More

    ಸಿರಿಗೆರೆ ಮಠದಲ್ಲಿ 11ಕ್ಕೆ ರಾಜ್ಯಮಟ್ಟದ ಭಜನಾಮೇಳ

    ಸಿರಿಗೆರೆ: ಇಲ್ಲಿನ ತರಳಬಾಳು ಬೃಹನ್ಮಠದಲ್ಲಿ ಏ.11, 12ರಂದು ಅಣ್ಣನ ಬಳಗ 35ನೇ ರಾಜ್ಯಮಟ್ಟದ ಭಜನಾಮೇಳ ಹಾಗೂ ವಿರಕ್ತ ಚೇತನ ಕಾಶಿಮಹಾಲಿಂಗ ಸ್ವಾಮೀಜಿಗಳ 53ನೇ ಶ್ರದ್ಧಾಂಜಲಿ ಕಾರ‌್ಯಕ್ರಮ ಹಮ್ಮಿಕೊಂಡಿದೆ.

    ಕಳೆದ 34 ವರ್ಷಗಳಿಂದಲೂ ಇಲ್ಲಿ ಜನಪದ ಕಲೆಗಳ ಸ್ಪರ್ಧೆ ಆಯೋಜಿಸಿಕೊಂಡು ಬರಲಾಗಿದೆ. ಭಜನೆ, ವೀರಗಾಸೆ, ಸೋಬಾನೆ ಪದಗಳ ಸ್ಪರ್ಧೆಗೆ ಸಿರಿಗೆರೆಯಲ್ಲಿ ಕಾರ್ಯಾಗಾರ ನಡೆಸಲಾಗುತ್ತಿದೆ.

    ಏ.11ರ ಮಧ್ಯಾಹ್ನ 3 ಕ್ಕೆ ಸ್ಪರ್ಧೆ ಆರಂಭವಾಗಲಿದ್ದು, ಭಜನಾ ತಂಡಗಳು ಮಧ್ಯಾಹ್ನ 1 ಗಂಟೆಯೊಳಗೆ ಸಿರಿಗೆರೆಯಲ್ಲಿರಬೇಕು. ರಾಜ್ಯದ ತಂಡಗಳಿಗೆ ಮಾತ್ರ ಅವಕಾಶವಿದೆ. ಪ್ರತಿ ತಂಡದಲ್ಲಿ 10 ಜನ ಭಾಗವಹಿಸಬಹುದು.

    ಹಿರಿಯ, ಕಿರಿಯ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಪ್ರಥಮ ಸ್ಥಾನಕ್ಕೆ 10 ಸಾವಿರ ರೂ., ದ್ವಿತೀಯ 7500 ರೂ., ತೃತೀಯ 5000 ರೂ ನಗದು, ಪ್ರಶಸ್ತಿ ಪತ್ರ ನೀಡಲಾಗುವುದು.

    ಶುಕ್ರವಾರ (ಏ.12) ಬೆಳಗ್ಗೆ 10.30ಕ್ಕೆ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಕಾಶಿಮಹಾಲಿಂಗ ಶ್ರೀಗಳ ಶ್ರದ್ಧಾಂಜಲಿ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

    ಸ್ಪರ್ಧಿಗಳಿಗೆ ಉಚಿತ ಊಟ, ವಸತಿ ಸೌಕರ್ಯ, ಪ್ರಯಾಣ ವೆಚ್ಚ ನೀಡಲಾಗುವುದು. ಭಾಗವಹಿಸುವ ತಂಡಗಳು ಏ.8 ರೊಳಗೆ ತರಳಬಾಳು ಜಗದ್ಗುರು ಬೃಹನ್ಮಠ ‘ಕಾರ್ಯದರ್ಶಿ’ ಅಣ್ಣನ ಬಳಗ, ಸಿರಿಗೆರೆ-577541 ವಿಳಾಸಕ್ಕೆ ಪತ್ರ ಬರೆದು ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 9986191968 ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts