More

    ನ್ಯಾನೋ ಕಾರು ಶೀಘ್ರದಲ್ಲಿಯೇ ಮಾರುಕಟ್ಟೆಗೆ: ಈ ಎಲೆಕ್ಟ್ರಿಕ್​ ಕಾರಿನ ಬೆಲೆ ಅತ್ಯಂತ ಅಗ್ಗ

    ನವದೆಹಲಿ: ನ್ಯಾನೋ ಕಾರು ಹೆಸರು ಸಾಕಷ್ಟು ಚಿರಪರಿಚಿತ. ಒಂದು ಲಕ್ಷ ರೂಪಾಯಿಗೆ ದೊರೆಯುತ್ತಿದ್ದ ಜಗತ್ತಿನಲ್ಲಿ ಅತ್ಯಂತ ಅಗ್ಗದ ಕಾರು. ಬೇಡಿಕೆ ಕುಸಿದಿದ್ದರಿಂದ ಹಾಗೂ ನಾನಾ ಕಾರಣಗಳಿಂದಾಗಿ ಈ ಕಾರು ಉತ್ಪಾದನೆ ಸ್ಥಗಿತಗೊಂಡಿತು.

    ಭಾರತೀಯ ಕಾರು ತಯಾರಕ ಕಂಪನಿ ಟಾಟಾ ಮೋಟಾರ್ಸ್ ಈಗ ನ್ಯಾನೋ ಕಾರನ್ನು ಮತ್ತೆ ಉತ್ಪಾದಿಸಲು ಸಜ್ಜಾಗಿದೆ. ಆದರೆ, ಈ ಬಾರಿ ಪೆಟ್ರೋಲ್​ ಕಾರಲ್ಲ; ಎಲೆಕ್ಟ್ರಿಕ್​ ಕಾರು ತಯಾರಿಸಲು ಮುಂದಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಕಾರು ರಸ್ತೆಗೆ ಲಗ್ಗೆ ಇಡಲಿದೆ. ನ್ಯಾನೋ ರೀತಿಯಲ್ಲಿಯೇ ಇದು ಅತ್ಯಂತ ಅಗ್ಗದ ಹಾಗೂ ಕೈಗೆಟಕುವ ಎಲೆಕ್ಟ್ರಿಕ್ ಕಾರ್ ಆಗಲಿದೆ.

    ಇದು 17 kWh ಬ್ಯಾಟರಿ ಹೊಂದಲಿದೆ. ಒಂದೇ ಚಾರ್ಜ್‌ನಲ್ಲಿ 300 ಕಿಲೋ ಮೀಟರ್‌ ಅಂತರ ಕ್ರಮಿಸಲಿದೆ. EV 40 kW ಎಲೆಕ್ಟ್ರಿಕ್ ಮೋಟರ್ ಹೊಂದಿರುತ್ತದೆ, ಇದು 10 ಸೆಕೆಂಡುಗಳಲ್ಲಿ 100 ಕಿಮೀವರೆಗೆ ವೇಗವನ್ನು ಪಡೆದುಕೊಳ್ಳಲು ಸಾಮರ್ಥ್ಯ ಹೊಂದಿರಲಿದೆ, ಇದರ ಗರಿಷ್ಠ ವೇಗ ಪ್ರತಿ ಗಂಟೆಗೆ 80 ಕಿ.ಮೀ. ಇರಲಿದೆ. ಟಾಟಾ ನ್ಯಾನೋ EV ಕಾರು ಟಾಟಾ ಮೋಟಾರ್ಸ್ ಮತ್ತು ಜೆಯಂ ಆಟೋಮೋಟಿವ್ ನಡುವಿನ ಸಹಯೋಗದೊಂದಿಗೆ ತಯಾರಾಗಲಿದೆ. ಎಲೆಕ್ಟ್ರೋ ಎಂದು ಹೆಸರು ಇಡುವ ಸಾಧ್ಯತೆ ಇದೆ.

    ಹೀಗಿದೆ ಬೆಲೆ:

    ಟಾಟಾ ನ್ಯಾನೋ EV ಯ ಆರಂಭಿಕ ಬೆಲೆ 5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದು ಪವರ್ ಕಂಡಿಷನರ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಪವರ್ ಸ್ಟೀರಿಂಗ್‌ನಂತಹ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಎಲೆಕ್ಟ್ರಿಕ್ ಕಾರು, ಬೆಲೆ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ ಇತರ ಎಲೆಕ್ಟ್ರಿಕ್​ ಕಾರುಗಳೊಂದಿಗೆ ಸ್ಪರ್ಧಿಸುವ ನಿರೀಕ್ಷೆಯಿದೆ.

    ಇಸ್ಲಾಂಗೂ ಯುರೋಪ್​ಗೂ ಹೊಂದಾಣಿಕೆಯ ಸಮಸ್ಯೆ ಇದೆ: ಇಟಲಿ ಪ್ರಧಾನಿ ಮೆಲೋನಿ ಹೇಳಿಕೆ ವೈರಲ್​

    ದಾವೂದ್​ಗೆ ಅಲ್ಲಾ ಜನ್ನತ್‌ನಲ್ಲಿ ಅತ್ಯುನ್ನತ ಸ್ಥಾನ ನೀಡಲಿ… ಹೀಗೆ ಪಾಕ್​ ಹಂಗಾಮಿ ಪ್ರಧಾನಿ ಹೇಳಿದ್ದು ನಿಜವೇ?

    ಡೊನೇಟ್ ಫಾರ್ ದೇಶ್ ಅಭಿಯಾನ: 138; 1,380; 13,800 ರೂಪಾಯಿ ಏಕೆ ಕಾಂಗ್ರೆಸ್​ ಸಂಗ್ರಹಿಸುತ್ತಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts