More

    ಗಣ್ಯ ವ್ಯಕ್ತಿಯೊಂದಿಗೆ ಡ್ಯಾನ್ಸರ್​ ಲವ್ವಿ ಡವ್ವಿ! ಕೆಲವೇ ದಿನಗಳಲ್ಲಿ ನಡುರಸ್ತೆಯಲ್ಲಿ ಹೆಣವಾದ ಡ್ಯಾನ್ಸರ್​!

    ಮಾಸ್ಕೋ: ಗಣ್ಯ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿಕೊಂಡ ಡ್ಯಾನ್ಸರ್​ ಒಬ್ಬಳು ನಡು ರಸ್ತೆಯಲ್ಲಿ ಹೆಣವಾದ ಘಟನೆ ರಷ್ಯಾದ ಮಾಸ್ಕೋದಲ್ಲಿ ನಡೆದಿದೆ. ಪ್ರಸಿದ್ಧ ನರ್ತಕಿಯಾಗಿದ್ದ ಆಕೆಯನ್ನು ಅಸೂಯೆಯಿಂದಲೂ ಕೊಲೆ ಮಾಡಿರುವ ಸಾಧ್ಯತೆಯಿದೆ ಎನ್ನಲಾಗಿದೆ.

    ಇದನ್ನೂ ಓದಿ: ಅಧಿವೇಶನವಿದ್ದಾಗ ಅಮೆರಿಕ, ಉಸಿರಾಟಕ್ಕೆ ಗೋವಾ, ಸ್ಥಾಪನಾ ದಿನವಿದ್ದಾಗ ಇಟಲಿ… ಜಾಲತಾಣದ ತುಂಬ​ 9 2 11

    ನಟಾಲಿಯಾ ಪ್ರೊಯಿನಾ (30) ಪ್ರಸಿದ್ಧ ನರ್ತಕಿಯಾಗಿದ್ದು, ತನ್ನದೇ ಆದ ತಂಡ ರಚಿಸಿಕೊಂಡು ಅನೇಕ ಕಾರ್ಯಕ್ರಮಗಳನ್ನು ಕೊಡುತ್ತಿದ್ದಳು. ರಾಜಕಾರಣಿಗಳು, ಗಣ್ಯರ ಪಾರ್ಟಿಗಳಿಗೆ ಈಕೆಯ ತಂಡ ನೃತ್ಯ ಕಾರ್ಯಕ್ರಮ ನಡೆಸಿಕೊಡುತ್ತಿತ್ತು. ಅದೇ ಕಾರಣದಿಂದಾಗಿ ಆಕೆಗೆ ಗಣ್ಯ ವ್ಯಕ್ತಿಯೊಬ್ಬರೊಂದಿಗೆ ಸ್ನೇಹ ಬೆಳೆದಿದೆ. ಅವರಿಬ್ಬರ ಮಧ್ಯೆ ಅಕ್ರಮ ಸಂಬಂಧವೂ ಆರಂಭವಾಗಿತ್ತು ಎನ್ನಲಾಗಿದೆ. ಈ ವಿಚಾರ ಆ ವ್ಯಕ್ತಿಯ ಪತ್ನಿಗೆ ತಿಳಿದುಬಂದಿದೆ. ನಂತರ ನಟಾಲಿಯಾಗೆ ಬೆದರಿಕೆ ಕರೆಗಳು ಬಂದಿದ್ದವು. ಯಾವುದೋ ಸುಪಾರಿ ಕಿಲ್ಲರ್​ ಕೈನಲ್ಲಿ ಕೊಲೆ ಮಾಡಿಸಲಾಗಿದೆ ಎನ್ನಲಾಗಿದೆ.

    ಆದರೆ ಈ ವಿಚಾರವನ್ನು ತಳ್ಳಿ ಹಾಕಿರುವ ಆಕೆಯ ಸ್ನೇಹ ವಲಯದ ವ್ಯಕ್ತಿ, “ನಟಾಲಿಯಾಗೆ ಸ್ನೇಹಿತರ ಜತೆ ದ್ವೇಷಿಸುವವರೂ ಅಷ್ಟೇ ಜನರಿದ್ದರು. ಆಕೆ ಸೌಂದರ್ಯವತಿ, ತುಂಬಾ ಚೆನ್ನಾಗಿ ನೃತ್ಯ ಮಾಡುತ್ತಿದ್ದಳು. ಆ ಕಾರಣದಿಂದ ಅನೇಕರು ಆಕೆಯ ಬಗ್ಗೆ ಅಸೂಯೆ ಹೊಂದಿದ್ದರು. ಅದರಿಂದಾಗಿಯೇ ಆಕೆಯನ್ನು ಯಾರಾದರೂ ಕೊಲೆ ಮಾಡಿರಬಹುದು. ಅದರ ಜತೆ ಆಕೆ 6 ಸಾವಿರ ಪೌಂಡ್​ ಸಾಲವನ್ನೂ ಹೊಂದಿದ್ದಳು” ಎಂದು ಹೇಳಿದ್ದಾರೆ.

    ಇದನ್ನೂ ಓದಿ: ರಾತ್ರೋರಾತ್ರಿ ಮಹಿಳೆ ಸೇರಿ ಮತ್ತಿಬ್ಬರು ಕಂಡವರ ಮನೆಯಲ್ಲಿ ಮಾಡಬಾರದ್ದನ್ನು ಮಾಡಲು ಹೋಗಿ ಸಿಕ್ಕಿಬಿದ್ರು!

    ಇತ್ತೀಚೆಗೆ ರಸ್ತೆ ಮೇಲೆ ನಡೆದು ಬರುತ್ತಿದ್ದ ನಟಾಲಿಯಾ ಬಳಿ ವ್ಯಕ್ತಿಯೊಬ್ಬ ಪಿಸ್ತೂಲಿನೊಂದಿಗೆ ಬಂದಿದ್ದಾನೆ. ಬೈಕ್​ನಲ್ಲಿ ಬಂದ ಆತ ಗ್ರೆನೇಡ್​ನ್ನೂ ಹಾಕಿದ್ದು, ಸುತ್ತಲಿನ ಜನರಿಗೆ ಏನು ನಡೆಯುತ್ತಿದೆ ಎನ್ನುವುದು ತಿಳಿಯದಂತೆ ಮಾಡಿದ್ದಾನೆ. ನಂತರ ನಟಾಲಿಯಾಗೆ ಗುಂಡಿಕ್ಕಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಈ ಪ್ರಕರಣದ ಇನ್ನೂ ತನಿಖಾ ಹಂತದಲ್ಲಿದ್ದು, ತನಿಖೆಯ ನಂತರ ಅಪರಾಧಿಗಳು ಯಾರೆಂದು ತಿಳಿದುಬರಬೇಕಿದೆ. (ಏಜೆನ್ಸೀಸ್​)

    PHOTO GALLERY: ರಮೇಶ್​ ಅರವಿಂದ್​ ಮಗಳ ಮದುವೆ …

    ಭಾವಿ ಪತಿಗೆ ಮಲಗಲು ತನ್ನ ಮನೆಯಲ್ಲೇ ಜಾಗ ಕೊಟ್ಟ ಯುವತಿ, ಬೆಳಗ್ಗೆ ಎದ್ದಾಗ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts