ಬೀದರ್: ಹುಟ್ಟುಹಬ್ಬ ಆಚರಣೆ ವೇಳೆ ಕೇಕ್ ಎಲ್ಲರ ಫೇವರಿಟ್ ಎಂಬುದರಲ್ಲಿ ಸಂಶಯವಿಲ್ಲ. ಕೇಕ್ ಇಷ್ಟಪಡುವವರ ಸಂಖ್ಯೆಯೇನು ಕಮ್ಮಿ ಇಲ್ಲ. ಹೀಗಾಗಿ ಕೇಕ್ ಸಿಕ್ಕಿತ್ತು ಎನ್ನುವ ಭರದಲ್ಲಿ ಹಿಂದೆ ಮುಂದೆ ನೋಡದೆ ಹಾಗೇ ಬಾಯಿಗೆ ಇಟ್ಟುಕೊಳ್ಳುವುದು ಸೂಕ್ತವಲ್ಲ ಎಂಬುದಕ್ಕೆ ಈ ಸ್ಟೋರಿ ಎಚ್ಚರಿಕೆಯ ಗಂಟೆಯಾಗಿದೆ.
ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಔಸಾ ಪಟ್ಟಣದಲ್ಲಿ ವ್ಯಕ್ತಿಯೊಬ್ಬರು ತಮ್ಮ ಜೀಕಾರಾ ಶೇಖ್ ಎಂಬ 1 ವರ್ಷದ ಮಗುವಿನ ಜನ್ಮದಿನ ಆಚರಣೆಗೆ 4 ಸಾವಿರಕ್ಕೂ ಅಧಿಕ ಖರ್ಚು ಮಾಡಿ ಬೇಕರಿಯಿಂದ ಕೇಕ್ ತರಿಸಿದ್ದರು. ಬರೀ ಕೇಕ್ ಮಾತ್ರ ಬಂದಿದ್ದರೆ ತೊಂದರೆಯಾಗುತ್ತಿರಲಿಲ್ಲ. ಆದರೆ, ಕೇಕ್ ಒಳಗೆ ಸತ್ತ ಹಾವಿನ ಮರಿಯೂ ಬಂದಿದ್ದರಿಂದ, ಅದನ್ನು ತಿಂದ 8ಕ್ಕೂ ಅಧಿಕ ಮಂದಿ ಇದೀಗ ಆಸ್ಪತ್ರೆಯ ಪಾಲಾಗಿದ್ದಾರೆ.
ಮಾರ್ಚ್ 8 ರಂದು ಜನ್ಮದಿನ ಆಚರಣೆ ಹಿನ್ನೆಲೆಯಲ್ಲಿ ಮಾರ್ಚ್ 04ರಂದು ಕೇಕ್ ಆರ್ಡರ್ ಮಾಡಿದ್ದರು. ಮಾರ್ಚ್ 8ರ ರಾತ್ರಿ ಹುಟ್ಟುಹಬ್ಬ ಆಚರಿಸಿದ್ದಾರೆ. ಬಳಿಕ ಕೇಕ್ ಕತ್ತರಿಸಿ ಆಚರಣೆಯಲ್ಲಿ ಭಾಗಿಯಾಗಿದ್ದವರಿಗೆ ನೀಡಲಾಗಿದೆ. ಅದನ್ನು ತಿಂದ 8ಕ್ಕೂ ಹೆಚ್ಚು ಮಂದಿಗೆ ಮರುದಿನ ಬೆಳಗ್ಗೆ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದೆ. ಇದಕ್ಕೆ ಕಾರಣವೇನೆಂದು ಕೇಕ್ ಪರಿಶೀಲಿಸಿದಾಗ ಸತ್ತ ಹಾವಿನ ಮರಿ ಇರುವುದನ್ನು ಕಂಡು ಎಲ್ಲರು ಆತಂಕಕ್ಕೀಡಾಗಿದ್ದಾರೆ. (ದಿಗ್ವಿಜಯ ನ್ಯೂಸ್)
VIDEO| ಡ್ರೈವಿಂಗ್ ಪರೀಕ್ಷೆ ಮುಗಿಸಿ ಲೈಸೆನ್ಸ್ ಪಡೆದ ಹತ್ತೇ ನಿಮಿಷದಲ್ಲಿ ಕಾರನ್ನು ನದಿಗೆ ಹಾರಿಸಿದ ಚಾಲಕ!
VIDEO| ನೋಡಲು ಭಯ ಬೀಳಿಸುವಂತೆ ಇರುವ ಸಿಡುಕು ಮೂತಿ ಬೆಕ್ಕಿನ ಮುದ್ದಾಟ ನೋಡಿದ್ರೆ ಇಷ್ಟಪಡದೆ ಇರಲಾರಿರಿ!