More

    ಬಿಎಂಟಿಸಿ ಬಸ್​ ಪ್ರಯಾಣ ದರದಲ್ಲಿ ಇಳಿಕೆ; ಜನವರಿ 1ರಿಂದಲೇ ಜಾರಿ…

    ಬೆಂಗಳೂರು: ರಾಜಧಾನಿಯಲ್ಲಿ ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸುವವರಿಗೆ ಹೊಸ ವರ್ಷದ ಸಂಭ್ರಮ ಮತ್ತಷ್ಟು ಹೆಚ್ಚಾಗಲಿದೆ. ಏಕೆಂದರೆ, ಬಸ್​ ಪ್ರಯಾಣ ದರ, ದೈನಂದಿನ ಪಾಸ್​ ಮತ್ತು ಮಾಸಿಕ ಪಾಸ್​ ದರದಲ್ಲಿ ಕಡಿತಗೊಳಿಸಿ ಬಿಎಂಟಿಸಿ ಆದೇಶ ಹೊರಡಿಸಿದೆ. ವಿಶೇಷವೆಂದರೆ ಜನವರಿ 1ರಿಂದಲೇ ಈ ಆದೇಶ ಜಾರಿಗೆ ಬರಲಿದೆ.

    ಲಾಕ್​ಡೌನ್​ ಸಡಿಲಿಕೆ ನಂತರ ಮತ್ತೆ ಸಂಚಾರ ಆರಂಭಿಸಿರುವ ಬಿಎಂಟಿಸಿ ಬಸ್​ಗಳಿಗೆ ಪ್ರಯಾಣಿಕರ ಕೊರತೆ ಕಾಡುತ್ತಿದೆ. ಅದರಲ್ಲೂ ಕೆಲವು ಬಸ್​ಗಳಲ್ಲಿ ಈ ಹಿಂದಿನದ್ದಕ್ಕಿಂತ ಕಡಿಮೆ ಜನರು ಪ್ರಯಾಣಿಸುತ್ತಿದ್ದು, ಇದು ನಿರೀಕ್ಷಿತ ಪ್ರಮಾಣಕ್ಕಿಂತಲೂ ಕಡಿಮೆ ಇರುವುದರಿಂದ ಬಿಎಂಟಿಸಿ ಇಂಥದ್ದೊಂದು ಆದೇಶ ಹೊರಡಿಸಿದೆ.

    ಇದನ್ನೂ ಓದಿ: ರೈತರಿಗೆ ‘ಹ್ಯಾಪಿ ನ್ಯೂ ಇಯರ್​?’; ಕೇಂದ್ರ ಸರ್ಕಾರದಿಂದ ಹೊಸ ಆಫರ್!

    ಆದರೆ ಈ ಆದೇಶ ಎಸಿ ಬಸ್​​ನಲ್ಲಿ ಪ್ರಯಾಣಿಸುವವರಿಗೆ ಖುಷಿ ಹಾಗೂ ಬಿಎಂಟಿಸಿಯ ಇತರ ಬಸ್​​ಗಳಲ್ಲಿ ಸಂಚರಿಸುವವರ ಕೈಗೆ ಬಿಸಿ ಎಂಬಂತಾದರೂ ಅಚ್ಚರಿ ಇಲ್ಲ. ಏಕೆಂದರೆ ಬಿಎಂಟಿಸಿಯ ಆದೇಶ ಹವಾನಿಯಂತ್ರಿತ ಬಸ್​ಗಳಿಗಷ್ಟೇ ಅನ್ವಯಿಸಲಿದೆ. ಹವಾನಿಯಂತ್ರಿತ ಬಸ್​ಗಳಲ್ಲಿ ಕಡಿಮೆ ಜನರು ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಹವಾನಿಯಂತ್ರಿತ ವಜ್ರ ಬಸ್​ಗಳಿಗೆ ಪ್ರಯಾಣಿಕರನ್ನು ಹೆಚ್ಚಿನ ಪ್ರಮಾಣದಲ್ಲಿ ಆಕಷಿರ್ಸುವ ಸಲುವಾಗಿ ಜ. 1ರಿಂದ ಪ್ರಯಾಣ ದರ, ದೈನಂದಿನ ಮತ್ತು ಮಾಸಿಕ ಪಾಸ್​ ದರದಲ್ಲಿ ಶೇ. 20 ಕಡಿತಗೊಳಿಸಲಾಗುತ್ತಿದೆ.

    ಈ ರಿಯಾಯಿತಿ ವಜ್ರ ಬಸ್​ಗಳಿಗಷ್ಟೇ ಸೀಮಿತವಾಗಿದ್ದು, ಸಾಮಾನ್ಯ ಬಸ್​ ಮತ್ತು ವಾಯುವಜ್ರ ಸೇವೆಗಳಿಗೆ ಅನ್ವಯವಾಗುವುದಿಲ್ಲ. ಹೀಗಾಗಿ ಆ ಬಸ್​ಗಳ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

    54ರ ಫಾಸ್ಟರ್ ಜತೆ ಏನಾಯ್ತು? ಅಜ್ಞಾತ ಸ್ಥಳದಿಂದಲೇ ವಿಡಿಯೋ ಕಳಿಸಿದ್ಳು 24ರ ಯುವತಿ

    10 ವರ್ಷದಿಂದ ಕತ್ತಲ ಕೋಣೆಯಲ್ಲೇ ಇದ್ದ ಒಡಹುಟ್ಟಿದವರು! ಮಾಟ ಮಂತ್ರವೇ ಕಾರಣವೆಂದ ಅಪ್ಪ!

    ಮೋದಿ ಉದ್ಘಾಟಿಸಿದ ಈ ಸುರಂಗ ಮಾರ್ಗದಲ್ಲಿ ಭಾನುವಾರ ಏನಾಯ್ತು ಗೊತ್ತಾ?!

    ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಬೇಕೆಂದಿದ್ದೀರಾ.. ಇನ್ಮೇಲೆ ಇದೊಂದಕ್ಕೇ ಇ-ಮೇಲ್ ಮಾಡಿದರೆ ಸಾಕು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts