More

    10 ವರ್ಷದ ನಂತರ ಮೃತ ವ್ಯಕ್ತಿ ಕುಟುಂಬಕ್ಕೆ ಏಳೂವರೆ ಕೋಟಿ ರೂ. ಪರಿಹಾರ!

    ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 2010ರ ಮೇ 22ರಂದು ಸಂಭವಿಸಿದ್ದ ವಿಮಾನ ದುರಂತದಲ್ಲಿ ಮೃತಪಟ್ಟ ಮಹೇಂದ್ರ ಕೊಡ್ಕನಿ ಅವರ ಕುಟುಂಬಕ್ಕೆ 7.6 ಕೋಟಿ ರೂ. ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
    ಮಹೇಂದ್ರ ಅವರ ಪತ್ನಿ, ಪುತ್ರಿ ಹಾಗು ಪುತ್ರನಿಗೆ ರೂ.7.6 ಕೋಟಿ ಮೊತ್ತವನ್ನು ವಾರ್ಷಿಕ ಶೇ. 9 ಬಡ್ಡಿ ಸೇರಿಸಿ ಪಾವತಿಸುವಂತೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

    ಮಹೇಂದ್ರ ಯುಎಇ ಮೂಲದ ಕಂಪನಿಯೊಂದರಲ್ಲಿ ರೀಜನಲ್ ಡೈರೆಕ್ಟರ್ ಆಗಿದ್ದರು. ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಯಾನ ಸಂಸ್ಥೆ ಪರಿಹಾರ ನೀಡಿತ್ತು. ಆದರೆ ಈ ಪರಿಹಾರ ನ್ಯಾಯ ಸಮ್ಮತವಾಗಿಲ್ಲ ಎಂದು ಕೊಡ್ಕನಿ ಕುಟುಂಬಸ್ಥರು ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

    ಇದನ್ನೂ ಓದಿರಿ ಗ್ರಾಮಸ್ಥರ ಪ್ರತಿಭಟನೆಗೆ ಬೆಚ್ಚಿ 5 ತಾಸು ಬಸ್​ನಲ್ಲೇ ಕುಳಿತರು!

    ಆಯೋಗ ಪರಿಹಾರ ಮೊತ್ತವನ್ನು ಹೆಚ್ಚಿಸಿ ರೂ.7.35 ಕೋಟಿ ರೂ.ಗಳನ್ನು ವಾರ್ಷಿಕ ಶೇ. 9 ಬಡ್ಡಿ ಸಮೇತ ನೀಡಬೇಕೆಂದು ಆದೇಶ ನೀಡಿತ್ತು. ಆದರೆ ವಿಮಾನ ಯಾನ ಸಂಸ್ಥೆ ಹೆಚ್ಚುವರಿ ಮೊತ್ತ ನೀಡಲು ಒಪ್ಪದ ಕಾರಣ ಕುಟುಂಬಸ್ಥರು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು.

    ಮಹೇಂದ್ರ ಹೆಚ್ಚಿನ ವೇತನದ ಹುದ್ದೆ ಹೊಂದಿದ್ದರು. ಅವರು ಪಡೆಯುತ್ತಿದ್ದ ವೇತನವನ್ನುಪರಿಗಣಿಸಿ ಹೆಚ್ಚುವರಿ ಪರಿಹಾರ ನೀಡುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಮಂಗಳೂರು ವಿಮಾನ ದುರಂತದಲ್ಲಿ ಮೃತ ಪಟ್ಟವರ ಪೈಕಿ ಅತಿ ಹೆಚ್ಚು ಪರಿಹಾರ ಪಡೆದ ಪ್ರಕರಣ ಇದಾಗಿದೆ.

    ಇದನ್ನೂ ಓದಿರಿ ಹಣಕ್ಕಾಗಿ ಯುವತಿಯರನ್ನು ಕೂಡಿ ಹಾಕಿದ ಪಿಜಿ ಮಾಲೀಕ!

    ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ 2010ರ ಮೇ 22ರಂದು ಬೆಳಗ್ಗೆ ಆಗಮಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಜಾರಿ ಕಂದಕಕ್ಕೆ ಉರುಳಿ ಅವಘಡಕ್ಕೀಡಾಗಿತ್ತು. 160 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಸಹಿತ 166 ಮಂದಿಯನ್ನು ವಿಮಾನ ಹೊತ್ತು ತಂದಿತ್ತು. ಈ ಪೈಕಿ ಎಲ್ಲ ಸಿಬ್ಬಂದಿ ಹಾಗೂ 158 ಪ್ರಯಾಣಿಕರು ಮೃತಪಟ್ಟು 8 ಮಂದಿ ಪವಾಡ ಸದೃಶವಾಗಿ ಬದುಕುಳಿದಿದ್ದರು.

    ಇದನ್ನೂ ಓದಿರಿ VIDEO |ಸ್ಯಾನಿಟೈಸರ್ ನಿಂದಾಗಿ ಕಾರು ಬೆಂಕಿಗೆ ಆಹುತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts