More

    ಗೋ ರಕ್ಷಕ ಪಡೆಯಿಂದ ನೈತಿಕ ಪೊಲೀಸ್‌ಗಿರಿ

    ಭದ್ರಾವತಿ: ಜಾನುವಾರು ವ್ಯಾಪಾರಸ್ಥರ ಮೇಲೆ ಗೋರಕ್ಷಕ ಪಡೆಗಳ ಕಾರ್ಯಕರ್ತರು ವಿನಾಕಾರಣ ಹಲ್ಲೆ ನಡೆಸುವ ಮೂಲಕ ನೈತಿಕ ಪೊಲೀಸ್‌ಗಿರಿ ಪ್ರದರ್ಶಿಸುತ್ತಿದ್ದಾರೆ ಎಂದು ಜಾನುವಾರು ವ್ಯಾಪಾರಸ್ಥರ ಸಂಘದ ತಾಲೂಕು ಅಧ್ಯಕ್ಷ ಗಜೇಂದ್ರ ಆರೋಪಿಸಿದರು.

    ಜಾನುವಾರು ವ್ಯಾಪಾರಸ್ಥರು ರೈತರಿಂದ ಜಾನುವಾರುಗಳನ್ನು ಖರೀದಿಸಿ ವಾಹನಗಳಲ್ಲಿ ತರುತ್ತಿರುವಾಗ ವಾಹನ ಚಾಲಕರು ಹಾಗೂ ವಾಹನದಲ್ಲಿರುವ ವ್ಯಾಪಾರಸ್ಥರ ಮೇಲೆ ವಿವಿಧ ಸಂಘಟನೆಗಳ ಪ್ರಮುಖರು ಸಾರ್ವಜನಿಕವಾಗಿ ಹಲ್ಲೆ ನಡೆಸುತ್ತಾರೆ. ವಾಹನಗಳನ್ನು ಜಖಂಗೊಳಿಸಿ, ಜಾನುವಾರುಗಳನ್ನು ಕಳವು ಮಾಡಲಾಗುತ್ತಿದೆ ಎಂದು ವಿನಾಕಾರಣ ಆಪಾದಿಸಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸುತ್ತಿದ್ದಾರೆ. ಅಗತ್ಯ ದಾಖಲೆಗಳಿದ್ದರೂ ಅದನ್ನು ಪರಿಶೀಲನೆ ನಡೆಸದೇ ಪೊಲೀಸರು ಸಹ ರಾತ್ರೋ ರಾತ್ರಿ ವ್ಯಾಪಾರಸ್ಥರ ವಿರುದ್ದ ಎಫ್‌ಐಆರ್ ದಾಖಲಿಸುತ್ತಿದ್ದಾರೆ ಎಂದು ದೂರಿದರು.
    ಜಾನುವಾರುಗಳ ವ್ಯಾಪಾರಸ್ಥರು ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪ್ರಕರಣಗಳು ಎಸಿ ಕೋರ್ಟಿಗೆ ಹೋಗುವುದರಿಂದ ಹಸುಗಳನ್ನು ಬಿಡಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಯಾವ ಜಾನುವಾರುಗಳು ಸಾಕಲು ಯೋಗ್ಯವಾಗಿವೆ ಅಥವಾ ಇಲ್ಲ ಎಂಬುದನ್ನು ಪೊಲೀಸರು ಪರಿಶೀಲಿಸಿ ಎಫ್‌ಐಆರ್ ದಾಖಲಿಸಬೇಕು. ಹಲವು ಬಾರಿ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ಸಹ ಮಾಡಲಾಗಿದೆ. ಇನ್ನು ಮುಂದೆ ನೈತಿಕ ಪೊಲೀಸ್‌ಗಿರಿ ಪ್ರದರ್ಶಿಸುವವರನ್ನು ಗೂಂಡಾ ಕಾಯಿದೆ ಬಳಸಿ ಗಡಿಪಾರು ಮಾಡಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
    ಸಂಘದ ಗೌರವಾಧ್ಯಕ್ಷ ಬಸವೇಶ್, ಉಪಾಧ್ಯಕ್ಷ ಮಂಜುನಾಥ್ ನಾಯಕ್, ಲೋಕೇಶ್, ಪಾಪಣ್ಣ, ಧನಂಜಯ, ಜಯಣ್ಣ, ಗಿರೀಶ್, ವೀರಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts