More

    ಗ್ಯಾರಂಟಿ ಯೋಜನೆಗಳಿಂದ ಹಾನಿಯೇ ಹೆಚ್ಚು

    ಜಮಖಂಡಿ: ರಾಜ್ಯದ ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಮಹಿಳೆಯರ ಮೇಲೆ ಅವ್ಯಾಹತವಾಗಿ ದೌರ್ಜನ್ಯ, ಆಸಿಡ್ ದಾಳಿ, ಅತ್ಯಾಚಾರ ಪ್ರಕರಣಗಳು ನಡೆದರೂ ಯಾವುದೆ ಕ್ರಮ ಜರುಗಿಸದಿರುವುದು ಆಡಳಿತ ವೈಫಲ್ಯ ಎಂದು ಕಾಣುತ್ತಿದೆ ಎಂದು ಲೋಕಸಭೆ ಚುನಾವಣಾ ಮಹಿಳಾ ಪ್ರಮುಖ ಡಾ. ವಿಜಯಲಕ್ಷ್ಮೀ ತುಂಗಳ ಹೇಳಿದರು.

    ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

    ಕೇವಲ ಬಾಯಲ್ಲಿ ಮಾತ್ರ ಮಹಿಳೆಯರನ್ನು ಪೂಜಿಸಲ್ಪಡುತ್ತಾರೆ. ಆದರೆ, ಮಹಿಳೆಯರ ಮೇಲೆ ನಿತ್ಯ ದೌರ್ಜನ್ಯ, ಅತ್ಯಾಚಾರ ನಡೆದರೂ ಅವುಗಳಿಗೆ ನಿರ್ಭಂದ ಹೇರುವ ಕಾರ್ಯ ಮಾಡುತ್ತಿಲ್ಲ ಎಂದು ಆರೋಪಿಸಿದರು.

    ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆಯಾದರೂ ಅವುಗಳಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚಾಗಿ ರಾಜ್ಯದ ಬೊಕ್ಕಸ ಖಾಲಿ ಮಾಡುತಿದ್ದಾರೆ. ಶಕ್ತಿ ಯೋಜನೆ ಜಾರಿಗೊಳಿಸಿದ್ದರಿಂದಾ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಕಾಲೇಜಿಗೆ ತೆರಳಲು ಬಸ್ ತೊಂದರೆ, ಪಾಠ ಬೋಧನೆಯಲ್ಲಿ ಸರಿಯಾಗಿ ತೊಡಗಿಸಿಕೊಳ್ಳದೆ ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಮಹಿಳೆಯರನ್ನೇ ಅವಲಂಬಿತ ಉದ್ಯೋಗಗಳು ನಿಂತು ಹೋಗಿವೆ. ಇದರಿಂದ ಕುಟುಂಬದಲ್ಲಿ ಕಲಹ ಉಂಟಾಗುತ್ತಿದೆ. ಇದರಿಂದ ಪುರುಷರು ಮದ್ಯವೆಸನಿಗಳಾಗಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣ ಮನೆಯ ಯಜಮಾನಿಗೆ ಸರಿಯಾಗಿ ತಲುಪುತ್ತಿಲ್ಲ ಎಂದರು.

    ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯರು ಪರಿತಪಿಸುವಂತಾಗಿದೆ. 200 ಯೂನಿಟ್ ವಿದ್ಯುತ್ ಬಳಕೆದಾರರಿಗೆ ಉಚಿತವಾಗಿ ನೀಡಿದ್ದಾರೆ. ಆದರೆ, 200 ಯೂನಿಟ್‌ಕ್ಕಿಂತ ಹೆಚ್ಚಿಗೆ ಬಳಸುವವರ ಮೇಲೆ ದುಪ್ಪಟ್ಟು ಬೆಲೆ ಏರಿಸಿ ಸಂಕಷ್ಟಕ್ಕೆ ದೂಡುವ ಕಾರ್ಯ ಮಾಡುತಿದ್ದಾರೆ ಎಂದರು.
    ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಆರೋಗ್ಯ ಸುರಕ್ಷತೆಗಾಗಿ ಉಚಿತವಾಗಿ ಗ್ಯಾಸ್ ಸಿಲಿಂಡರ್, ಹತ್ತು ಕೋಟಿ ಶೌಚಗೃಹ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ಆಯುಷ್ಮಾನ್ ಕಾರ್ಡ್, ಜನೌಷಧಿ ಕೇಂದ್ರ ಸೇರಿ ಹಲವಾರು ಜನಪರ ಯೋಜನೆಗಳನ್ನು ಜಾರಿ ಮಾಡಿದ್ದಾರೆ ಎಂದರು.
    ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತೂ ಕೊಟ್ಟು, ಬೇಟಿ ಫಡಾವೋ ಬೇಟಿ ಬಚಾವೊ ಸ್ವಯಂ ನಿಧಿಯಲ್ಲಿ ಮಹಿಳೆಯರಿಗೆ 5ಲಕ್ಷ ರೂ. ಸಾಲ ವಿತರಣೆ ಶೇ. 33 ಮೀಸಲಾತಿ ತಂದಿದ್ದಾರೆ ಎಂದು ಹೇಳಿದರು.

    ಸಂಸದ ಪಿ.ಸಿ. ಗದ್ದಿಗೌಡರ ಅವರು ಒಂದು ಕಪ್ಪುಚುಕ್ಕೆ ಇಲ್ಲದ ಸರಳ ಸಜ್ಜನ ರಾಜಕಾರಣಿಯಾಗಿದ್ದಾರೆ. ಅವರು ಮಾತಿಗಿಂತ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಪ್ರತಿ ಗ್ರಾಮ ನಗರ ಪ್ರದೇಶಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ಈ ಭಾರಿಯೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸವೀತಾ ಹೊಸ್ಸೂರ, ಗೀಯಾ ಸೂರ್ಯವಂಶಿ, ನಗರಸಭೆ ಸದಸ್ಯೆ ಪೂಜಾ ವಾಳ್ವೇಕರ, ಶಿವಯ್ಯ ಹಿರೇಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts