More

    ದಾವೂದ್ ಇಬ್ರಾಹಿಂ ವಿಷ ಸೇವಿಸಿಲ್ಲ; ಸತ್ತಿಲ್ಲ: ಹೀಗೆಂದು ಹೇಳುವವರು ಯಾರು? ಪಾಕ್​ನಲ್ಲಿ ಇಂಟರ್​ನೆಟ್ ಸ್ಥಗಿತವಾಗಿದ್ದೇಕೆ?

    ನವದೆಹಲಿ: ಭಾರತದ ಮೋಸ್ಟ್​ ವಾಂಟೆಂಡ್ ದಾವೂದ್ ಇಬ್ರಾಹಿಂಗೆ ವಿಷ ಉಣಿಸಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್​ಗಳನ್ನು ಅವಲಂಬಿಸಿ ಸಾಕಷ್ಟು ವರದಿಗಳು ಬರುತ್ತವೆ.

    ಆದರೆ, ಪಾಕಿಸ್ತಾನದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ ಮತ್ತು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಊಹಾಪೋಹಗಳ ನಡುವೆಯೇ ವಿಶ್ವಾಸಾರ್ಹ ಗುಪ್ತಚರ ಮೂಲಗಳು ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದ ಈ ವದಂತಿಗಳನ್ನು ತಳ್ಳಿಹಾಕಿವೆ.

    ಪಾಕಿಸ್ತಾನಿ ಯೂಟ್ಯೂಬರ್‌ನಿಂದ ತಡರಾತ್ರಿಯ ವಿಡಿಯೋದ ಮೂಲಕ ದಾವೂದ್​ಗೆ ವಿಷ ಪ್ರಾಶನ ಸಂಗತಿಯು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಯಿತು. ತದನಂತರ ಪಾಕಿಸ್ತಾನದಲ್ಲಿ ಹಠಾತ್ತಾಗಿ ಇಂಟರ್​ನೆಟ್​ ಸ್ಥಗಿತಗೊಳಿಸಲಾಯಿತು. ವಿರೋಧ ಪಕ್ಷವಾದ ಪಾಕಿಸ್ತಾನ್-ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನ ವರ್ಚುವಲ್ ಸಭೆಗೆ ಅಡಚಣೆ ಮಾಡಲು ಇಂಟರ್​ನೆಟ್​ ಸ್ಥಗಿತಗೊಳಿಸಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ.

    ಜಾಗತಿಕ ಇಂಟರ್​ನೆ​ಟ್ ಸ್ವಾತಂತ್ರ್ಯವನ್ನು ಮೇಲ್ವಿಚಾರಣೆ ಮಾಡುವ ಇಂಟರ್​ನೆಟ್ ವಾಚ್‌ಡಾಗ್, ಭಾನುವಾರ ಸಂಜೆ ಸುಮಾರು ಏಳು ಗಂಟೆಗಳ ಕಾಲ ಪಾಕಿಸ್ತಾನದ ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಗಮನಾರ್ಹ ನಿರ್ಬಂಧಗಳನ್ನು ಸೂಚಿಸುವ ಮೆಟ್ರಿಕ್‌ಗಳನ್ನು ಬಿಡುಗಡೆ ಮಾಡಿದೆ. ಇದು ಪಿಟಿಐನ ಆನ್‌ಲೈನ್ ರಾಜಕೀಯ ಸಭೆಯೊಂದಿಗೆ ಹೊಂದಿಕೆಯಾಗುತ್ತದೆ.

    ಫೋನ್​ ಸಂಭಾಷಣೆಯಲ್ಲಿ ಐಷಾರಾಮಿ ಬದುಕು ಬಹಿರಂಗ:

    ಅಂತಾರಾಷ್ಟ್ರೀಯ ನಿರ್ಬಂಧಗಳ ಹೊರತಾಗಿಯೂ, ದಾವೂದ್ ಇಬ್ರಾಹಿಂ ಮತ್ತು ಅವನ ಕುಟುಂಬವು ಹಲವಾರು ದಶಕಗಳಿಂದ ಪಾಕಿಸ್ತಾನದ ರಾಜ್ಯಾತಿಥ್ಯವನ್ನು ಅನುಭವಿಸುತ್ತಿದೆ. ‘ಡಿ ಕಂಪನಿ’ ನಾಯಕ ದಾವೂದ್​ ಮತ್ತು ಅವನ ಸಹವರ್ತಿ ಫಾರೂಕ್ ನಡುವಿನ ಫೋನ್​ ಕರೆಗಳಿಂದ ದಾವೂದ್​ ಮತ್ತು ಆತನ ಕುಟುಂಬದ ಐಷಾರಾಮಿ ಜೀವನಶೈಲಿಯ ಸಂಗತಿಗಳು ಬಹಿರಂಗಗೊಳ್ಳುತ್ತವೆ.

    ಇಬ್ರಾಹಿಂ ತನ್ನ ಸಹವರ್ತಿ ಫಾರೂಕ್‌ಗೆ ಜೆಡ್ಡಾದಲ್ಲಿನ ಅಂಗಡಿಯಿಂದ ಲೂಯಿ ವಿಟಾನ್ (ಎಲ್‌ವಿ) ಬೂಟುಗಳನ್ನು ಖರೀದಿಸಲು ನಿರ್ದೇಶಿಸುತ್ತಾನೆ. ‘ನನ್ನ ಗಾತ್ರ 42, ಅದನ್ನು ಸಂಖ್ಯೆ 9 ಎಂದು ಪರಿಗಣಿಸಿ’ ಎಂದೂ ಹೇಳುತ್ತಾನೆ.

    ಈ ಮೂಲಕ ದಾವೂದ್ ಯುಕೆ ಮತ್ತು ಇಯು ಗಾತ್ರದ ವ್ಯತ್ಯಾಸಗಳನ್ನು ವಿವರಿಸುತ್ತಾನೆ. ಜೆಡ್ಡಾದಲ್ಲಿ ತಮ್ಮ ಹಿಂದಿನ ಶಾಪಿಂಗ್ ಅನುಭವದ ಬಗ್ಗೆಯೂ ಉಲ್ಲೇಖಿಸುತ್ತಾನೆ. ಮರುದಿನ ಶುಕ್ರವಾರದ ಪ್ರಾರ್ಥನೆಯ ನಂತರ ಮೆಕ್ಕಾಗೆ ಹೊರಟು ಭಾನುವಾರ ಪಾಕಿಸ್ತಾನಕ್ಕೆ ಹಿಂದಿರುಗುವ ತನ್ನ ಯೋಜನೆಯನ್ನು ಫಾರೂಕ್​ಗೆ ತಿಳಿಸುತ್ತಾನೆ. ದಾವೂದ್ ಇಬ್ರಾಹಿಂ ಪವಿತ್ರ ಝಮ್ಝಮ್ ನೀರನ್ನು ತರುವಂತೆ ಹೇಳುತ್ತಾನೆ ಎಂದು ಫೋನ್​ ಕರೆಗಳಿಂದ ತಿಳಿದುಬರುತ್ತದೆ.

    ದಾವೂದ್​ನ ಮೊದಲ ಪತ್ನಿ ಮೈಜಾಬಿನ್ ಮತ್ತು ಅಪರಿಚಿತ ಸಹವರ್ತಿಗಳಲ್ಲಿ ಒಬ್ಬನನ್ನು ಒಳಗೊಂಡಿರುವ ಮತ್ತೊಂದು ದಿನಾಂಕವಿಲ್ಲದ ಸಂಭಾಷಣೆ ಕೂಡ ಇದೆ. ಇದರಲ್ಲಿ ‘ಸಹೋದರರಂತಹ ವ್ಯಕ್ತಿ’ ಎಂದು ಸಹಚರನನ್ನು ಮೈಜಾಬಿನ್​ ಗುರುತಿಸುತ್ತಾಳೆ, ಮೇಕಪ್ ಬಜೆಟ್ ಆಗಿ 2 ಲಕ್ಷ ರೂಪಾಯಿ ಒಳಗೊಂಡ ಪ್ರವಾಸವನ್ನು ಪಾಕಿಸ್ತಾನಿ ರೂಪಾಯಿಗಳನ್ನು ಯೋಜಿಸುವುದನ್ನು ಈ ಫೋನ್​ ಸಂಭಾಷಣೆ ಸೂಚಿಸುತ್ತದೆ.

    ಮೇಕಪ್‌ಗೆ ತಗಲುವ ವೆಚ್ಚವನ್ನು ನೋಡಿಕೊಳ್ಳಲಾಗುವುದು ಎಂದು ವ್ಯಕ್ತಿಯಿಂದ ಆಕೆಗೆ ಭರವಸೆ ನೀಡಲಾಗುತ್ತದೆ. 1.40 ಲಕ್ಷ ಯುನೈಟೆಡ್ ಅರಬ್ ಎಮಿರೇಟ್ಸ್ ದಿರ್ಹಾಮ್ (AED) ಮೌಲ್ಯದ ಮತ್ತೊಂದು ಎಲ್ವಿ ಬ್ಯಾಗ್ ಮತ್ತು 10 ಲಕ್ಷ ಮೌಲ್ಯದ ಶಾಲುಗಳನ್ನು ಗುರುತಿಸಿದ್ದೇನೆ ಎಂದು ಆ ವ್ಯಕ್ತಿಗೆ ಮೈಜಾಬಿನ್​ ಹೇಳುತ್ತಾಳೆ.

    ಈ ಫೋನ್​ ಸಂಭಾಷಣೆಗಳು ಭಾರತದಿಂದ ಪಾಕ್​ಗೆ ಪಲಾಯನಗೈದವರ ಐಷಾರಾಮಿ ಆದ್ಯತೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಭಾರತೀಯ ಕಾನೂನು ಜಾರಿ ಸಂಸ್ಥೆಗಳಿಂದ ಹಾಗೂ ಜಾಗತಿಕ ನಿರ್ಬಂಧಗಳಿಂದ ತಪ್ಪಿಸಿಕೊಳ್ಳುತ್ತಿರುವ 67 ವರ್ಷದ ದಾವೂದ್​ ಇಬ್ರಾಹಿಂ ಈಗಲೂ ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ, ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರ, ರಿಯಲ್ ಎಸ್ಟೇಟ್, ಮನಿ ಲಾಂಡರಿಂಗ್ ಮತ್ತು ಭಯೋತ್ಪಾದನೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎನ್ನಲಾಗಿದೆ.

    ಕೋವಿಡ್ ಪ್ರಕರಣ ಹೆಚ್ಚಳ; JN.1 ರೂಪಾಂತರದ ಪ್ರಕರಣ ಪತ್ತೆ: ಜಾಗರೂಕತೆ ವಹಿಸಲು ರಾಜ್ಯಗಳಿಗೆ ಕೇಂದ್ರದ ಸಲಹೆ

    ಪ್ರಾಫಿಟ್​ಗಾಗಿ ಮಾರಾಟಕ್ಕೆ ಮುಂದಾದ ಹೂಡಿಕೆದಾರರು: ಸೂಚ್ಯಂಕ ಕುಸಿತದಲ್ಲಿ ಲಾಭ-ನಷ್ಟ ಕಂಡು ಷೇರುಗಳು

    ನ್ಯಾನೋ ಕಾರು ಶೀಘ್ರದಲ್ಲಿಯೇ ಮಾರುಕಟ್ಟೆಗೆ: ಈ ಎಲೆಕ್ಟ್ರಿಕ್​ ಕಾರಿನ ಬೆಲೆ ಅತ್ಯಂತ ಅಗ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts