More

    ಧನ್ವಂತರಿ: ಕಣ್ಣಿನ ಆರೋಗ್ಯಕ್ಕೆ ಯೋಗ, ಧ್ಯಾನ, ಮುದ್ರೆ

    ಧನ್ವಂತರಿ: ಕಣ್ಣಿನ ಆರೋಗ್ಯಕ್ಕೆ ಯೋಗ, ಧ್ಯಾನ, ಮುದ್ರೆಮುಂಜಾನೆ ತಿಂಡಿ ತಿಂದ ನಂತರ ವಿಪರೀತ ನಿದ್ದೆ ಕಾಡುತ್ತದೆ. ಕೆಲಸ ಮಾಡಲು ಸೋಮಾರಿತನ. ಯೋಗ, ಪ್ರಾಣಾಯಾಮ ಮಾಡುತ್ತಿದ್ದೇನೆ. ಪರಿಹಾರ ತಿಳಿಸಿ.

    | ಮದನ್ 27 ವರ್ಷ, ದಾವಣಗೆರೆ

    ಇದು ಸಾಮಾನ್ಯ ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ರಾಸಾಯನಿಕ ಬದಲಾವಣೆ ಮತ್ತು ಇದು ಜೀರ್ಣಕ್ರಿಯೆಯ ಮಾದರಿಗಳು ಮತ್ತು ನಿದ್ರೆಯ ಚಕ್ರಗಳ ನೈಸರ್ಗಿಕ ಫಲಿತಾಂಶವಾಗಿದೆ. ಹಾಮೋನ್ಸ್ ವ್ಯತ್ಯಾಸಗಳಿಂದಲೂ ಆಗುತ್ತದೆ. ನಮ್ಮ ಮೇದೋಜೀರಕ ಗ್ರಂಥಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇನ್ಸುಲಿನ್ ಉತ್ಪಾದಿಸುತ್ತದೆ. ಇನ್ಸುಲಿನ್ ಹೆಚ್ಚಳದಿಂದ ನಮ್ಮ ದೇಹವು ಸ್ಲೀಪ್ ಹಾಮೋನ್ ಉತ್ಪಾದಿಸುತ್ತದೆ.

    ಆಹಾರ ಸೇವಿಸಿದ ನಂತರ ಕುಳಿತುಕೊಳ್ಳಬೇಡಿ. ಸ್ವಲ್ಪ ಹೊತ್ತು ಚುರುಕಾದ ನಡಿಗೆ ಕೈಗೊಳ್ಳಿ. ಈ ಅಲ್ಪಾವಧಿಯ ವ್ಯಾಯಾಮವು ರಕ್ತದಲ್ಲಿನ ಆಮ್ಲಜನಕ ಮಟ್ಟವನ್ನು ವೃದ್ಧಿಸಿ ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆಹಾರಸೇವನೆಯ ಕ್ರಮವನ್ನು ಉತ್ತಮಪಡಿಸಿ. ಜಂಕ್ ಆಹಾರಸೇವನೆ ಬೇಡ. ಸಕ್ಕರೆ ಮತ್ತು ಕೊಬ್ಬಿನ ಆಹಾರ ಸೇವನೆ ಹೆಚ್ಚು ಬೇಡ.

    ಇದನ್ನೂ ಓದಿ    ವೊಡಾಫೋನ್​ ಐಡಿಯಾ’ ಮೇಲೆ ಸರ್ಚಿಂಗ್​ ದೈತ್ಯ ‘ಗೂಗಲ್​​’ ಕಣ್ಣು; ಶೀಘ್ರವೇ ನಿರ್ಧಾರ ಪ್ರಕಟ?

    ಮುಂಜಾನೆ ಯೋಗದ ನಂತರ ಕಡ್ಡಾಯವಾಗಿ ಹತ್ತರಿಂದ ಹದಿನೈದು ನಿಮಿಷ ಶವಾಸನ ಮಾಡಿ. ಯೋಗ, ಪ್ರಾಣಾಯಾಮವನ್ನು ಶಿಸ್ತುಬದ್ಧವಾಗಿ, ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಅಭ್ಯಾಸ ಮಾಡಿ. ಹತ್ತರಿಂದ ಇಪ್ಪತ್ತು ನಿಮಿಷ ವ್ಯಾನಮುದ್ರೆ, ಹತ್ತು ನಿಮಿಷ ಆಕಾಶ ಮುದ್ರೆ, ಪ್ರಾಣಮುದ್ರೆಗಳನ್ನು ಅಭ್ಯಾಸ ಮಾಡಿ.

    ನಾನು ಸಮೀಪ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಇದರ ನಿವಾರಣೆಗೆ ಯಾವ ಮುದ್ರೆ ಸಹಕಾರಿ ಎಂದು ತಿಳಿಸಿ.

    | ಚಂದನ್ ಎಚ್.ಎಸ್.

    ಅಲ್ಪ ದೃಷ್ಟಿ ಅಥವಾ ಸಮೀಪ ದೃಷ್ಟಿ ಕಣ್ಣಿನ ಸಾಮಾನ್ಯ ಸ್ಥಿತಿಯಾಗಿದ್ದು ಇದು ದೂರದ ವಸ್ತುಗಳು ಮಸುಕಾಗಿ ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ಒಮ್ಮೆ ವೈದ್ಯರನ್ನು ಭೇಟಿಯಾಗಿ. ಉತ್ತಮ ಪೋಷಕಾಂಶದ ಆಹಾರ ಸೇವಿಸಿ. ಕಣ್ಣಿಗೆ ಹೆಚ್ಚು ಒತ್ತಡ ಕೊಡುವ ಕೆಲಸ ಮಾಡಬೇಡಿ. ಪ್ರಕೃತಿಯನ್ನು ಗಮನಿಸಿ. ಕಣ್ಣಿನ ವ್ಯಾಯಾಮಗಳನ್ನು ತಾಳ್ಮೆಯೊಂದಿಗೆ ಅಭ್ಯಾಸ ಮಾಡಿ. ತ್ವರಿತ ಚಿಕಿತ್ಸೆ ಯಾ ಸುಧಾರಣೆಯನ್ನು ನಿರೀಕ್ಷಿಸಬೇಡಿ. ಕಣ್ಣಿನ ಆರೋಗ್ಯಕ್ಕೆ ಯೋಗ, ಧ್ಯಾನ, ಮುದ್ರೆಗಳು ಸಹಕಾರಿಯಾಗುತ್ತದೆ. ವ್ಯಕ್ತಿಗೆ ಕಣ್ಣು ಒಂದು ಪ್ರಮುಖ ಅಂಗವಾಗಿದೆ. ನೇತ್ರಶೋಧನ ಕ್ರಿಯೆ (ತಾಟಕ ಕ್ರಿಯೆ) ಅಭ್ಯಾಸ ನಡೆಸಿ. ದಿನವೂ ಸ್ವಚ್ಛ ನೀರಿನಲ್ಲಿ ಕಣ್ಣುಗಳನ್ನು ಶುಚಿ ಮಾಡಿ.

    ಮುದ್ರೆಗಳು: ಪ್ರಾಣಮುದ್ರೆಯಲ್ಲಿ ಓಂ ಅಗ್ನಿಂ ಶಿವಾಯ ನಮಃ ಎಂದು 108 ಬಾರಿ ಪಠಿಸಿ. ಓಂ ಚಂದ್ರಾಯ ನಮಃ ಎಂದು 108 ಬಾರಿ ಪಠಿಸಿ ಆಕಾಶಮುದ್ರೆ ಮಾಡಿ ಹಾಗೂ ರಾತ್ರಿ ಚಂದ್ರನ ಬೆಳಕನ್ನು ಸ್ವಲ್ಪ ಹೊತ್ತು ನೋಡಿ. ಚಂದ್ರನ ಬೆಳಕು, ಕಣ್ಣಿಗೆ ತಂಪು. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತಲಾ ಹತ್ತು ನಿಮಿಷ ಪ್ರಾಣಾಯಾಮ, ಧ್ಯಾನ ಮಾಡಿ ಹಾಗೂ ಆರು ತಿಂಗಳು ಯೋಗ ತರಗತಿಯಲ್ಲಿ ಭಾಗವಹಿಸಿ. ಕಣ್ಣಿನ ಆರೋಗ್ಯಕ್ಕೆ ಶಾಂಭವಿ ಮುದ್ರೆ ಸಹಕಾರಿಯಾಗುತ್ತದೆ.

    ಕ್ರಿಶ್ಚಿಯನ್​ಗೆ ಮತಾಂತರಗೊಂಡ ಮುಸ್ಲಿಂ ಯುವತಿಗೆ ತಂದೆಯಿಂದ ಘೋರ ಶಿಕ್ಷೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts