More

    ಹೊಸ ಚಿತ್ರಕ್ಕೆ ದೀಪಿಕಾ ಮಾಡಿಕೊಂಡಿರುವ ತಯಾರಿ ಏನು?

    ಲಾಕ್‌ಡೌನ್ ಸಂದರ್ಭದಲ್ಲಿ ಬಹಳ ಸಕ್ರಿಯವಾಗಿದ್ದವರೆಂದರೆ, ಅದು ದೀಪಿಕಾ ಪಡುಕೋಣೆ. ಪ್ರತಿದಿನ ಒಂದಲ್ಲಾ ಒಂದು ಕೆಲಸದಲ್ಲಿ ನಿರತರಾಗುವುದರ ಜತೆಗೆ, ಆನ್‌ಲೈನ್ ಮೂಲಕವೇ ಕೆಲವು ಕಥೆಗಳನ್ನೂ ಕೇಳಿ, ಆ ಚಿತ್ರಗಳಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.

    ಇದನ್ನೂ ಓದಿ: ಸುಶಾಂತ್ ಪ್ರಕರಣವನ್ನು ಸಿಬಿಐಗೆ ನೀಡಿ ಎಂದ ನಿರ್ಭಯಾ ರೇಪ್​ ಕೇಸ್​ನ ವಕೀಲೆ!

    ಅದೆಲ್ಲಕ್ಕಿಂತ ಹೆಚ್ಚಾಗಿ, ಈ ಅವಧಿಯಲ್ಲಿ ಯೋಗ ಕಲಿಯುವುದರಲ್ಲಿ ಬಿಜಿಯಾಗಿದ್ದರಂತೆ ದೀಪಿಕಾ. ದೀಪಿಕಾ ಯೋಗ ಕಲಿಯುವುದಕ್ಕೆ ಕಾರಣ, ಶಕುನ್ ಬಾತ್ರಾ ನಿರ್ದೇಶನದ ಹೊಸ ಚಿತ್ರ. ಈ ಚಿತ್ರ ಏಪ್ರಿಲ್‌ನಲ್ಲೇ ಪ್ರಾರಂಭವಾಗಬೇಕಿತ್ತು. ಆದರೆ, ಕರೊನಾ ಮತ್ತು ಲಾಕ್‌ಡೌನ್ ಅದಕ್ಕೆ ಅಡ್ಡಗಾಲು ಹಾಕಿತು.

    ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಅವರು ಯೋಗಾ ಟೀಚರ್ ಪಾತ್ರ ಮಾಡುತ್ತಿದ್ದಾರೋ ಅಥವಾ ಬೇರೆ ಇನ್ನಾವ ಕಾರಣವೋ ಗೊತ್ತಿಲ್ಲ. ಒಟ್ಟಿನಲ್ಲಿ, ದೀಪಿಕಾ ಕಳೆದ ಕೆಲವು ತಿಂಗಳುಗಳಿಂದ ಪ್ರತಿ ದಿನ ಯೋಗ ಅಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ದೀಪಿಕಾ ಜತೆಗೆ ಈ ಚಿತ್ರದಲ್ಲಿ ಅನನ್ಯಾ ಪಾಂಡೆ ಮತ್ತು ಸಿದ್ಧಾಂತ್ ಚತುರ್ವೇದಿ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈಗ ಚಿತ್ರೀಕರಣ ಮಾಡುವುದಕ್ಕೆ ಅನುಮತಿ ಇದೆಯಾದರೂ, ಪರಿಸ್ಥಿತಿ ಇನ್ನೊಂದಿಷ್ಟು ಸುಧಾರಿಸಲಿ ಎಂದು ಚಿತ್ರತಂಡದವರು ಶೂಟಿಂಗ್ ಮಾಡುವ ಧೈರ್ಯ ಮಾಡುತ್ತಿಲ್ಲ.

    ಇದನ್ನೂ ಓದಿ: ‘ಫ್ರೆಂಚ್​​ ಬಿರಿಯಾನಿ’ಯಲ್ಲಿ ವಾಸುಕಿ ವೈಭವ್​ ಬತ್ತಳಿಕೆಯಿಂದ ಬಂತು ರ್ಯಾಪ್​ ಹಾಡು…

    ಇದಲ್ಲದೆ, ಹಾಲಿವುಡ್‌ನ ‘ದಿ ಇಂಟರ್ನ್’ ಚಿತ್ರದ ರೀಮೇಕ್‌ನಲ್ಲೂ ದೀಪಿಕಾ ನಟಿಸುತ್ತಿದ್ದು, ಅದು ಸಹ ಮುಂದಿನ ಕೆಲವು ತಿಂಗಳಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ.

    ಕಾಲಿವುಡ್​ ಸೂಪರ್​ಸ್ಟಾರ್​ ಅಜಿತ್​ಗೆ ಬೆದರಿಕೆ: ಮನೆಯಲ್ಲಿ ಬಾಂಬ್​ ಇಟ್ಟಿರುವುದಾಗಿ ಕರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts