More

    ದಾವಣಗೆರೆಯಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಅಧ್ವಾನ: ಸಂಸದರತ್ತ ಬೊಟ್ಟು ಮಾಡಿದ ಮಾಜಿ ಸಚಿವ ಮಲ್ಲಿಕಾರ್ಜುನ್‌

    ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಯ ಅಧ್ವಾನಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ ನೇರ ಹೊಣೆ ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಆರೋಪಿಸಿದರು.

    ಶಾಸಕರು ಮತ್ತು ಅಧಿಕಾರಿಗಳು ಇಬ್ಬರಿಗೂ ಕೆಲಸ ಮಾಡಲು ಬಿಡುತ್ತಿಲ್ಲ ಎಲ್ಲದಕ್ಕೂ ರಾಜಕಾರಣ ಬೆರೆಸುತ್ತಾರೆ ಎಂದು ಶನಿವಾರ ಸುದ್ದಿಗೊಷ್ಠಿಯಲ್ಲಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು.

    ಬಾಪೂಜಿ, ಎಸ್‌ಎಸ್ ಮೆಡಿಕಲ್ ಕಾಲೇಜುಗಳ ಬೆಡ್ ವಿಷಯದಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ನಡೆದಿದೆ. ಸಚಿವರಿಗೆ ತಪ್ಪು ಮಾಹಿತಿ ನೀಡಿ ಅಸಂಬದ್ಧ ಹೇಳಿಕೆ ಕೊಡಿಸಿದ್ದಾರೆ. ಶೇ. 50 ರಷ್ಟು ಬೆಡ್‌ಗಳನ್ನು ಜಿಲ್ಲಾಡಳಿತ ಸೂಚಿಸಿದವರಿಗೆ ನೀಡಿದ್ದೇವೆ ಎಂದು ತಿಳಿಸಿದರು.

    ಎಸ್‌ಎಸ್ ಮೆಡಿಕಲ್ ಕಾಲೇಜಿನ 453 ಬೆಡ್‌ಗಳಲ್ಲಿ 226ನ್ನು ಕೋವಿಡ್ ರೋಗಿಗಳಿಗೆ ನೀಡಲಾಗಿದೆ. 226ರಲ್ಲಿ ನಾನ್ ಕೋವಿಡ್ ರೋಗಿಗಳಿದ್ದು ಇದರಲ್ಲೂ ಹೆಚ್ಚಿನವನ್ನು ಜಿಲ್ಲಾಡಳಿತವೇ ಸೂಚಿಸಿದೆ ಎಂದು ಮಾಹಿತಿ ನೀಡಿದರು.

    ಜಿಲ್ಲಾಸ್ಪತ್ರೆಯಲ್ಲಿ ಬೆಡ್‌ಗಳು ಪೂರ್ಣ ತುಂಬಿದಾಗ ಮಾತ್ರ ಖಾಸಗಿ ಆಸ್ಪತ್ರೆಗೆ ಕಳುಹಿಸಬೇಕು ಎಂಬುದು ನಿಯಮ ಇದಾವುದೂ ಗೊತ್ತಿಲ್ಲದೆ, ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.

    ದಾವಣಗೆರೆ ಬಾಪೂಜಿ ಕಾಲೇಜು ಜಿಲ್ಲಾಸ್ಪತ್ರೆ ಜತೆ ಒಡಂಬಂಡಿಕೆಯೊಂದಿಗೆ ಕೆಲಸ ಮಾಡುತ್ತಿದೆ. ಪಿಜಿ ವಿದ್ಯಾರ್ಥಿಗಳು, ತಜ್ಞ ವೈದ್ಯರು ಸೇರಿ 180 ಸಿಬ್ಬಂದಿಯನ್ನು ಅಲ್ಲಿಗೆ ನೀಡಲಾಗಿದೆ. ಜಿಲ್ಲಾಸ್ಪತ್ರೆಯು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ ಆದ ನಂತರ ಅಲ್ಲಿಗೆ ಬರುವ ನಾನ್ ಕೋವಿಡ್ ರೋಗಿಗಳಿಗೆ ಎಸ್‌ಎಸ್ ಮೆಡಿಕಲ್, ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯವನ್ನು ಸಚಿವರಿಗೆ ಹೇಳಲು ಹೋದ ಅಧಿಕಾರಿಗಳಿಗೆ ಅವಕಾಶ ನಿರಾಕರಿಸಲಾಗಿದೆ ಎಂದು ದೂರಿದರು.

    ಐದು ಸಾವಿರ ಬೆಡ್ ನೀಡಲು ಸಿದ್ಧ
    ನಮ್ಮ ಸಂಸ್ಥೆಯ ಹಾಸ್ಟೆಲ್‌ಗಳಲ್ಲಿ 5 ಸಾವಿರ ಬೆಡ್‌ಗಳಿಗೆ ವ್ಯವಸ್ಥೆ ಮಾಡುವೆ. ಕೋವಿಡ್ ಕೇರ್ ಕೇಂದ್ರ ತೆರೆಯಿರಿ ಎಂದು ಮಲ್ಲಿಕಾರ್ಜುನ್ ಪುನರುಚ್ಚರಿಸಿದರು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಈ ಹಿಂದೆಯೇ ಹೇಳಿದ್ದೆ. ಈಗಲೂ ಅವಕಾಶವಿದೆ ಎಂದರು. ಜನರ ಜೀವ ಉಳಿಸಲು ಗಮನ ಹರಿಸಬೇಕಾದ ಸಂಸದರು ರಾಜಕಾರಣ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪಾಳೇಗಾರಿಕೆ ಇಲ್ಲಿ ನಡೆಯದು
    ಕೋವಿಡ್ ರೋಗಿಗಳು ಚಿಕಿತ್ಸೆ ಸಿಗದೆ ಸಾಯುತ್ತಿದ್ದಾರೆ. ಲಸಿಕೆ ಸಿಗುತ್ತಿಲ್ಲ. ರೆಮ್‌ಡೆಸಿವಿರ್ ಇಂಜೆಕ್ಷನ್ ದೊರೆಯುತ್ತಿಲ್ಲ. ಇದನ್ನು ಪ್ರಶ್ನಿಸುವ ಪ್ರತಿಪಕ್ಷಗಳ ವಿರುದ್ಧ ರಾಜಕಾರಣ ಮಾಡುತ್ತಾರೆ.ಇಲ್ಲಿ ಪಾಳೇಗಾರಿಕೆ ನಡೆಯದು ಎಂದು ಹೇಳಿದರು.

    ಹಿಂದಿನ ವರ್ಷ ಕೋವಿಡ್‌ಗೆ ಚಿಕಿತ್ಸೆ ನೀಡಿದ ಬಾಬ್ತು ಎಸ್‌ಎಸ್ ಮೆಡಿಕಲ್ ಕಾಲೇಜಿಗೆ 5.58 ಕೋಟಿ ರೂ., ಬಾಪೂಜಿ ಕಾಲೇಜಿಗೆ 3.17 ಕೋಟಿ ರೂ.ಗಳನ್ನು ಇದುವರೆಗೆ ಪಾವತಿಸಿಲ್ಲ. ನಾವೂ ಕೇಳಿಲ್ಲ. ನಮ್ಮ ಜಿಲ್ಲೆಯ ಜನತೆಗೆ ನೀಡಿದ ಚಿಕಿತ್ಸೆ ಎಂದು ಸುಮ್ಮನಿದ್ದೇವೆ. ಕ್ವಾರಂಟೈನ್ ಮಾಡಲು ಬಳಸಿಕೊಂಡಿದ್ದ ಲಾಡ್ಜ್‌ಗಳಿಗೂ ಹಣ ನೀಡಿಲ್ಲ, ಅವರು ಬ್ಯಾಂಕ್ ಸಾಲ ಮಾಡಿಕೊಂಡಿದ್ದಾರೆ, ಅವರ ಗತಿ ಏನು ಎಂದು ಪ್ರಶ್ನಿಸಿದರು.

    ಜಿಲ್ಲೆಯಲ್ಲಿ 16 ಲಕ್ಷ ಜನರ ಪೈಕಿ ಇದುವರೆಗೆ 2.40 ಲಕ್ಷ ಜನರಿಗೆ ಹಾಕಲಾಗಿದೆ. ಸರ್ಕಾರ ದಿವಾಳಿಯಾಗಿದೆ ಎಂದು ಘೋಷಿಸಲಿ, ತಂದೆಯವರು ಹೇಳಿರುವ 9 ಕೋಟಿ ಜತೆಗೆ ಇನ್ನೂ 9 ಕೋಟಿ ಕೊಟ್ಟು ನಾವೇ ಲಸಿಕೆ ಹಾಕಿಸುತ್ತೇವೆ ಎಂದು ಸವಾಲೆಸೆದರು.

    ಬೆಲೆಕೆರೆ ಅದಿರು ಪ್ರಕರಣ ಪ್ರಸ್ತಾಪ
    ಸಂಸದರ ಹಾಗೆ ಪ್ರತೀಕಾರದ ರಾಜಕಾರಣ ಮಾಡಿದ್ದರೆ ಬೇಲೆಕೇರಿ ಅದಿರು ಪ್ರಕರಣದಲ್ಲಿ ನೀವು ಸಿಕ್ಕು ಬೀಳುವ ಸಂದರ್ಭ ಇತ್ತು ಆದರೆ ನಾವು ನಾವು ಧ್ವೇಷದ ರಾಜಕೀಯ ಮಾಡುವುದಿಲ್ಲ ಎಂದು ಮಲ್ಲಿಕಾರ್ಜುನ್ ಹೇಳಿದರು.

    ನಾಲ್ಕು ಬಾರಿ ಗೆದ್ದಿದ್ದೇನೆ ಎಂದು ಬೀಗಬೇಡಿ. ನನಗಿನ್ನೂ ಹತ್ತು ಚುನಾವಣೆ ಎದುರಿಸುವ ತಾಕತ್ತಿದೆ ಎಂದು ದೇ ವೇಳೆ ಸವಾಲು ಹಾಕಿದರು. ಮಾಜಿ ಸಂಸದ ಜಿ ಮಲ್ಲಿಕಾರ್ಜುನಪ್ಪ ಅವರ ನಿಧಾನದ ಅನುಕಂಪ, ಮೊದಿ ಅಲೆಯಿಂದ ನಿವು ಗೆಲುವಿನ ದಡ ಸೇರಿದ್ದೀರಿ ಹೊರತು ಸ್ವಂತ ಬಲದಿಂದಲ್ಲ. ನಿಮಗಿಂತ ಮುಂಚೆ ಸಕ್ರಿಯ ರಾಜಕಾರಣ ಪ್ರವೇಶಿಸಿದ ನನಗೆ ಚುನಾವಣೆ ಣೆ ಹೇಗೆ ಎದುರಿಸಬೇಕು ಎಂಬುದು ಗೊತ್ತಿದೆ ಎಂದರು.

    ಭಾರತದಲ್ಲಿ ಸ್ಪಾಟ್​ಗೋಲ್ಡ್ ಎಕ್ಸ್​ಚೇಂಜ್; ಷೇರುಗಳಂತೆ ಲಭ್ಯವಾಗಲಿದೆ ಇಜಿಆರ್

    ಒಂದೇ ದಿನ ಸೂಪರ್​ಮೂನ್-ಬ್ಲಡ್​ಮೂನ್; ಮೇ 26ರ ಚಂದ್ರಗ್ರಹಣದ ದಿನ ಕೌತುಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts