More

    ಪತಿ ಬದಲಿಗೆ ಬಾಯ್​ಫ್ರೆಂಡ್​ ನೆನಪಲ್ಲಿ ದೀಪಿಕಾ ಪಡುಕೋಣೆ!

    ಬಾಲಿವುಡ್​ ಬೆಡಗಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆಯಾಗಿ ಒಂದೂವರೆ ವರ್ಷ ಆಯ್ತು. ಹೀಗಿರುವಾಗ ಗಂಡ ಜತೆಗಿದ್ದರೂ, ಹಳೇ ಬಾಯ್​ಫ್ರೆಂಡ್​ ನೆನಪಾಗ್ತಿದ್ದಾನೆ ದೀಪಿಕಾಗೆ! ಹೌದು, ಬಾಯ್​ಫ್ರೆಂಡ್​ ಅನ್ನುತ್ತಿದ್ದಂತೆ ಹಲವರ ಹೆಸರುಗಳು ದೀಪಿಕಾ ಜತೆ ತಳುಕು ಹಾಕುತ್ತವೆ. ಆ ಪೈಕಿ ರಣಬೀರ್ ಕಪೂರ್​ ಅವರನ್ನು ನೆನಪು ಮಾಡಿಕೊಂಡಿದ್ದಾರೆ ದೀಪಿಕಾ.

    ಇದನ್ನೂ ಓದಿ: ಕ್ರೇಜಿಸ್ಟಾರ್ ರವಿಚಂದ್ರನ್​ ಹೆಸರಿನಲ್ಲಿ ನಕಲಿ ಟ್ವಿಟರ್​ ಖಾತೆ! 

    ಪತಿ ಬದಲಿಗೆ ಬಾಯ್​ಫ್ರೆಂಡ್​ ನೆನಪಲ್ಲಿ ದೀಪಿಕಾ ಪಡುಕೋಣೆ!

    ಹೌದು, ರಣಬೀರ್ ಕಪೂರ್​ ಮತ್ತು ದೀಪಿಕಾ ಪ್ರೇಮಿಸುತ್ತಿದ್ದಾರೆ. ಇನ್ನೇನು ಇವರಿಬ್ಬರ ವಿವಾಹವೂ ನೆರವೇರಲಿದೆ ಎಂದೇ ಸಾಕಷ್ಟು ಮಂದಿ ಮಾತನಾಡಿಕೊಂಡಿದ್ದರು. ಆದರೆ, ಆ ಪ್ರೇಮ್​ಕಹಾನಿ ಅರ್ಧದಲ್ಲೇ ನಿಂತಿತು. ಕಾರಣಾಂತರಗಳಿಂದ ಇಬ್ಬರೂ ದೂರವಾದರು. ಪ್ರೀತಿ ಕಡಿಮೆ ಆಯಿತು. ದಿನಗಳು ಉರುಳಿ ವರ್ಷಗಳು ಕಳೆದವು. ದೀಪಿಕಾ ಶಾಶ್ವತವಾಗಿ ರಣಬೀರ್​ನನ್ನು ಬಿಟ್ಟು ರಣವೀರ್​ ಸಿಂಗ್​ ಜತೆ ವಿವಾಹವಾದರು. ಇಷ್ಟೆಲ್ಲ ಘಟಿಸಿದರೂ ಇದೀಗ ಮತ್ತೆ ಹಳೇ ಪ್ರೇಮಿಯನ್ನು ನೆನಪು ಮಾಡಿಕೊಂಡಿದ್ದಾರೆ. ಜಾಲತಾಣದಲ್ಲಿ ಫೋಟೋ ಶೇರ್​ ಮಾಡಿಕೊಂಡು, ಒಂದೆರಡು ಸಾಲುಗಳನ್ನು ಬರೆದುಕೊಂಡಿದ್ದಾರೆ.

    ಪತಿ ಬದಲಿಗೆ ಬಾಯ್​ಫ್ರೆಂಡ್​ ನೆನಪಲ್ಲಿ ದೀಪಿಕಾ ಪಡುಕೋಣೆ!

    ಇದನ್ನೂ ಓದಿ: ಟಿಕ್‌ಟಾಕ್‌ನಲ್ಲಿ ನಕಲಿ ಕರಿಷ್ಮಾ ಕಪೂರ್ ಹವಾ!

    ಅಂದಹಾಗೆ, ಏಳು ವರ್ಷಗಳ ಹಿಂದೆ ಹೇ ಜವಾನಿ ಹೇ ದಿವಾನಿ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾಕ್ಕಾಗಿ ದೀಪಿಕಾ ಮತ್ತು ರಣಬೀರ್​ ಮೊದಲ ಬಾರಿ ಲುಕ್​ ಟೆಸ್ಟ್​ ಮಾಡಿಸಿಕೊಂಡಿದ್ದರು. ಅದರಲ್ಲಿನ ಕೆಲ ಫೋಟೋಗಳನ್ನು ಹಂಚಿಕೊಂಡು, ‘ನೆನಪುಗಳು ಒಂದು ರೀತಿ ಸಿಹಿತಿಂಡಿಯ ಡಬ್ಬದಂತೆ. ಒಂದು ಬಾರಿ ಅದನ್ನು ತೆರೆದರೆ, ಸಣ್ಣ ತುಣುಕನ್ನಾದರೂ ತಿನ್ನದೆ ಇರಲು ಸಾಧ್ಯವಿಲ್ಲ‘ ಎಂದಿದ್ದಾರೆ. (ಏಜೆನ್ಸೀಸ್​)

    PHOTOS| ಹಾಟ್​ ಅವತಾರದಲ್ಲಿ ಸುಹಾನಾ​; ಮಿರರ್​ ಸೆಲ್ಫಿ ಗೀಳಿಗೆ ಅಂಟಿಕೊಂಡ ಶಾರುಖ್​ ಪುತ್ರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts