More

    ಕರೊನಾ: ಒಂದೇ ದಿನದಲ್ಲಿ ನಿತ್ಯಪ್ರಕರಣ ಸಂಖ್ಯೆಯಲ್ಲಿ ಶೇ. 47ರಷ್ಟು ಏರಿಕೆ!

    ನವದೆಹಲಿ : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 43,654 ಹೊಸ ಕರೊನಾ ಕೇಸುಗಳು ದಾಖಲಾಗಿವೆ. ಇದು ನಿನ್ನೆಯ ದಿನ ವರದಿಯಾದ ಸೋಂಕಿಗಿಂತ ಶೇ. 47 ರಷ್ಟು ಹೆಚ್ಚಾಗಿದೆ. ನಾಲ್ಕು ತಿಂಗಳ ನಂತರ, ಸೋಮವಾರದಂದು ದೇಶದ ಕರೊನಾ ನಿತ್ಯಪ್ರಕರಣ ಸಂಖ್ಯೆಯು 30,000ದ ಕೆಳಗಿಳಿದಿತ್ತು. ಆದರೆ, ಮತ್ತೆ ಮಂಗಳವಾರದಂದು ಭಾರೀ ಏರಿಕೆ ಕಂಡುಬಂದಿದೆ.

    ದೇಶದ ಸರಾಸರಿ ಪಾಸಿಟಿವಿಟಿ ರೇಟ್ 2.51 ಆಗಿದ್ದು, ಇಂದು ದೇಶಾದ್ಯಂತ 3,99,436 ಆ್ಯಕ್ಟೀವ್​ ಪ್ರಕರಣಗಳಿವೆ. ಕಳೆದ 24 ದಿನಗಳಲ್ಲಿ 640 ಜನರು ಕರೊನಾಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

    ಇದನ್ನೂ ಓದಿ: ಕರೊನಾ ಲಸಿಕೆಯನ್ನು ಅರೆಬರೆ ಬಳಸಿ ಬಿಸಾಡಿದ ಆಸ್ಪತ್ರೆ ಸಿಬ್ಬಂದಿ!

    ಕೇರಳದಲ್ಲಿ 22,129 ಹೊಸ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 6,258, ತಮಿಳುನಾಡಿನಲ್ಲಿ 1,767 ಮತ್ತು ಕರ್ನಾಟಕದಲ್ಲಿ 1,501 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಕೇರಳ ಮತ್ತು ಮಹಾರಾಷ್ಟ್ರಗಳಿಂದಲೇ ದೇಶದ ಅರ್ಧದಷ್ಟು ಪ್ರಕರಣಗಳು ವರದಿಯಾಗುತ್ತಿವೆ. ಈ ರಾಜ್ಯಗಳ ಆರೋಗ್ಯ ಮೂಲಸೌಕರ್ಯಗಳು ಉತ್ತಮವಾಗಿರುವುದರಿಂದ ಮರಣ ಸಂಖ್ಯೆ ಕಡಿಮೆ ಇದೆ ಎನ್ನಲಾಗಿದೆ.

    ಈವರೆಗೆ 44.61 ಕೋಟಿ ಕರೊನಾ ಲಸಿಕೆ ಡೋಸ್​ಗಳನ್ನು ನೀಡಲಾಗಿದ್ದು, ಈ ವರ್ಷದ ಕೊನೆವರೆಗೆ ದೇಶದ ಎಲ್ಲ ವಯಸ್ಕರಿಗೆ ಲಸಿಕೆ ನೀಡಿ ಪೂರೈಸುವ ಗುರಿಯನ್ನು ಸರ್ಕಾರ ಹೊಂದಿದೆ. ಇನ್ನು ಕೆಲವೇ ದಿನಗಳಲ್ಲಿ ಮಕ್ಕಳ ಕರೊನಾ ಲಸಿಕೆ ಅನುಮೋದನೆ ಪಡೆಯಲಿದೆ ಎಂದು ನಿನ್ನೆ ಸಂಸತ್ತಿನಲ್ಲಿ ನಡೆದ ಬಿಜೆಪಿ ಸಂಸದರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ನೂತನ ಸಿಎಂ ಬೊಮ್ಮಾಯಿಗೆ ಮೋದಿ ಅಭಿನಂದನೆ; ಬಿಎಸ್​ವೈ ಬಗ್ಗೆ ಪ್ರಶಂಸೆಯ ಮಾತು

    ಲಸಿಕೆ ಪಡೆದವರಲ್ಲಿ ಹೆಚ್ಚಿನ ಸೋಂಕು! ಆದರೆ, ಪಡೆಯದವರಲ್ಲಿ ಹೆಚ್ಚು ಗಂಭೀರ ಸ್ಥಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts