More

    ಶ್ರೀರಾಮಮಂದಿರ ಭೂಮಿ ಪೂಜೆಯ ಪ್ರಸಾದ ಮೊದಲು ವಿತರಣೆಯಾಗಿದ್ದು ಯಾರಿಗೆ ಗೊತ್ತಾ?

    ಅಯೋಧ್ಯೆ: ರಾಮಮಂದಿರ ಶಿಲಾನ್ಯಾಸವನ್ನು ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೆರವೇರಿಸಿದ್ದಾರೆ.
    ಭೂಮಿಪೂಜೆಗಾಗಿ ಪ್ರಸಾದವನ್ನೂ ತಯಾರಿಸಲಾಗಿತ್ತು. ಪೂಜೆಯ ನಂತರ ಪ್ರಸಾದ ವಿತರಣೆಯೂ ನಡೆದಿದೆ. ಆದರೆ ಪ್ರಸಾದ ಮೊದಲು ಸೇರಿದ್ದು ಯಾರಿಗೆ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ

    ರಾಮಜನ್ಮಭೂಮಿ ಶಿಲಾನ್ಯಾಸದ ಮೊದಲ ಆಮಂತ್ರಣ ಪತ್ರಿಕೆ ಬಾಬ್ರಿ ಮಸೀದಿ ಕಕ್ಷಿದಾರ ಇಕ್ಬಾಲ್​ ಅನ್ಸಾರಿಯವರಿಗೆ ಹೋಗಿತ್ತು. ಹಾಗೇ ಪ್ರಸಾದ ಕೂಡ ಓರ್ವ ಅಚ್ಚರಿಯ ವ್ಯಕ್ತಿಗೆ ಮೊದಲು ಹೋಗಿದೆ. ಇದನ್ನೂ ಓದಿ: ಗಣಿ ಅಗೆಯುತ್ತಿದ್ದ ಕಾರ್ಮಿಕ ರಾತ್ರೋರಾತ್ರಿ ಸಿರಿವಂತನಾದ: ಮೂರು ವಜ್ರದ ಕರಾಮತ್ತು !

    ಅಯೋಧ್ಯಾ ಭೂಮಿಪೂಜೆಯ ಮೊದಲ ಪ್ರಸಾದವನ್ನು ಒಂದು ದಲಿತ ಕುಟುಂಬಕ್ಕೆ ನೀಡಲಾಗಿದೆ. ಪ್ರಧಾನಮಂತ್ರಿ ಆವಾಸ್​ ಯೋಜನೆಯಡಿ ವಸತಿ ಸೌಕರ್ಯ ಪಡೆದ ಮಹಾಬಿರ್​ ಅವರ ಕುಟುಂಬಕ್ಕೆ ರಾಮ್​ ಚರಿತ್​ ಮಾನಸಾ ಪುಸ್ತಕ ಮತ್ತು ತುಳಸಿ ಮಾಲೆಯೊಂದಿಗೆ ಮೊದಲ ಪ್ರಸಾದವನ್ನು ಕಳಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.

    ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್​ ಅವರು ಮಹಬೀರ್​ ಮನೆಗೆ ಭೇಟಿ ಕೊಟ್ಟಿದ್ದರು. ಅಲ್ಲದೆ, ಊಟವನ್ನೂ ಮಾಡಿದ್ದರು.

    ಆಗಸ್ಟ್​ 5ರಂದು ಭೂಮಿ ಪೂಜೆ ನಡೆದ ಬಳಿಕ ಇಡೀ ದೇವಾಲಯವನ್ನು ಸ್ವಚ್ಛಗೊಳಿಸಲಾಗಿದ್ದು, ಮಂದಿರ ನಿರ್ಮಾಣ ಕಾರ್ಯ ಶನಿವಾರದಿಂದ ಪ್ರಾರಂಭವಾಗಲಿದೆ. (ಏಜೆನ್ಸೀಸ್​)

    ‘ಆಗಸ್ಟ್​ 5’ ‘ಆಗಸ್ಟ್​ 15’- ಈ ಬಾರಿ ಪ್ರಧಾನಿ ನರೇಂದ್ರ ಮೋದಿಯನ್ನು ಪರೋಕ್ಷವಾಗಿ ವಿರೋಧಿಸಿದ ದೀದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts