More

    ಡಿಆರ್‌ಎಫ್ ಒ, ಗಾರ್ಡ್ ಸಸ್ಪೆಂಡ್, ಮೂವರು ವಜಾ

    ಶಿವಮೊಗ್ಗ: ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಸಿರಿಗೆರೆ ವಲಯದಲ್ಲಿ ಅಕ್ರಮವಾಗಿ ಮರಗಳ ಕಡಿತಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಮೇಲೆ ಡಿಆರ್‌ಎಫ್‌ಒ(ಉಪ ವಲಯ ಅರಣ್ಯಾಧಿಕಾರಿ) ಮತ್ತು ಗಾರ್ಡ್ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ. ಇದೇ ವೇಳೆ ಮೂವರು ದಿನಗೂಲಿ ನೌಕರರು ವಜಾಗೊಂಡಿದ್ದಾರೆ.
    ಸಿರಿಗೆರೆ ವಲಯದ ಡಿಆರ್‌ಎಫ್‌ಒ ಪರಮೇಶ್ವರ ಬೆಳಗಲಿ ಹಾಗೂ ಗಾರ್ಡ್ ಡಿ.ರಾಜೇಶ್ ಅವರನ್ನು ಅಮಾನತುಗೊಳಿಸಿ ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಐ.ಎಂ.ನಾಗರಾಜ್ ಗುರುವಾರ ಆದೇಶಿಸಿದ್ದಾರೆ.
    ಸಿರಿಗೆರೆ ವಲಯದ ಸಿರಿಗೆರೆ, ತಮ್ಮಡಿಹಳ್ಳಿ, ಕೂಡಿ, ಎರೇಬೀಸು, ಬಸವಾಪುರ, ದೊಡ್ಡಮತ್ತಲಿ, ಮಲೇಶಂಕರ ಸೇರಿ ಹಲವೆಡೆ ರಾತ್ರೋರಾತ್ರಿ ಬೆಲೆಬಾಳುವ ಬೀಟೆ, ಸಾಗವಾನಿ ಸೇರಿ ಹಲವು ಜಾತಿಯ ಮರಗಳನ್ನು ಕಡಿತಲೆ ಮಾಡಿ ಸಾಗಿಸುತ್ತಿದ್ದರು. ಲಾಕ್‌ಡೌನ್ ವೇಳೆಯಲ್ಲಿಯೂ ಮರಗಳ ಕಳ್ಳ ಸಾಗಣೆ ನಿರಂತರವಾಗಿತ್ತು. ಈ ಬಗ್ಗೆ ‘ವಿಜಯವಾಣಿ’ ಗುರುವಾರದ ಸಂಚಿಕೆಯಲ್ಲಿ ‘ರಾತ್ರೋರಾತ್ರಿ ಬೀಟೆ ಮಾಯ’ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು.
    ವರದಿಯನ್ನು ಗಮನಿಸಿದ ಡಿಸಿಎಫ್ ನಾಗರಾಜ್, ಮರಗಳನ್ನು ಕಡಿತಲೆ ಮಾಡಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಜೆಯೊಳಗೆ ವರದಿ ಕೊಡಿ ಎಂದು ಎಸಿಎಫ್‌ಗೆ ಸೂಚಿಸಿದ್ದರು. ಎಸಿಎಫ್ ಕೊಟ್ಟ ವರದಿ ಕೃತ್ಯವನ್ನು ಮೊದಲೇ ಪತ್ತೆ ಹಚ್ಚುವಲ್ಲಿ ಹಾಗೂ ತಪ್ಪಿಸ್ಥರ ವಿರುದ್ಧ ಪ್ರಕರಣ ದಾಖಲಿಸುವಲ್ಲಿ ವಿಫಲರಾಗಿದ್ದು ಕರ್ತವ್ಯ ಲೋಪವೆಸಗಿರುವುದು ಎಸಿಎಫ್ ಅವರು ನೀಡಿರುವ ವರದಿಯಲ್ಲಿ ಮೇಲ್ನೋಟಕ್ಕೆ ಸಾಬೀತಾಗಿದೆ. ಹಾಗಾಗಿ ಇಲಾಖಾ ವಿಚಾರಣೆಯಲ್ಲಿ ಬಾಕಿ ಇರಿಸಿಕೊಂಡು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತಿನಲ್ಲಿಟ್ಟು ಆದೇಶಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts