More

    ಈರುಳ್ಳಿ, ಆಲೂಗಡ್ಡೆ ವರ್ತಕರು ಸ್ಥಳಾಂತರ 80 ರಿಂದ 100 ಮಳಿಗೆಗಳಲ್ಲಿ ಮಾತ್ರ ವಹಿವಾಟು ದಾಸನಪುರ ಮಾರುಕಟ್ಟೆ ವ್ಯಾಪಾರ ಪ್ರಾರಂಭ

    ಬೆಂಗಳೂರು: ಯಶವಂತಪುರ ಎಪಿಎಂಸಿಯ ಈರುಳ್ಳಿ ,ಆಲೂಗಡ್ಡೆ ಮಾರುಕಟ್ಟೆಯನ್ನು ದಾಸನಪುರ ಉಪಮಾರುಕಟ್ಟೆ ಪ್ರಾಂಗಣಕ್ಕೆ ಒಂದು ತಿಂಗಳ ಮಟ್ಟಿಗೆ ಸ್ಥಳಾಂತರಗೊಳಿಸಲಾಗಿದ್ದು, ಸೋಮವಾರ ಹಲವು ವರ್ತಕರು ವ್ಯಾಪಾರ ವಹಿವಾಟು ಆರಂಭಿಸಿದ್ದಾರೆ.

    ಕರೊನಾ ವೈರಸ್ ತೀವ್ರಗತಿಯಲ್ಲಿ ವ್ಯಾಪಿಸುವ ಭೀತಿ ಹಿನ್ನೆಲೆಯಲ್ಲಿ ಕೃಷಿ ಮಾರಾಟ ಇಲಾಖೆಯಿಂದ ಯಶವಂತಪುರ ಪ್ರಾಂಗಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಈರುಳ್ಳಿ, ಆಲೂಗಡ್ಡೆ ವರ್ತಕರನ್ನು ದಾಸನಪುರ ಮಾರುಕಟ್ಟೆಗೆ ಸ್ಥಳಾಂತರಗೊಳಿಸುವಂತೆ ಶನಿವಾರ ಆದೇಶ ಹೊರಡಿಸಲಾಗಿತ್ತು. ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿನಕ್ಕೆ ಸಾವಿರಾರು ಜನರು ನಗರದ ವಿವಿಧ ಪ್ರದೇಶಗಳಿಂದ ಆಗಮಿಸುತ್ತಿದ್ದರು. ಜನರಲ್ಲಿ ಅಂತರ ಕಾಪಾಡುವುದು ಈ ಪ್ರದೇಶದಲ್ಲಿ ಕಷ್ಟವಾಗಿದ್ದರಿಂದ ಸ್ಥಳಾಂತರ ನಿರ್ಧಾರವನ್ನು ಇಲಾಖೆ ತೆಗೆದುಕೊಂಡಿತ್ತು. ಈ ಹಿನ್ನಲೆಯಲ್ಲಿ 80 ರಿಂದ 100 ಮಳಿಗೆಗಳ ವರ್ತಕರು ದಾಸನಪುರ ಮಾರುಕಟ್ಟೆಗೆ ಸ್ಥಳಾಂತರಗೊಂಡಿದ್ದಾರೆ.

    ಚಿಲ್ಲರೆ ವ್ಯಾಪಾರಸ್ಥರು ಬರುವುದು ಕಷ್ಟ: ದಾಸನಪುರ ಮಾರುಕಟ್ಟೆಯಲ್ಲಿ ಕೂಲಿ ಆಳುಗಳು ಸಿಗುವುದು ಕಷ್ಟ. ಯಶವಂತಪುರ ಎಪಿಎಂಸಿ ಹಮಾಲಿಗಳು ಇಲ್ಲಿಗೆ ಬರಲು ಒಪ್ಪಿಲ್ಲ. ಆದರೂ ಸರ್ಕಾರದ ಆದೇಶದಂತೆ ಒಂದು ತಿಂಗಳ ಮಟ್ಟಿಗೆ ಈ ಸ್ಥಳಕ್ಕೆ ಬಂದು ವ್ಯಾಪಾರ ಮಾಡಲು ವರ್ತಕರು ಒಪ್ಪಿಗೆ ಸೂಚಿಸಿದ್ದಾರೆ.

    ಮಾರುಕಟ್ಟೆಗೆ ಹೋಗಲ್ಲ: ಸಿಂಗೇನ ಅಗ್ರಹಾರದಲ್ಲಿ 43 ಎಕರೆ ವಿಶಾಲವಾದ ಜಾಗವಿದೆ. ಅದರಲ್ಲಿ 2 ಎಕರೆ ಜಾಗದಲ್ಲಿ 10 ಅಡಿ ಅಗಲ ಹಾಗೂ 20 ಅಡಿ ಉದ್ದದ ತಾತ್ಕಾಲಿಕ ಮಳಿಗೆ ನಿರ್ವಿುಸಲು ಎಪಿಎಂಸಿ ಮುಂದಾಗಿದೆ. ಈ ಜಾಗದಲ್ಲಿ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇನ್ನು ಮಳೆ ಬಂದರೆ ಮಳೆಯಲ್ಲೇ ವ್ಯಾಪಾರ ಮಾಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಸೀಗೇನಹಳ್ಳಿ ಮಾರುಕಟ್ಟೆಗೆ ಹೋಗಲ್ಲ ಎಂದು ಕಲಾಸಿಪಾಳ್ಯ ಸಗಟು ತರಕಾರಿ ಮಾರುಕಟ್ಟೆ ಅಧ್ಯಕ್ಷ ಆರ್.ವಿ. ಗೋಪಿ ತಿಳಿಸಿದ್ದಾರೆ. ನಗರದಿಂದ 25 ಕಿ.ಮೀ. ದೂರದಲ್ಲಿ ಈ ಮಾರುಕಟ್ಟೆಗೆ ಜಾಗ ನೀಡಿದ್ದಾರೆ. ನಗರದಿಂದ ಚಿಲ್ಲರೆ, ಸಗಟು ವ್ಯಾಪಾರ ಮಾಡುವವರು ಪ್ರತಿ ದಿನ ಬರುವುದಾದರೂ ಹೇಗೆ? ಎಲ್ಲ ವರ್ತಕರಿಗೂ ಸೌಕರ್ಯ ಕಲ್ಪಿಸಿದಾಗ ಮಾತ್ರ ಸ್ಥಳಾಂತರಗೊಳಿಸಲು ತೀರ್ವನಿಸಲಾಗುವುದು. ವರ್ತಕರ ಸಮಸ್ಯೆ ಬಗೆಹರಿಸುವಂತೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.

    ಸೋಮವಾರ ದಾಸನಪುರ ಮಾರುಕಟ್ಟೆಗೆ 54 ಸಾವಿರ ಮೂಟೆ ಈರುಳ್ಳಿ, 2,200 ಮೂಟೆ ಆಲೂಗಡ್ಡೆ ಆವಕವಾಗಿದೆ. ರಾಜ್ಯದ ಹಾಗೂ ಹೊರರಾಜ್ಯಗಳ ಗಡಿ ಬಂದ್ ಮಾಡಿದ್ದರಿಂದ ಈ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಆವಕವಾಗಿದೆ.

    | ಉದಯಶಂಕರ್ ಆಲೂಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ

    ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts