More

    ಉಸಿರಾಟದ ಸಮಸ್ಯೆಗೆ ಕಾರಣ ಹೇಳಲಿದೆ ‘ಡಿಸೆಂಬರ್ 24’ ಸಿನಿಮಾ; 25ರಿಂದ ಕೊನೇ ಹಂತದ ಶೂಟಿಂಗ್​

    ಬೆಂಗಳೂರು: ಈಗಿನ ಕಾಲಘಟ್ಟದಲ್ಲಿ ನಡೆಯುವಂತಹ, ಮೆಡಿಕಲ್ ರಿಸರ್ಚ್‍ಗೆ ಸಂಬಂಧಪಟ್ಟಂಥ ಒಂದಷ್ಟು ಘಟನೆಗಳನ್ನಿಟ್ಟುಕೊಂಡು ನಿರ್ಮಾಣವಾಗುತ್ತಿರುವ ‘ಡಿಸೆಂಬರ್ 24‘ ಚಿತ್ರಕ್ಕೆ ಕೊನೇ ಹಂತದ ಚಿತ್ರೀಕರಣ ಮಾರ್ಚ್ 25ರಿಂದ ಆರಂಭವಾಗಲಿದೆ. ಹುಲಿಯೂರು ದುರ್ಗ, ಕುಣಿಗಲ್, ಮಾಗಡಿ ಸುತ್ತಮುತ್ತ ಈ ಹಂತದಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ನಾಗರಾಜ್ ಎಂಜಿ ಗೌಡ ಅವರು ಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ದೇವು ಹಾಸನ್, ಹಾಗೂ ಮಂಜು ಡಿ.ಟಿ, ಬೆಟ್ಟೇಗೌಡ ಸೇರಿ ಬಂಡವಾಳ ಹೂಡಿದ್ದಾರೆ.

    ಇದನ್ನೂ ಓದಿ:ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಸೋನಾಕ್ಷಿ ಸಿನ್ಹಾ !

    ನಮ್ಮ ದೇಶದಲ್ಲಿ ಪ್ರತಿದಿನ ಹುಟ್ಟುವ ನೂರು ಮಕ್ಕಳಲ್ಲಿ ಮೂವರು ಮಕ್ಕಳು ಉಸಿರಾಟದ ಸಮಸ್ಯೆಯಿಂದಲೇ ಮರಣ ಹೊಂದುತ್ತಿವೆ. ಇದಕ್ಕೆ ವೈದ್ಯಕೀಯ ಸಂಶೋಧನೆಯಲ್ಲಿ ಈವರೆಗೆ ಯಾವುದೇ ನಿಖರ ಔಷಧಿಯನ್ನು ಕಂಡುಹಿಡಿಯಲಾಗಿಲ್ಲ. ಕೆಲ ಸಂಶೋಧನೆಗಳು ನಡೆದಿದ್ರೂ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಇಂತಹದೊಂದು ಅಂತಾರಾಷ್ಟ್ರೀಯ ಮಟ್ಟದ ಸಮಸ್ಯೆಯನ್ನು ಮುಂದಿಟ್ಟುಕೊಂಡು ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ.

    ಇಂಥ ಉಸಿರಾಟದ ಸಮಸ್ಯೆಯಿಂದ ಜೀವ ಕಳೆದುಕೊಳ್ಳುತ್ತಿರುವ ಮಕ್ಕಳನ್ನು ಉಳಿಸಿಕೊಳ್ಳಲು ಕೆಲ ವೈದ್ಯಕೀಯ ವಿದ್ಯಾರ್ಥಿಗಳು ಸಂಶೋಧನೆ ನಡೆಸಲು ಮುಂದಾಗುತ್ತಾರೆ. ಅಲ್ಲದೆ ಅವರು ಅದರಲ್ಲಿ ಯಶಸ್ಸನ್ನೂ ಸಾಧಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಕಥಾಹಂದರನ್ನು ಈ ಚಿತ್ರದ ಮೂಲಕ ನಿರ್ದೇಶಕ ನಾಗರಾಜ್ ಗೌಡ ಅವರು ಹೇಳಹೊರಟಿದ್ದಾರೆ. 2015ರಿಂದ 2019ರ ನಡುವೆ ನಡೆಯುವ ಕೆಲವೊಂದು ನೈಜ ಘಟನೆಗಳನ್ನಿಟ್ಟುಕೊಂಡು ಸ್ಕ್ರಿಪ್ಟ್ ಮಾಡಲಾಗಿರುವ ಈ ಚಿತ್ರದಲ್ಲಿ ಪಕ್ಕಾ ಫ್ಯಾಮಿಲಿ, ಲವ್, ಫ್ರೆಂಡ್‍ಷಿಪ್ ಹಾಗೂ ಹಾರರ್, ಥ್ರಿಲ್ಲರ್‍ ರೀತಿಯ ಎಲ್ಲ ಮನರಂಜನಾತ್ಮಕ ಅಂಶಗಳನ್ನು ಹೇಳಲಾಗುತ್ತಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕರು.

    ಇದನ್ನೂ ಓದಿ: ಪೈರಸಿ ಮಾಡಿದರೆ ಘೋರ ಪರಿಣಾಮ; ರಾಬರ್ಟ್ ನಿರ್ಮಾಪಕ ಉಮಾಪತಿ ಎಚ್ಚರಿಕೆ

    ಈ ಚಿತ್ರದಲ್ಲಿ ನಾಯಕರಾಗಿ ಉತ್ತರ ಕರ್ನಾಟಕದ ಪ್ರತಿಭೆ ಯಾದಗಿರಿ ಜಿಲ್ಲೆಯ ವಂದಗನೂರು ಗ್ರಾಮದ ಅಪ್ಪು ಬಡಿಗೇರ, ರವಿ ಕೆ.ಆರ್. ಪೇಟೆ, ರಘುಶೆಟ್ಟಿ, ಜಗದೀಶ್ ಹೆಚ್.ಜಿ. ದೊಡ್ಡಿ, ರಾಮಾಚಾರಿ ಸಾಗರ್, ಹಾಗೂ ನಾಯಕಿಯರಾಗಿ ಭೂಮಿಕಾ ರಮೇಶ್, ಮಿಲನ ರಮೇಶ್ ಹಾಗೂ ದಿವ್ಯಾ ಆಚಾರ್ ಅಭಿನಯಿಸುತ್ತಿದ್ದಾರೆ. ಅಲ್ಲದೆ ಅನಿಲ್‍ಗೌಡ್ರು, ಕುಮಾರ್‍ಗೌಡ್ರು ಹುಲಿಕಟ್ಟೆ, ಬೆಟ್ಟೇಗೌಡ, ಹಿರಿಯ ನಟಿ ಅಭಿನಯ, ಭಾಸ್ಕರ್, ಅನುಪಮ, ಮೈಕಲ್ ದೇವರಾಜ್ ಅಲ್ಲದೆ ಸ್ಟಾರ್ ನಟರೊಬ್ಬರು ಕೂಡ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ಜೊತೆಗೆ ಆನಂದ್ ಪಟೇಲ್ ಹುಲಿಕಟ್ಟೆ ಅವರು ಒಬ್ಬ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಈ ಚಿತ್ರದ 4 ಹಾಡುಗಳಿಗೆ ಪ್ರವೀಣ್‍ ನಿಕೇತನ್ ಅವರ ಸಂಗೀತ ಸಂಯೋಜನೆಯಿದ್ದು, ವಿ.ನಾಗೇಂದ್ರ ಪ್ರಸಾದ್, ಗೀತಾ ಆನಂದ ಪಾಟೀಲ್, ವಿಶಾಲ್ ಆಲಾಪ್ ಸಾಹಿತ್ಯ ರಚಿಸಿದ್ದಾರೆ. ವಿನಯ್‍ಗೌಡ ಅವರ ಛಾಯಾಗ್ರಹಣ, ಹೈಟ್ ಮಂಜು, ಬಾಲು ಮಾಸ್ಟರ್ ಅವರ ನೃತ್ಯ, ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

    ಒಂದೇ ಟೇಕ್​ನಲ್ಲಿ ಮೂಡಿಬಂದಿದೆ ಪಾರಿವಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts