More

    ಪ್ರಾಫಿಟ್​ಗಾಗಿ ಮಾರಾಟಕ್ಕೆ ಮುಂದಾದ ಹೂಡಿಕೆದಾರರು: ಸೂಚ್ಯಂಕ ಕುಸಿತದಲ್ಲಿ ಲಾಭ-ನಷ್ಟ ಕಂಡು ಷೇರುಗಳು

    ಮುಂಬೈ: ಬಿಎಸ್​ಇ ಮತ್ತು ಎನ್​ಎಸ್​ಇ ಸೂಚ್ಯಂಕಗಳು ಕಳೆದ ವಾರದಲ್ಲಿ ದಾಖಲೆಯ ಏರಿಕೆ ಮಟ್ಟ ತಲುಪಿದ ನಂತರ ಸೋಮವಾರ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಂಡುಬಂದಿತು. ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಷೇರು ಮಾರಾಟದಲ್ಲಿ ಹೆಚ್ಚಾಗಿ ತೊಡಗಿದ ಪರಿಣಾಮವಾಗಿ ಭಾರತ ಸೇರಿ ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿ ದುರ್ಬಲ ಪ್ರವೃತ್ತಿಯ ಕಂಡುಬಂದಿತು.

    ತನ್ನ ಮೂರು ದಿನಗಳ ಏರುಪ್ರವೃತ್ತಿಗೆ ಕಡಿವಾಣ ಹಾಕಿದ 30-ಷೇರುಗಳ ಬಿಎಸ್‌ಇ ಸೂಚ್ಯಂಕವು ಸೋಮವಾರ 168.66 ಅಂಕ ಅಥವಾ ಶೇಕಡಾ 0.24 ರಷ್ಟು ಕುಸಿದು 71,315.09 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನ ನಡುವೆ ಇದು 341.46 ಅಂಕ ಕುಸಿದು 71,142.29 ಕ್ಕೆ ತಲುಪಿತ್ತು. ನಿಫ್ಟಿ ಸೂಚ್ಯಂಕವು 38 ಅಂಕ ಅಥವಾ ಶೇಕಡಾ 0.18 ರಷ್ಟು ಕುಸಿದು 21,418.65 ಕ್ಕೆ ತಲುಪಿತು.

    ಪವರ್ ಗ್ರಿಡ್, ಐಟಿಸಿ, ಜೆಎಸ್‌ಡಬ್ಲ್ಯೂ ಸ್ಟೀಲ್, ಐಸಿಐಸಿಐ ಬ್ಯಾಂಕ್, ಟೆಕ್ ಮಹೀಂದ್ರಾ, ಇನ್ಫೋಸಿಸ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಮಹೀಂದ್ರಾ ಮತ್ತು ಮಹೀಂದ್ರಾ ಮುಂತಾದ ಷೇರುಗಳು ಕುಸಿತ ಅನುಭವಿಸಿದವು. ಸನ್ ಫಾರ್ಮಾ, ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಸಿಎಲ್ ಟೆಕ್, ಹಿಂದೂಸ್ತಾನ್ ಯೂನಿಲಿವರ್, ಬಜಾಜ್ ಫೈನಾನ್ಸ್, ಮಾರುತಿ ಮೊದಲಾದ ಕಂಪನಿಯ ಷೇರುಗಳು ಲಾಭ ಗಳಿಸಿದವು.

    “ಕೆಂಪು ಸಮುದ್ರದ ಮೂಲಕ ತೈಲ ಪೂರೈಕೆಯಲ್ಲಿ ಅಡಚಣೆಗಳು ಮತ್ತು ಉನ್ನತ ಮಟ್ಟ ತಲುಪಿದ ಷೇರು ಮೌಲ್ಯಮಾಪನಗಳು ಹೂಡಿಕೆದಾರರ ಭಾವನೆಯನ್ನು ಹದಗೆಡಿಸಿದ ಕಾರಣ ಮಾರುಕಟ್ಟೆಯು ಒಂದಿಷ್ಟು ಕುಸಿತ ಕಂಡಿತು” ಎಂದು ತಜ್ಱರು ಹೇಳಿದ್ದಾರೆ.

    ಐರೋಪ್ಯ ಮಾರುಕಟ್ಟೆಗಳಲ್ಲಿ ಮಿಶ್ರ ವಹಿವಾಟು ಕಂಡುಬಂದಿತು. ಶುಕ್ರವಾರದಂದು ಅಮೆರಿಕದ ಮಾರುಕಟ್ಟೆಗಳು ಹೆಚ್ಚಿನ ಲಾಭ ಗಳಿಸಿದವು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ 9,239.42 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಸಿದರು ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಶುಕ್ರವಾರದಂದು ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ 969.55 ಅಂಕ ರಷ್ಟು ಜಿಗಿದು ತನ್ನ ದಾಖಲೆಯ ಗರಿಷ್ಠ ಮಟ್ಟವಾದ 71,483ಕ್ಕೆ ತಲುಪಿತ್ತು. ನಿಫ್ಟಿ ಕೂಡ 273.95 ಅಂಕ ಏರಿಕೆಯಾಗಿ 21,456.65 ರ ಹೊಸ ಗರಿಷ್ಠ ಮಟ್ಟ ತಲುಪಿದ ದಾಖಲೆ ಬರೆದಿತ್ತು.

    ನ್ಯಾನೋ ಕಾರು ಶೀಘ್ರದಲ್ಲಿಯೇ ಮಾರುಕಟ್ಟೆಗೆ: ಈ ಎಲೆಕ್ಟ್ರಿಕ್​ ಕಾರಿನ ಬೆಲೆ ಅತ್ಯಂತ ಅಗ್ಗ

    ಇಸ್ಲಾಂಗೂ ಯುರೋಪ್​ಗೂ ಹೊಂದಾಣಿಕೆಯ ಸಮಸ್ಯೆ ಇದೆ: ಇಟಲಿ ಪ್ರಧಾನಿ ಮೆಲೋನಿ ಹೇಳಿಕೆ ವೈರಲ್​

    ದಾವೂದ್​ಗೆ ಅಲ್ಲಾ ಜನ್ನತ್‌ನಲ್ಲಿ ಅತ್ಯುನ್ನತ ಸ್ಥಾನ ನೀಡಲಿ… ಹೀಗೆ ಪಾಕ್​ ಹಂಗಾಮಿ ಪ್ರಧಾನಿ ಹೇಳಿದ್ದು ನಿಜವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts