More

    2 ವಾರಗಳಲ್ಲಿ ಮಹಿಳೆಯರ ವಿಶ್ವಕಪ್ ಭವಿಷ್ಯ ನಿರ್ಧಾರ

    ವೆಲ್ಲಿಂಗ್ಟನ್: ಪುರುಷರ ಟಿ20 ವಿಶ್ವಕಪ್‌ನಂತೆ ಭವಿಷ್ಯದ ಬಗ್ಗೆ ಗೊಂದಲಗಳನ್ನು ಮೂಡಿಸದೆ, ಮುಂದಿನ ವರ್ಷದ ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯ ಭವಿಷ್ಯವನ್ನು ಮುಂದಿನ 2 ವಾರಗಳಲ್ಲಿ ತೆಗೆದುಕೊಳ್ಳುವುದಾಗಿ ಆತಿಥೇಯ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಚೇರ್ಮನ್ ಗ್ರೇಗ್ ಬರ್‌ಕ್ಲೇ ತಿಳಿಸಿದ್ದಾರೆ.

    ಮುಂದಿನ ವರ್ಷ ೆಬ್ರವರಿ 6ರಿಂದ ಮಾರ್ಚ್ 7ರವರೆಗೆ ನ್ಯೂಜಿಲೆಂಡ್‌ನಲ್ಲಿ ನಡೆಯಬೇಕಿರುವ ಮಹಿಳೆಯರ ವಿಶ್ವಕಪ್ ನಿಗದಿಯಂತೆಯೇ ನಡೆಯಲಿದೆ ಎಂದು ಐಸಿಸಿ ಸೋಮವಾರದ ಸಭೆಯ ಬಳಿಕ ತಿಳಿಸಿತ್ತು. ಆದರೆ ಆತಿಥೇಯ ನ್ಯೂಜಿಲೆಂಡ್ ಮಾತ್ರ, ಟಿ20 ವಿಶ್ವಕಪ್‌ನಂತೆ ತಡ ಮಾಡದೆ 2 ವಾರಗಳಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲು ಬಯಸಿದೆ.

    ಇದನ್ನೂ ಓದಿ: ಟಿ20 ವಿಶ್ವಕಪ್ ಮುಂದೂಡಿದ ಐಸಿಸಿ; ಐಪಿಎಲ್ ಹಾದಿ ಸುಗಮ…

    ‘ಟೂರ್ನಿ ಮುಂದೂಡುವುದೇ ಆದರೆ ಅದನ್ನು ಬೇಗನೆ ನಿರ್ಧರಿಸಬೇಕು. ಒಂದು ವೇಳೆ ನಿಗದಿಯಂತೆಯೇ ನಡೆಸುವುದೇ ಆದರೆ ಅದನ್ನೂ ಬೇಗನೆ ನಿರ್ಧರಿಸಿದರೆ ಸಿದ್ಧತೆಗಳಿಗೆ ಅನುಕೂಲವಾಗುತ್ತದೆ. ನ್ಯೂಜಿಲೆಂಡ್ ಕರೊನಾ ಮುಕ್ತವಾಗಿದ್ದರೂ, ವಿಶ್ವದ ಇತರ ದೇಶಗಳಲ್ಲಿ ಪ್ರಯಾಣ ನಿರ್ಬಂಧ ಇರುವುದರಿಂದಾಗಿ, ಟೂರ್ನಿಯ ವೇಳೆಗೆ ತಂಡಗಳಿಗೆ ಪಾಲ್ಗೊಳ್ಳಲು ಸಾಧ್ಯವಾಗುವುದೇ ಎಂಬ ಬಗ್ಗೆಯೂ ಪರಿಶೀಲಿಸಬೇಕಾಗಿದೆ ಎಂದು ಬರ್‌ಕ್ಲೇ ತಿಳಿಸಿದ್ದಾರೆ.

    ಯುಎಇಯಲ್ಲಿ ಐಪಿಎಲ್​ ನಡೆದರೆ ಆರ್​ಸಿಬಿಗೆ ಟ್ರೋಫಿ ಗೆಲ್ಲುವ ಅದೃಷ್ಟ ಇದೆಯಂತೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts