More

    ಆಕ್ಸಿಜನ್ ಕೊರತೆಯಿಂದ ಸಾವು: ರಾಜ್ಯಗಳಿಂದ ಮಾಹಿತಿ ಕೋರಿದ ಕೇಂದ್ರ

    ನವದೆಹಲಿ : ಸಂಸತ್ತಿನಲ್ಲಿ ತನ್ನ ವಿವಾದಾತ್ಮಕ ಹೇಳಿಕೆಯಿಂದಾಗಿ ವಿಪಕ್ಷಗಳ ಆಕ್ರೋಶಕ್ಕೆ ಗುರಿಯಾದ ಕೇಂದ್ರ ಸರ್ಕಾರ, ಇದೀಗ ಕರೊನಾ ಎರಡನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಉಂಟಾದ ಸಾವುಗಳ ಬಗ್ಗೆ ರಾಜ್ಯ ಸರ್ಕಾರಗಳಿಂದ ಮಾಹಿತಿ ಕೋರಿದೆ. ಸಂಸತ್ತಿನ ಮುಂಗಾರು ಅಧಿವೇಶನವು ಮುಗಿಯುವ ವೇಳೆಗೆ ಈ ಮಾಹಿತಿಯನ್ನು ಕ್ರೋಢೀಕರಿಸಿ ಸದನದ ಮುಂದಿಡಲಾಗುವುದು ಎನ್ನಲಾಗಿದೆ.

    ಕರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಆರೋಗ್ಯ ಮೂಲಸೌಕರ್ಯಗಳ ಮೇಲೆ ವಿಪರೀತ ಒತ್ತಡ ಬಿದ್ದು, ದೇಶದ ವಿವಿಧೆಡೆ ನೂರಾರು ಜನರು, ಅನ್ಯಕಾರಣಗಳೊಂದಿಗೆ ಆಕ್ಸಿಜನ್​ ಕೊರತೆಯಿಂದಾಗಿಯೂ ಸಾವಪ್ಪಿದ್ದು ವರದಿಯಾಗಿತ್ತು. ಆದರೆ, ಸಂಸತ್ತಿನ ಆರಂಭದ ಕಲಾಪದಲ್ಲಿ ಸರ್ಕಾರವು, “ಆಕ್ಸಿಜನ್ ಕೊರತೆಯಿಂದಾಗಿ ಉಂಟಾಗಿರುವ ಸಾವುಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿರ್ದಿಷ್ಟವಾಗಿ ವರದಿ ಮಾಡಿಲ್ಲ” ಎಂದು ಹೇಳಿಕೆ ನೀಡಿತ್ತು.

    ಇದನ್ನೂ ಓದಿ: ಕರೊನಾ: ಒಂದೇ ದಿನದಲ್ಲಿ ನಿತ್ಯಪ್ರಕರಣ ಸಂಖ್ಯೆಯಲ್ಲಿ ಶೇ. 47ರಷ್ಟು ಏರಿಕೆ!

    ಆರೋಗ್ಯವು ರಾಜ್ಯಗಳಿಗೆ ಸಂಬಂಧಪಟ್ಟ ವಿಚಾರವಾದ್ದರಿಂದ ರಾಜ್ಯಗಳು ಕಾಲಕಾಲಕ್ಕೆ ವರದಿ ಮಾಡುವ ಅಂಕಿಅಂಶಗಳನ್ನು ಕ್ರೋಢೀಕರಿಸಿ ದೇಶದ ಮುಂದಿಡುವುದಷ್ಟೇ ಕೇಂದ್ರ ಸರ್ಕಾರ ಮಾಡುವ ಕೆಲಸ ಎಂದು ಆರೋಗ್ಯ ಖಾತೆಯ ರಾಜ್ಯ ಸಚಿವರಾದ ಭಾರತಿ ಪ್ರವೀಣ್ ಪವಾರ್​ ರಾಜ್ಯಸಭೆಯಲ್ಲಿ ವಿವರಣೆ ನೀಡಿದ್ದರು. ಈ ವಿಚಾರ ಸರ್ಕಾರ ಮತ್ತು ವಿಪಕ್ಷಗಳ ನಡುವೆ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿತ್ತು. (ಏಜೆನ್ಸೀಸ್)

    ‘ಗುಚಿ’ಯೊಂದಿಗೆ ರಣವೀರ್​ ಸಿಂಗ್​ರ ಆಕರ್ಷಕ ಲುಕ್ಸ್​ ನೋಡಿ!

    ನೂತನ ಸಿಎಂ ಬೊಮ್ಮಾಯಿಗೆ ಮೋದಿ ಅಭಿನಂದನೆ; ಬಿಎಸ್​ವೈ ಬಗ್ಗೆ ಪ್ರಶಂಸೆಯ ಮಾತು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts