More

    ತೆಂಡುಲ್ಕರ್​ ಪುತ್ರನ ಸ್ನೇಹ ಬೆಳೆಸಿಕೊಂಡಿದ್ದು ಹೇಗೆ ಇಂಗ್ಲೆಂಡ್​ ಮಹಿಳಾ ಕ್ರಿಕೆಟರ್​ ಡೇನಿಯಲ್​ ವ್ಯಾಟ್?

    ಲಂಡನ್: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಪ್ರತಿಭಾವಂತ ಬ್ಯಾಟುಗಾರ್ತಿ ಡೇನಿಯಲ್ ವ್ಯಾಟ್. 29 ವರ್ಷದ ಅವರು ಈ ಹಿಂದೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಸಾಮಾಜಿಕ ಜಾಲತಾಣದಲ್ಲೇ ಪ್ರೇಮ ನಿವೇದನೆ ಮಾಡಿ ಸುದ್ದಿಯಾಗಿದ್ದರು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ಜತೆಗೆ ಡೇನಿಯಲ್ ವ್ಯಾಟ್ ಆಪ್ತ ಗೆಳೆತನ ಹೊಂದಿದ್ದಾರೆ. ಅರ್ಜುನ್ ಇಂಗ್ಲೆಂಡ್‌ಗೆ ಭೇಟಿ ನೀಡಿದಾಗಲೆಲ್ಲಾ ಇಬ್ಬರೂ ಜತೆಯಾಗಿಯೇ ಕ್ರಿಕೆಟ್ ಅಭ್ಯಾಸದಲ್ಲಿ ಭಾಗಿಯಾಗುತ್ತಾರೆ. ಈ ಸ್ನೇಹ ಬೆಳೆದುಬಂದ ಬಗ್ಗೆ ಡೇನಿಯಲ್ ವ್ಯಾಟ್ ಇತ್ತೀಚೆಗೆ ವಿವರಿಸಿದ್ದಾರೆ.

    ಇದನ್ನೂ ಓದಿ: ವಿರಾಟ್ ಕೊಹ್ಲಿ ಬ್ಯಾಟಿಂಗ್ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಗಂಭೀರ್

    ‘ಸಚಿನ್ ಮತ್ತು ಅರ್ಜುನ್‌ರನ್ನು ನಾನು ಮೊದಲ ಬಾರಿ ಭೇಟಿಯಾಗಿದ್ದು ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ. ಅದು 2009 ಅಥವಾ 2010 ಇರಬಹುದು. ಲಾರ್ಡ್ಸ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಎಂಸಿಸಿಯ ಯುವ ಕ್ರಿಕೆಟಿಗರ ಜತೆಗೆ ನಾನಿದ್ದೆ. ಆಗ ಅಲ್ಲಿಗೆ ಬಂದ ಸಚಿನ್ ಅವರನ್ನು ನೋಡಿ, ನೇರವಾಗಿ ಅವರ ಹತ್ತಿರ ತೆರಳಿ ನನ್ನ ಪರಿಚಯ ಮಾಡಿಕೊಂಡೆ. ಅರ್ಜುನ್‌ಗೆ ಆಗ 10 ವರ್ಷವಿರಬಹುದು. ಆತ ತುಂಬ ಚಿಕ್ಕವನಿದ್ದ. ನಮ್ಮ ಈ ಭೇಟಿಯ ಚಿತ್ರ ಗೂಗಲ್‌ನಲ್ಲೂ ಇದೆ. ಆ ದಿನ ನಾನು ಅರ್ಜುನ್‌ಗೆ ಬೌಲಿಂಗ್ ಮಾಡಿದ್ದೆ. ಆತ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದ’ ಎಂದು ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾದ ಡೇನಿಯಲ್ ವ್ಯಾಟ್ ವಿವರಿಸಿದ್ದಾರೆ.

    ತೆಂಡುಲ್ಕರ್​ ಪುತ್ರನ ಸ್ನೇಹ ಬೆಳೆಸಿಕೊಂಡಿದ್ದು ಹೇಗೆ ಇಂಗ್ಲೆಂಡ್​ ಮಹಿಳಾ ಕ್ರಿಕೆಟರ್​ ಡೇನಿಯಲ್​ ವ್ಯಾಟ್?

    ‘ಆ ಭೇಟಿಯ ಬಳಿಕ ಸಚಿನ್ ಮತ್ತು ಅರ್ಜುನ್ ಲಾರ್ಡ್ಸ್‌ಗೆ ತರಬೇತಿಗಾಗಿ ಬಂದಾಗಲೆಲ್ಲ ನಾನು ಭೇಟಿಯಾಗುತ್ತಿದ್ದೆ. ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವಂತೆ ನಾನು ಅರ್ಜುನ್‌ಗೆ ಕೇಳಿಕೊಳ್ಳುತ್ತಿದ್ದೆ. ಇತ್ತೀಚಿನ ದಿನಗಳಲ್ಲಿ ಆತನ ಬೌಲಿಂಗ್ ವೇಗ ಸಾಕಷ್ಟು ಸುಧಾರಿಸಿದೆ. ನಾನು ಬೌನ್ಸರ್ ಹಾಕಿ ನಿನ್ನ ತಲೆಗೆ ಏಟು ಮಾಡುವೆ ಎಂದು ಆತ ಹೇಳುತ್ತಿರುತ್ತಾನೆ. ಮುಂದಿನ ದಿನಗಳಲ್ಲಿ ಆತನ ಬೌಲಿಂಗ್ ಎದುರಿಸುವುದು ನನಗೆ ಕಷ್ಟವಾಗಬಹುದು. ಆತ ಈಗ ಅಪಾಯಕಾರಿ ವೇಗಿಯಾಗುತ್ತಿದ್ದಾನೆ’ ಎಂದು ವ್ಯಾಟ್ ವಿವರಿಸಿದ್ದಾರೆ.

    ತೆಂಡುಲ್ಕರ್​ ಪುತ್ರನ ಸ್ನೇಹ ಬೆಳೆಸಿಕೊಂಡಿದ್ದು ಹೇಗೆ ಇಂಗ್ಲೆಂಡ್​ ಮಹಿಳಾ ಕ್ರಿಕೆಟರ್​ ಡೇನಿಯಲ್​ ವ್ಯಾಟ್?

    ‘ಸಚಿನ್ ಅವರದು ಸೊಗಸಾದ ಕುಟುಂಬ. ಅರ್ಜುನ್‌ನ ಅಮ್ಮ ಕೂಡ ನನಗಿಷ್ಟ. ಇತ್ತೀಚೆಗೆ ಟಿ20 ವಿಶ್ವಕಪ್ ವೇಳೆ ಸಚಿನ್ ತೆಂಡುಲ್ಕರ್ ಅವರನ್ನು ಭೇಟಿಯಾಗಿದ್ದೆ. ಅವಕಾಶ ಸಿಕ್ಕಾಗಲೆಲ್ಲ ಅವರನ್ನು ಭೇಟಿಯಾಗಿ ಮಾತನಾಡಿಸಲು ಖುಷಿಯಾಗುತ್ತದೆ’ ಎಂದು ವ್ಯಾಟ್ ಹೇಳಿದ್ದಾರೆ. ಇಂಗ್ಲೆಂಡ್ ಪರ 74 ಏಕದಿನ ಮತ್ತು 109 ಟಿ20 ಪಂದ್ಯಗಳನ್ನು ಆಡಿರುವ ವ್ಯಾಟ್, ಕ್ರಮವಾಗಿ 1,028 ಮತ್ತು 1,588 ರನ್ ಬಾರಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 2 ಶತಕ ಸಿಡಿಸಿದ ಸಾಧನೆಯೂ ಅವರದಾಗಿದೆ.

    ಸತತ ವೈಫಲ್ಯದಿಂದ ಕಂಗೆಟ್ಟಿದ್ದೀರಾ? ಲಂಕಾ ಕ್ರಿಕೆಟಿಗ ಅಟಪಟ್ಟು ಯಶೋಗಾಥೆ ನಿಮಗೇಕೆ ಸ್ಫೂರ್ತಿಯಾಗಬಾರದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts