನ್ನೂ ಓದಿ: ಕೋವಿಡ್ ನೆಪದಲ್ಲಿ ಸೈಬರ್ ದಾಳಿ; ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ, ಉಚಿತ ಪರೀಕ್ಷೆ ನೆಪದಲ್ಲಿ ಮೋಸ

    • ಆಗಸ್ಟ್ 1ರಿಂದ ಈ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆ ಆರಂಭ ಮಾಡುವುದಾಗಿ ಯುಜಿಸಿ ತಿಳಿಸಿತ್ತು. ಇದೀಗ ಅದನ್ನು ಪರಿಷ್ಕರಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಸೂಚಿಸಿದ್ದಾರೆ.
    • ಸಿಬಿಎಸ್​ಇಯ 10 ಮತ್ತು 12ನೇ ತರಗತಿ ಬಾಕಿ ಉಳಿದ ಪರೀಕ್ಷೆ ಸಂಬಂಧ ಸರ್ಕಾರ ಸುಪ್ರೀಂಕೋರ್ಟ್​ಗೆ ವರದಿ ಸಲ್ಲಿಸಿದ್ದು, ಈ ಕುರಿತ ತೀರ್ಪು ಗುರುವಾರ ಪ್ರಕಟವಾಗಲಿದೆ. ಜುಲೈ 1ರಿಂದ 15ರವರೆಗೆ ಈ ಪರೀಕ್ಷೆಗಳಿಗೆ ದಿನಾಂಕ ಘೋಷಿಸಲಾಗಿದೆ.
    • ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಜುಲೈ 7ರಿಂದ ಐಸಿಎಸ್​ಇ 10 ಮತ್ತು 12ನೇ ತರಗತಿ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್​ಗೆ ತಿಳಿಸಿದೆ.

    ಕರೊನಾ ಸೋಂಕು ಹರಡುವುದು ಹೇಗೆ?: ಮೂರು ಹಂತಗಳ ವಿವರಣೆ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts