More

    ಶ್ರೀರಾಮನ ಪೂಜೆ, ಮೆರವಣಿಗೆಗೆ ಅಡಿಯಾಗದಿರಲಿ; ಓಲೈಕೆ ರಾಜಕಾರಣಕ್ಕೆ ಮಾಜಿ ಶಾಸಕ ಬಳ್ಳಾರಿ ಟೀಕೆ

    ಬ್ಯಾಡಗಿ: ಪಟ್ಟಣದಲ್ಲಿ ಶ್ರೀರಾಮನ ಪೂಜೆ, ಮೆರವಣಿಗೆ ಇತ್ಯಾದಿಗಳಿಗೆ ಪೊಲೀಸ್ ಇಲಾಖೆ ತೊಂದರೆ ನೀಡಬಾರದು. ಹಿಂದು ಸಮಾಜ ಶ್ರೀರಾಮ ಮಂದಿರ ನಿರ್ವಿುಸಿದ ಪ್ರಯುಕ್ತ ದೇಶಾದ್ಯಂತ ಧಾರ್ವಿುಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಸಂಭ್ರಮವನ್ನು ತಡೆಗಟ್ಟಲು ಯತ್ನಿಸಬಾರದು ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು.

    ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಜ. 22ರಂದು ಶ್ರೀರಾಮ ಮಂದಿರ ನಿರ್ಮಾಣ ಹಾಗೂ ಬಾಲರಾಮನ ಪ್ರತಿಷ್ಠಾಪನೆ ನಡೆಯುತ್ತಿದೆ. ರಾಜ್ಯಾದ್ಯಂತ ಹಬ್ಬದಂತೆ ಆಚರಿಸುತ್ತಿದ್ದು, ಆದರೆ, ರಾಜ್ಯ ಸರ್ಕಾರ ಓಲೈಕೆ ರಾಜಕಾರಣ ಮಾಡುತ್ತಿದೆ. ರಾಮಮಂದಿರ ಬಿಜೆಪಿಯವರಿಗೆ ಸಿಮೀತವಾದಂತೆ ಕಾಂಗ್ರೆಸ್​ನವರು ಮಾತನಾಡುತ್ತಿದ್ದಾರೆ. ಎಲ್ಲವನ್ನೂ ಶ್ರೀರಾಮ ನೋಡುತ್ತಿದ್ದಾನೆ. ಜ. 22ರಂದು ಸರ್ಕಾರಿ ರಜೆ ಘೊಷಿಸಲು ಮನವಿ ಸಲ್ಲಿಸಿದರೂ ಯಾರೂ ಅರ್ಜಿ ಸಲ್ಲಿಸಿಲ್ಲ ಎನ್ನುವ ಮೂಲಕ ಮುಖ್ಯಮಂತ್ರಿಗಳು ಉಡಾಫೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಜಿಲ್ಲೆಯಲ್ಲಿ ಪೋಲಿಸರ ನಿರ್ಲಕ್ಷ್ಯ

    ಹಾನಗಲ್ಲನಲ್ಲಿ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ನಡೆದಿದೆ. ಈ ಘಟನೆ ಮಾಸುವ ಮುನ್ನವೇ ಜ. 19ರಂದು ಬ್ಯಾಡಗಿಯಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದೆ. ಅಲ್ಪಸಂಖ್ಯಾತ ಮಹಿಳೆ ಮತ್ತು ಹಿಂದು ಯುವಕ ರಸ್ತೆ ಬದಿ ನಿಂತು ಮಾತನಾಡುತ್ತಿದ್ದ ವೇಳೆ ಸ್ಥಳೀಯ ಪುರಸಭೆ ಸದಸ್ಯರ ಪುತ್ರ ಸೇರಿದಂತೆ ಕೆಲವರು ಏಕಾಏಕಿ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ. ಅವಮಾನಗೊಳಿಸಿ ಭಯ ಹುಟ್ಟಿಸಿದ್ದಾರೆ. ಯುವಕನಿಗೆ ಜೀವ ಬೆದರಿಕೆ ಹಾಕಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಬೇಕಿದ್ದು, ಇಂಥವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

    ತಾಲೂಕಿನಲ್ಲಿ ಬೃಹತ್ ಹೋರಾಟ:

    ತಾಲೂಕನ್ನು ಬರಗಾಲ ಪಟ್ಟಿಗೆ ಸೇರ್ಪಡೆಗೊಳಿಸಿದರೂ ಈವರೆಗೂ ಸಮರ್ಪಕ ಪರಿಹಾರ ನೀಡಿಲ್ಲ. ಕೂಲಿಕಾರ್ವಿುಕರು ಕೆಲಸವಿಲ್ಲದೆ ಪರದಾಡುವಂತಾಗಿದೆ. ರೈತರಿಗೆ ಅಸರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿದ್ದು, ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದರೂ ನ್ಯಾಯ ದೊರಕುತ್ತಿಲ್ಲ ಎಂದು ಆರೋಪಿಸಿದರು. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಶೀಘ್ರದಲ್ಲೇ ತಾಲೂಕು ಮಟ್ಟದಲ್ಲಿ ದೊಡ್ಡ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

    ಪುರಸಭೆ ಸದಸ್ಯ ಚಂದ್ರಪ್ಪ ಶೆಟ್ಟರ, ವಿಷ್ಣುಕಾಂತ ಬೆನ್ನೂರು, ವೀರೇಂದ್ರ ಶೆಟ್ಟರ, ಶಿವಬಸಪ್ಪ ಕುಳೇನೂರು, ಸುರೇಶಣ್ಣ ಉದ್ಯೋಗಣ್ಣನವರ, ಈರಣ್ಣ ಅಕ್ಕಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts