More

  ಶಿವಮೊಗ್ಗದಲ್ಲಿ ವುಮೆನ್ಸ್ ಲೀಗ್ ಪಂದ್ಯಾವಳಿ

  ಶಿವಮೊಗ್ಗ: ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಮಾ.3ರಂದು ರಾಜ್ಯಮಟ್ಟದ ಖೇಲೋ ಇಂಡಿಯಾ ಸ್ಕ್ವಾಯ್ ಮಾರ್ಷಲ್ ಆರ್ಟ್ಸ್ ವುಮೆನ್ಸ್ ಲೀಗ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಸ್ಕ್ವಾಯ್ ಅಸೋಸಿಯೇಷನ್ ಆಫ್ ಕರ್ನಾಟಕದ ಕಾರ್ಯದರ್ಶಿ ಮೊಹಮ್ಮದ್ ಅಲಿ ತಿಳಿಸಿದರು.

  ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 100 ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು ಜಿಲ್ಲೆಯಿಂದ ಐವರು ಬಾಲಕಿಯರು ಸ್ಪರ್ಧಿಸಲಿದ್ದಾರೆ. ಇದು ಹೆಣ್ಣುಮಕ್ಕಳಿಗೆ ಮಾತ್ರ ನಡೆಯುವ ಸ್ಪರ್ಧೆಯಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
  ಉಪಾಧ್ಯಕ್ಷ ವಿನೋದ್ ಮಾತನಾಡಿ, ಕೇಂದ್ರ ಕ್ರೀಡಾ ಸಚಿವರು ಇದಕ್ಕೆ ಅಸ್ಮಿತಾ ಎಂದು ನಾಮಕರಣ ಮಾಡಿದ್ದಾರೆ. ಇದೊಂದು ಸಮರ ಕಲೆಯಾಗಿದ್ದು, ಶಿವಮೊಗ್ಗದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ ಮುಖ್ಯವಾಗಿ ಎರಡು ವಿಭಾಗಗಳಲ್ಲಿ ಮತ್ತು ವಿವಿಧ ತೂಕದ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.
  ಪ್ರಮುಖರಾದ ಡಿ.ಬಿ.ಚಂದ್ರಕುಮಾರ್, ಶರವಣ, ನವೀನ್, ಶೇಖರ್, ಮಂಜುನಾಥ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts