More

    ಮಾನವೀಯತೆ ಮರೆತ ಸುಡಾನ್ ನಾಗರಿಕರು: ಮನೆ ಖಾಲಿ ಮಾಡಲು ಒತ್ತಾಯ, ಕನ್ನಡಿಗರು ಅತಂತ್ರ

    ದಾವಣಗೆರೆ: ಯುದ್ಧದ ಸನ್ನಿವೇಶದ ನಡುವೆ ಸುಡಾನ್​ ನಗರದಲ್ಲಿ ಸಿಲುಕಿದವರಿಗೆ ಕಂಟಕ ಎದುರಾಗಿದೆ. ಸುಡಾನ್ ನಾಗರಿಕರು ಮಾನವೀಯತೆ ಮರೆತು ವರ್ತಿಸುತ್ತಿದ್ದು, ಜಾಗತಿಕವಾಗಿ ತಮ್ಮ ಮಾನ ಹರಾಜು ಹಾಕಿಕೊಳ್ಳುತ್ತಿದ್ದಾರೆ.

    ಮನೆ ಖಾಲಿ ಮಾಡುವಂತೆ ದಬ್ಬಾಳಿಕೆ

    ಸುಡಾನ್ ನಗರದಲ್ಲಿ ಇರುವ ಭಾರತೀಯರ ಮೇಲೆ ಸ್ವಲ್ಪವೂ ಮಾನವೀಯತೆಯನ್ನು ತೋರದೆ ಅಲ್ಲಿನ ಜನರು ದಬ್ಬಾಳಿಕೆ ಮಾಡುತ್ತಿದ್ದಾರೆ. ಯುದ್ಧ ಸನ್ನಿವೇಶದಲ್ಲೂ ಮನೆ ಖಾಲಿ ಮಾಡಿಸಲು ಅಲ್ಲಿನ ಮಾಲೀಕರು ಮುಂದಾಗುತ್ತಿದ್ದಾರೆ. ದಾವಣಗೆರೆ ಮೂಲದ 39 ಜನರ ಮೇಲೆ ಮನೆ ಮಾಲೀಕ ದಬ್ಬಾಳಿಕೆ ನಡೆಸುತ್ತಿದ್ದು, ಮನೆ ಖಾಲಿ ಮಾಡುವಂತೆ ಪೊಲೀಸರಿಂದ ಒತ್ತಡ ಹಾಕುತ್ತಿದ್ದಾರೆ.

    ಇದನ್ನೂ ಓದಿ: ಲಿಂಗಾಯತರ ಮತಗಳು ಮಾರಾಟಕ್ಕಿಲ್ಲ: ಜ್ಞಾನಪೀಠದ ಪೀಠಾಧ್ಯಕ್ಷ ಡಾ.ಚನ್ನಬಸವಾನಂದಸ್ವಾಮೀಜಿ ಹೇಳಿಕೆ

    ದುಡ್ಡು ಕೊಡಿ ಇಲ್ಲ ಜಾಗ ಖಾಲಿ ಮಾಡಿ

    ದಾವಣಗೆರೆಯ ದಿಗ್ವಿಜಯ್ ರಿಪೋರ್ಟರ್ ಜೊತೆ ದೂರವಾಣಿ ಕರೆ ಮಾಡಿ ಮಾತನಾಡಿದ ನಿರಾಶ್ರಿತರು, ನಮ್ಮನ್ನು ಆದಷ್ಟು ಬೇಗೆ ಸ್ವದೇಶಕ್ಕೆ ಕರೆಯಿಸಿಕೊಳ್ಳಲು ಸರ್ಕಾರಕ್ಕೆ ಹೇಳಿ ಎಂದು ಅಂಗಲಾಚಿದ್ದಾರೆ. ಮನೆ ಮಾಲೀಕನ ದಬ್ಬಾಳಿಕೆಯನ್ನು ರಿಪೋರ್ಟರ್ ಬಳಿ ನಿರಾಶ್ರಿತರು ಹೇಳಿಕೊಂಡಿದ್ದಾರೆ. ಎರಡು ದಿನ ಉಳಿದುಕೊಳ್ಳಲು ಅವಕಾಶ ಕೊಡಿ ಎಂದು ಬೇಡಿಕೊಂಡರು ಮನೆ ಮಾಲೀಕ ಕರುಣೆ ತೋರುತ್ತಿಲ್ಲ. ತಕ್ಷಣ ಮನೆ ಕಾಲಿ ಮಾಡಿ ಇಲ್ಲವಾದರೆ ದುಡ್ಡು ಕೊಡಿ ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.

    ಊಟಕ್ಕೂ ಪರದಾಟ

    ಕೆಲಸವಿಲ್ಲದೆ ಊಟಕ್ಕೂ ಪರದಾಡುತ್ತಿದ್ದೇವೆ. ನಿಮಗೆ ಕೊಡಲು ನಮ್ಮ ಬಳಿ ದುಡ್ಡು ಇಲ್ಲ. ಎರಡು ದಿನ ಮನೆಯಲ್ಲಿ ಇರಲು ಅವಕಾಶ ಕೊಡಿ, ನಮ್ಮ ದೇಶಕ್ಕೆ ಹೋಗುತ್ತೇವೆ ಎಂದು ಬೇಡಿಕೊಂಡರು ಮನೆ ಮಾಲಿಕರು ದಯೆ ತೋರುತ್ತಿಲ್ಲ ಎಂದು ದಾವಣಗೆರೆ ಮೂಲದ ನಿರಾಶ್ರಿತರು ಕಣ್ಣೀರಿಡುತ್ತಿದ್ದಾರೆ.

    ಸಹಾಯಕ್ಕಾಗಿ ಎದುರು ನೋಟ

    ಚನ್ನಗಿರಿ ತಾಲೂಕಿನ ಗೋಪಹಾಳ್ ಮತ್ತು ಅಸ್ತಾಪನಹಳ್ಳಿಯಿಂದ ದಕ್ಷಿಣ ಆಫ್ರಿಕಾದ ಸುಡಾನ್ ನಗರದಲ್ಲಿ ಕೆಲ ಕುಟುಂಬಗಳು ಸಿಲುಕಿವೆ. ಯುದ್ಧದ ಆತಂಕದಿಂದ 39 ಜನ ಕಾಲ ಕಳೆಯುತ್ತಿದ್ದಾರೆ. ಚನ್ನಗಿರಿ ತಾಲ್ಲೂಕಿನ ಅಸ್ತಾಫನಹಳ್ಳಿಯ 10 ಜನ ಹಾಗೂ ಗೋಪನಾಳದ 29 ಜನ ಸೇರಿ ಒಟ್ಟು 39 ಹಕ್ಕಿಪಿಕ್ಕಿಯ ಜನರು ಆಯುರ್ವೇದಿಕ್ ಔಷಧಿ ಮಾರಾಟ ಮಾಡಲು ದಕ್ಷಿಣ ಆಫ್ರಿಕಾದ ಸುಡಾನ್ ನಗರಕ್ಕೆ ತೆರಳಿದ್ದು, ಇದೀಗ ಅಲ್ಲಿಯೇ ಸಿಲುಕಿ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ.

    ಇದನ್ನೂ ಓದಿ: ಒಳ ಒಪ್ಪಂದದಿಂದ ಮಣಿಸಲು ಅಸಾಧ್ಯ; ಕಾಂಗ್ರೆಸ್-ಜೆಡಿಎಸ್ ವಿರುದ್ಧ ಸಚಿವ ಎಸ್.ಟಿ. ಸೋಮಶೇಖರ್ ಆಕ್ರೋಶ

    ಸುಡಾನ್‌ನಲ್ಲಿ ಸಂಘರ್ಷಕ್ಕೆ ಕಾರಣವೇನು?

    ಪ್ರಬಲ RSFಅನ್ನು 2013 ರಲ್ಲಿ ರಚಿಸಲಾಗಿತ್ತು. ಮುಖ್ಯವಾಗಿ 2000ದ ದಶಕದಲ್ಲಿ ಡಾರ್ಫರ್‌ನಲ್ಲಿ ನಡೆದ ಯುದ್ಧದ ಸಮಯದಲ್ಲಿ ಸುಡಾನ್ ಸರ್ಕಾರದ ಪರವಾಗಿ ಹೋರಾಡಿದ ಜಂಜಾವೀಡ್ ಮಿಲಿಷಿಯಾಗಳನ್ನು ಒಳಗೊಂಡಿದೆ. ಇದನ್ನು ಮೊಹಮ್ಮದ್ ಹಮ್ದಾನ್ ದಗಾಲೊ ನೇತೃತ್ವ ವಹಿಸಿದ್ದು ಅದನ್ನು ಹೆಮೆಟ್ಟಿ ಎಂದೂ ಕರೆಯುತ್ತಾರೆ. ಅದಲ್ಲದೇ ಇವರ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪವಿದೆ.

    ಪ್ರಸ್ತುತ ಸಂಘರ್ಷ ಏಪ್ರಿಲ್ 2019 ರಿಂದ ಮೆಲ್ಲಮೆಲ್ಲಬೇ ಶುರುವಾಗಿದ್ದು ಸುಡಾನ್‌ನಲ್ಲಿ ದೀರ್ಘಕಾಲ ಅಧಿಕಾರದಲ್ಲಿದ್ದ ಅಧ್ಯಕ್ಷ ಒಮರ್ ಅಲ್-ಬಶೀರ್​ರನ್ನು ದೇಶಾದ್ಯಂತದ ಪ್ರತಿಭಟನೆಗಳು ನಡೆದ ನಂತರ ಮಿಲಿಟರಿ ಜನರಲ್‌ಗಳು ಪದಚ್ಯುತಗೊಳಿಸಿದಾಗ. ಮಿಲಿಟರಿ ಜನರಲ್‌ಗಳಿಗೆ ಅಧಿಕಾರ ನೀಡಿದ ನಂತರ ಪ್ರತಿಭಟನಾಕಾರರು ಪ್ರಜಾಪ್ರಭುತ್ವ ಸರ್ಕಾರಕ್ಕೆ ಒತ್ತಾಯಿಸಿದ್ದರು.

    ಇದು ಮಿಲಿಟರಿ ಮತ್ತು ಪ್ರತಿಭಟನಾಕಾರರ ನಡುವಿನ ಒಪ್ಪಂದಕ್ಕೆ ಕಾರಣವಾಯಿತು. ಅದರ ಅಡಿಯಲ್ಲಿ ಮಿಲಿಟರಿ ಅಧಿಕಾರಿಗಳು ಮತ್ತು ನಾಗರಿಕರ ಅಧಿಕಾರ ಹಂಚಿಕೆಯ ಸಂಸ್ಥೆಯನ್ನು ಸಾರ್ವಭೌಮ ಮಂಡಳಿ ಒಂದನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಇದು 2023 ರ ಕೊನೆಯಲ್ಲಿ ಸುಡಾನ್ ಚುನಾವಣೆಗೆ ಕಾರಣವಾಗುತ್ತದೆ. 2021 ರ ದಂಗೆಯ ನಂತರ, ಮಿಲಿಟರಿ ಮತ್ತು ಆರ್ಎಸ್ಎಫ್ ನಡುವಿನ ಸಂಬಂಧಗಳು ಹದಗೆಟ್ಟವು. ದಗಾಲೊ, ತನ್ನನ್ನು ನಿಜವಾದ ‘ಜನರ ನಾಯಕ’ ಎಂದು ಹೇಳುತ್ತಾ, 2021 ರ ದಂಗೆ ಆಗಬಾರದಿತ್ತು ಎಂದು ಹೇಳಿದರು. ಇದರ ನಂತರ ಘಟನೆಗಳು ಒಂದಕ್ಕೊಂದು ಪೂರಕವಾಗಿ ಬೆಳೆದು ಸೇನೆ ಮತ್ತು ಆರ್​ಎಸ್​ಎಫ್​ ನಡುವೆ ವೈಮನಸ್ಸು ಬೆಳೆದು ಇದೀಗ ಸುಡಾನ್​ ಅತಂತ್ರವಾಗಿದೆ. (ದಿಗ್ವಿಜಯ ನ್ಯೂಸ್​)

    ಸುಡಾನ್ ಅಂತರ್ಯುದ್ಧದಲ್ಲಿ 3 ಸಾವಿರ ಭಾರತೀಯರು ಅತಂತ್ರ; ಯುದ್ಧ ಆರಂಭವಾದದ್ದು ಹೀಗೆ…

    ವಿಜಯಪುರದಲ್ಲಿ ಲೈವ್ ವಿಡಿಯೋ ಆನ್​ ಮಾಡಿ ವಿವಾಹಿತೆ ಸಾವಿಗೆ ಶರಣು!

    ಕಾಂಗ್ರೆಸ್ ಚುನಾವಣಾ ಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts