More

    ಎಪಿಎಂಸಿ ಅಧಿಕಾರಿಗಳು ಕೆವಿಯಟ್ ಹಾಕಿರುವುದು ಅಚ್ಚರಿಯ ಸಂಗತಿ; ಹೊಟ್ಟಿಗೌಡ್ರ

    ರಾಣೆಬೆನ್ನೂರ: ತಾಲೂಕಿನ ಹುಲಿಹಳ್ಳಿ ಬಳಿಯ ಎಪಿಎಂಸಿ ಮೆಗಾ ಮಾರುಕಟ್ಟೆಯಲ್ಲಿ ವರ್ತಕರಿಗೆ ನಿವೇಶನ ಹಂಚಿಕೆ ವಿಚಾರವಾಗಿ 23 ವರ್ತಕರು ನ್ಯಾಯಾಲಯದಲ್ಲಿ ದಾವೆ ಸಲ್ಲಿಸಬಹುದು ಎಂಬ ಗುಮಾನಿಯಿಂದ ಎಪಿಎಂಸಿ ಅಧಿಕಾರಿಗಳು ಧಾರವಾಡ ಹೈಕೋರ್ಟ್ ಪೀಠದಲ್ಲಿ ಕೆವಿಯಟ್ ಹಾಕಿರುವುದು ಅಚ್ಚರಿಯ ಸಂಗತಿಯಾಗಿದೆ ಎಂದು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ ತಿಳಿಸಿದರು.
    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿನ ನಿವೇಶನಗಳನ್ನು ಎಬಿಸಿಡಿಇ ಬ್ಲಾಕ್‌ಗಳಲ್ಲಿಯ ಒಟ್ಟು 522 ನಿವೇಶನಗಳ ಬದಲಾಗಿ 300 ನಿವೇಶನಗಳ ಹಂಚಿಕೆ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದೇ ವೇಳೆ ನಿವೇಶನಗಳನ್ನು ಸ್ಥಳೀಯರಿಗೆ ಶೇ. 60 ಹಾಗೂ ಹೊರಗಿನವರಿಗೆ ಶೇ. 40 ಅನುಪಾತದಲ್ಲಿ ಹಂಚಿಕೆ ಮಾಡುವುದಾಗಿ ತಿಳಿಸಿದ್ದಾರೆ.
    ಅದರಲ್ಲಿಯೂ ಬಿ ಬ್ಲಾಕ್‌ನ ಎಲ್ಲ ನಿವೇಶನಗಳನ್ನು ಮೆಣಸಿನಕಾಯಿ ವರ್ತಕರಿಗೆ ಮೀಸಲಿರಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನು ಗಮನಿಸಿ ನಿವೇಶನ ಹಂಚಿಕೆ ಮಾನದಂಡ ಕುರಿತು ನಾವು ಕೆಲವೊಂದು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದೇವು. ಆದರೆ, ಅಧಿಕಾರಿಗಳು ವರ್ತಕರ ಗಮನಕ್ಕೆ ತಾರದೆ ಏಕಾಏಕಿ ಪತ್ರಿಕೆಗಳಲ್ಲಿ ನಿವೇಶನ ಹಂಚಿಕೆ ಕುರಿತು ಜಾಹೀರಾತು ನೀಡಿದ್ದಲ್ಲದೆ ಅದರಲ್ಲಿ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದಾರೆ.
    ಇದನ್ನು ಖಂಡಿಸಿ ನಾವು ಪ್ರತಿಭಟನೆ ನಡೆಸಿದ್ದು ಇದರಲ್ಲಿ ನಮಗೆ ನ್ಯಾಯ ಸಿಗುವ ಬದಲು ನಮ್ಮ ಮೇಲೆ ಸಂಶಯ ವ್ಯಕ್ತಪಡಿಸಿ ನ್ಯಾಯಾಲಯದಲ್ಲಿ ಕೆವಿಯಟ್ ಪಡೆದುಕೊಂಡಿದ್ದಾರೆ. ಶಾಸಕರ ಗಮನಕ್ಕೂ ತಾರದೆ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ವರ್ತಕರ ಮೇಲೆ ಕೆವಿಯಟ್ ಹಾಕಿದ್ದಾರೆ. ಆದ್ದರಿಂದ ನಾವು ಅನಿವಾರ್ಯವಾಗಿ ಕೋರ್ಟ್‌ಗೆ ಹೋಗಬೇಕಾಗಿದೆ ಎಂದು ಆರೋಪಿಸಿದರು.
    ಪ್ರಮುಖರಾದ ವಿ.ಪಿ. ಲಿಂಗನಗೌಡ್ರ, ಎಸ್.ಕೆ. ಉಪ್ಪಿನ, ಜಿ.ಬಿ. ಜಂಬಗಿ, ಶಿವಣ್ಣ ಬಣಕಾರ, ಮಾಲತೇಶ ಕಜ್ಜರಿ, ವೀರೇಶ ಮೋಟಗಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts