More

    ನೂತನ ಸಿಎಂ ಬೊಮ್ಮಾಯಿಗೆ ಮೋದಿ ಅಭಿನಂದನೆ; ಬಿಎಸ್​ವೈ ಬಗ್ಗೆ ಪ್ರಶಂಸೆಯ ಮಾತು

    ನವದೆಹಲಿ : ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ ಮುಖಾಂತರ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಯಲ್ಲೇ ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಶ್ಲಾಘನೆಯ ಮಾತುಗಳನ್ನಾಡಿದ್ದಾರೆ. ರಾಜ್ಯದ ರಾಜಕೀಯ ಬೆಳವಣಿಗೆಗಳ ಸಂಬಂಧವಾಗಿ ಇದು ಮೋದಿ ಅವರ ಮೊದಲ ಪ್ರತಿಕ್ರಿಯೆಯಾಗಿದೆ.

    “ಕರ್ನಾಟಕದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳು. ಅವರು ಶ್ರೀಮಂತ ಶಾಸನಾತ್ಮಕ ಮತ್ತು ಆಡಳಿತಾತ್ಮಕ ಅನುಭವವನ್ನು ಹೊಂದಿದ್ದಾರೆ. ನಮ್ಮ ಸರ್ಕಾರವು ರಾಜ್ಯದಲ್ಲಿ ಮಾಡಿರುವ ಅಸಾಧಾರಣ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂದು ವಿಶ್ವಾಸ ಹೊಂದಿದ್ದೇನೆ. ಫಲಪ್ರದ ಅಧಿಕಾರಾವಧಿಗೆ ಶುಭಾಶಯಗಳು” ಮೋದಿ ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ಸಿಎಂ ಕಚೇರಿಯಲ್ಲಿ ಪೂಜೆ ಸಲ್ಲಿಸಿ ಕುರ್ಚಿ ಮೇಲೆ ಕುಳಿತ ಬೊಮ್ಮಾಯಿ

    ಮತ್ತೊಂದು ಟ್ವೀಟ್​ನಲ್ಲಿ, “ನಮ್ಮ ಪಕ್ಷದ ಕಡೆಗೆ ಮತ್ತು ಕರ್ನಾಟಕದ ಬೆಳವಣಿಗೆಗೆ ಶ್ರೀ ಬಿ.ಎಸ್.ಯಡಿಯೂರಪ್ಪ ಅವರ ಅಗಾಧ ಕೊಡುಗೆಯನ್ನು ಬಣ್ಣಿಸುವಲ್ಲಿ ಯಾವುದೇ ಶಬ್ದಗಳು ಎಂದಿಗೂ ನ್ಯಾಯ ಒದಗಿಸುವುದಿಲ್ಲ. ಅವರು ದಶಕಗಳ ಕಾಲ ಕಷ್ಟಪಟ್ಟು ದುಡಿದು, ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಸಂಚರಿಸಿ ಜನರೊಂದಿಗೆ ಒಡನಾಡಿದ್ದಾರೆ. ತಮ್ಮ ಸಾಮಾಜಿಕ ಕಲ್ಯಾಣದ ಬಗೆಗಿನ ಬದ್ಧತೆಗಾಗಿ ಅವರು ಮೆಚ್ಚುಗೆ ಪಡೆದಿದ್ದಾರೆ” ಎಂದು ಮೋದಿ ಹೇಳಿದ್ದಾರೆ.

    ಪದಕ ತಂದ ಪದವಿ: ಮೀರಾಬಾಯಿ ಆಗಲಿದ್ದಾರೆ ಉನ್ನತ ಪೊಲೀಸ್​ ಅಧಿಕಾರಿ!

    ಪೆಗಾಸಸ್ ವಿರುದ್ಧ ದೀದಿ ಕದನ; ಕೇಂದ್ರ ಮಾಡದ್ದನ್ನು ಬಂಗಾಳ ಸರ್ಕಾರ ಮಾಡಿತು!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts