More

    ಧನ್ವಂತರಿ: ಶ್ರೇಷ್ಠ ಗುಣದ ಜ್ಯೇಷ್ಠಮಧು

    ಧನ್ವಂತರಿ: ಶ್ರೇಷ್ಠ ಗುಣದ ಜ್ಯೇಷ್ಠಮಧುವೈರಸ್ ನಿರೋಧಕ ಗುಣವುಳ್ಳ ಗಿಡಮೂಲಿಕೆಯ ಬಗ್ಗೆ ತಿಳಿಯೋಣ. ಅದೇ ಜ್ಯೇಷ್ಠಮಧು. ಇದಕ್ಕೆ ಎಷ್ಟೋ ಕಡೆ ಜ್ಯೇಷ್ಠಮದ್ದು ಎಂದೂ ಕರೆಯುವ ರೂಢಿಯಿದೆ. ಅದು ತಪ್ಪು ಉಚ್ಚಾರವಾದರೂ ಒಂದರ್ಥದಲ್ಲಿ ಸರಿ. ಏಕೆಂದರೆ ಅದಕ್ಕೆ ಅಷ್ಟೊಂದು ಮದ್ದಿನ ಗುಣವಿದೆ. ತಲೆಗೂದಲ ಬುಡವನ್ನು ಗಟ್ಟಿಗೊಳಿಸುವುದರಿಂದ ಪಾದದ ಬಿರುಕಿನ ಸಮಸ್ಯೆಯನ್ನು ನಿವಾರಿಸುವವರೆಗೆ ಅಂದರೆ ಬಹುತೇಕ ಇಡೀ ದೇಹಕ್ಕೆ ಅನುಕೂಲ ಮಾಡಿಕೊಡುವ ಮದ್ದಿನ ಗುಣ ಇದಕ್ಕಿದೆ. ದೇಹಕ್ಕೆ ಉಷ್ಣವಾಗಿದ್ದರೆ ವಿಶೇಷವಾಗಿ ಹೊಟ್ಟೆ ಉರಿ, ಗಂಟಲು ಉರಿಯಾಗಿದ್ದರೆ ತಂಪುಗುಣವನ್ನು ಹೊಂದಿದ ಇದು ಸಹಾಯಕವಾಗಿದೆ. ಭಾವಪ್ರಕಾಶದಲ್ಲಿ ಇದಕ್ಕೆ ‘ಚಕ್ಷುಷ್ಯಾ ಬಲವರ್ಣ ಕೃತ್’ ಎಂದಿದ್ದಾರೆ. ಅಂದರೆ ಕಣ್ಣುಗಳ ಮತ್ತು ದೇಹದ ಶಕ್ತಿಯನ್ನು ಹೆಚ್ಚಿಸುವುದರೆ ಜೊತೆಗೆ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ ಎಂದರ್ಥ. ಮನಸ್ಸಿಗೂ ಶಕ್ತಿಯನ್ನು ಕೊಡುವುದರಿಂದ ನಿದ್ರಾಹೀನತೆ, ಖಿನ್ನತೆ, ಒತ್ತಡದಲ್ಲಿರುವವರಿಗೆ ಸಹಕಾರಿ. ಹಾಡುಗಾರರಿಗೆ ಇದು ಅತ್ಯಂತ ಪ್ರಿಯವಾದದ್ದು; ಧ್ವನಿಯನ್ನು ಮಧುರವಾಗಿಸುವುದರ ಜೊತೆಗೆ ಧ್ವನಿಪೆಟ್ಟಿಗೆಯ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಇದನ್ನು ಬಾಯಲ್ಲಿಟ್ಟುಕೊಂಡು ರಸ ನುಂಗುತ್ತಿದ್ದರೆ ಗಾಯಕರು, ಅಧ್ಯಾಪಕರಿಗೆಲ್ಲ ತುಂಬ ಅನುಕೂಲ.

    ಶ್ವಾಸಕೋಶಕ್ಕೆ ಶಕ್ತಿ ನೀಡಿ ಕಫವನ್ನು ಹೊರಹಾಕುವ ಗುಣವಿರುವುದರಿಂದ ಶ್ವಾಸಾಂಗವ್ಯೂಹದ ಕೆಮ್ಮು, ಅಸ್ತಮಾ, ನ್ಯೂಮೋನಿಯಾದಂತಹ ಸಮಸ್ಯೆಗಳಲ್ಲಿ ಅರ್ಧ ಚಮಚದಷ್ಟು ಪುಡಿಯನ್ನು ದಿನಕ್ಕೆರಡು ಬಾರಿ ಜೇನುತುಪ್ಪ ಅಥವಾ ಬೆಲ್ಲದ ಜೊತೆ ತೆಗೆದುಕೊಳ್ಳಬೇಕು. ಆಯುರ್ವೆದ ಗ್ರಂಥಗಳ ಪ್ರಕಾರ ಕ್ಷಯರೋಗದಲ್ಲಿಯೂ ಇದು ಪ್ರಯೋಜನಕಾರಿ.

    ಇದನ್ನೂ ಓದಿ  ಸಾವರ್ಕರ್ ಹೆಸರಿನ ವಿವಾದ: ಮೇಲ್ಸೇತುವೆ ಉದ್ಘಾಟನೆಯೇ ಮುಂದೂಡಿಕೆ!

    ದೇಹದಲ್ಲಿ ವಿಷ ಸೇರಿಕೊಂಡಿದ್ದರೆ, ಗುಣವಾಗದ ಗಾಯವಿದ್ದರೆ, ಪದೇಪದೆ ವಾಂತಿಯಾಗುತ್ತಿದ್ದರೆ ಅವನ್ನು ತಡೆಯಲು ಇದರಿಂದ ಪ್ರಯೋಜನವಾಗುತ್ತದೆ. ಆಸಿಡಿಟಿ, ಎಚ್ ಪೈಲೋರಿಯ ಸಮಸ್ಯೆಗಳಲ್ಲಿ ಇದು ಎಷ್ಟು ಅದ್ಭುತ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ಹಿಂದೆಯೇ ಹೇಳಲಾಗಿದೆ. ಸಂಜೆ ಹಾಲಿನ ಜೊತೆ ಅರ್ಧ ಚಮಚ ಇದರ ಪುಡಿಯನ್ನು ಹಾಕಿ ಕುಡಿದರೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಮಲಬದ್ಧತೆ ಪರಿಹಾರವಾಗುತ್ತದೆ. ಮೂತ್ರ ಸಲೀಸಾಗಿ ಆಗದಿದ್ದರೆ, ಉರಿಮೂತ್ರವಿದ್ದರೆ ಇದನ್ನು ಬಳಸಬಹುದು. ತಾಯಿಹಾಲು ಹೆಚ್ಚಿಸುವ, ಲೈಂಗಿಕಶಕ್ತಿ ವೃದ್ಧಿಸುವ ಗುಣ ಇದಕ್ಕಿದೆ.

    ಮಧುಮೇಹದಲ್ಲಿ ಇದು ಸಹಕಾರಿ. ಬಾಯಿಗೂ ಉದರಕ್ಕೂ ಸಿಹಿ ನೀಡುತ್ತದೆ. ಇದರ ವೈರಸ್ ನಿರೋಧಕ ಗುಣ ಆಧುನಿಕ ಸಂಶೋಧನೆಗಳಿಂದ ಸಾಬೀತಾಗಿದೆ. ವಿಶೇಷವಾಗಿ ಶ್ವಾಸಕೋಶಗಳಿಗೆ ತೊಂದರೆ ಕೊಡುವ ಮತ್ತು ಏಡ್ಸ್ ವೈರಸ್​ಗಳನ್ನು ನಿರೋಧಿಸುವ ಗುಣ ಇದಕ್ಕಿದೆ. ಹಾಗಾಗಿ ಇದರ ಪುಡಿಯನ್ನು ಆರೋಗ್ಯವಂತರು ಕೊತ್ತಂಬರಿ, ಜೀರಿಗೆ, ಶುಂಠಿ, ಅರಿಶಿಣ, ಕಾಳುಮೆಣಸುಗಳ ಜೊತೆ ಸೇರಿಸಿಟ್ಟುಕೊಂಡು ಕಷಾಯ ಅಥವಾ ಹರ್ಬಲ್ ಟೀ ಮಾಡಿಕೊಂಡು ಕುಡಿಯಬಹುದು. ಇದು ಸುಲಭವಾಗಿ ಪಚನವಾಗದಿದ್ದರೂ ಮೇಲಿನ ಸಾಂಬಾರಪದಾರ್ಥಗಳ ಜೊತೆ ಬಳಸಿದಾಗ ಸುಲಭವಾಗಿ ಪಚನವಾಗುತ್ತದೆ. ಜ್ಯೇಷ್ಠಮಧುವನ್ನು ದಿನಕ್ಕೆ ಮೂರರಿಂದ ನಾಲ್ಕು ಗ್ರಾಂನಷ್ಟು ಬಳಸಬಹುದು. ದೀರ್ಘಕಾಲ ಬಳಸುವುದಿದ್ದರೆ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ. ಏಕೆಂದರೆ ಇದರ ಅತಿ ಬಳಕೆಯಿಂದ ದೇಹದಲ್ಲಿ ಪೊಟ್ಯಾಶಿಯಂ ಪ್ರಮಾಣ ಕಡಿಮೆಯಾಗಿ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

    ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ರಾಜ್ಯ ಹೈಕೋರ್ಟ್ ಗ್ರೀನ್ ಸಿಗ್ನಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts