More

    ದ.ಕ. ಜಿಲ್ಲೆಯಲ್ಲಿ 285 ಪಾಸಿಟಿವ್

    ಮಂಗಳೂರು: ದ.ಕ. ಜಿಲ್ಲೆಯಲ್ಲಿ ಭಾನುವಾರ 285 ಕರೊನಾ ಪಾಸಿಟಿವ್ ಕೇಸ್ ವರದಿಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಕರೊನಾ ಮುಕ್ತರಾದ 104 ಮಂದಿ ಮನೆಗೆ ಮರಳಿದ್ದಾರೆ.
    ಮಂಗಳೂರು ನಿವಾಸಿ 77 ವರ್ಷದ ಮಹಿಳೆ ಜುಲೈ 9ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಶನಿವಾರ ಮೃತಪಟ್ಟಿದ್ದರು. ಅವರು ಕ್ಯಾನ್ಸರ್, ಅಸ್ತಮಾ, ಅರ್ಥೈಟಿಸ್‌ನಿಂದ ಬಳಲುತ್ತಿದ್ದರು. ಅವರಿಗೆ ಕರೊನಾ ದೃಢಪಟ್ಟಿತ್ತು.
    ಮಂಗಳೂರು ನಿವಾಸಿ 53 ವರ್ಷದ ಪುರುಷ ಜುಲೈ 15ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಭಾನುವಾರ ಮೃತಪಟ್ಟಿದ್ದಾರೆ. ಅವರಿಗೆ ಬಹು ಅಂಗಾಂಗ ವೈಫಲ್ಯ ಆಗಿದ್ದು ಅನಿಯಂತ್ರಿತ ಡಯಾಬಿಟಿಸ್‌ನಿಂದ ಬಳಲುತ್ತಿದ್ದರು. ಈವರೆಗೆ ಜಿಲ್ಲೆಯಲ್ಲಿ ಕರೊನಾ ಪ್ರಕರಣ 3596ಕ್ಕೆ ಏರಿಕೆಯಾಗಿದ್ದು, 2028 ಸಕ್ರಿಯ ಪ್ರಕರಣಗಳಿವೆ. ಮೃತಪಟ್ಟವರ ಸಂಖ್ಯೆ 77ಕ್ಕೆ ಏರಿಕೆಯಾಗಿದೆ.

    ಕ್ವಾರಂಟೈನ್ ಉಲ್ಲಂಘನೆ ಐವರ ವಿರುದ್ಧ ಕೇಸು
    ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಸುಳ್ಯದ ಖಾಸಗಿ ಆಸ್ಪತ್ರೆಯೊಂದಕ್ಕೆ ಕೆಲಸಕ್ಕಾಗಿ ಬಂದ ಐವರ ವಿರುದ್ಧ ಜಿಲ್ಲಾಡಳಿತ ಆದೇಶನುಸಾರ ತಹಸೀಲ್ದಾರ್ ದೂರಿನಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 15ರಂದು ಎಂಆರ್‌ಐ ಸ್ಕಾೃನಿಂಗ್ ಮಷಿನ್ ರಿಪೇರಿಗಾಗಿ ತಮಿಳುನಾಡಿನಿಂದ ಆಗಮಿಸಿದ್ದ ವಾನನ್ಸ್, ದೇವರಾಮನ, ಪ್ರೇಮ ಕುಮಾರ್ ಜಿ, ಸುಳ್ಯ ಗಾಂಧಿನಗರ ನಿವಾಸಿ ಪ್ರವೀಣ್ ಜಾರ್ಜ್ ಹಾಗೂ ಬೆಳ್ಳಾರೆ ನಿವಾಸಿ ಶ್ರುತಿ ಸಿ.ಎಸ್. ಅವರನ್ನು ಕ್ವಾರಂಟೈನ್‌ಗೆ ಒಳಗಾಗಲು ಅದೇಶಿಸಲಾಗಿತ್ತು. ಆದರೆ ಅವರು ನಿಯಮ ಉಲ್ಲಂಘಿಸಿದ್ದರು.

    ಪುತ್ತೂರು ವೈದ್ಯೆಗೆ ಪಾಸಿಟಿವ್
    ಪುತ್ತೂರು: ಹಾರಾಡಿ ನಿವಾಸಿ 55 ವರ್ಷದ ಖಾಸಗಿ ಆಸ್ಪತ್ರೆಯ ವೈದ್ಯೆಯಲ್ಲಿ ಭಾನುವಾರ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಅವರ ಪತಿ 65 ವರ್ಷದ ವೈದ್ಯರಿಗೆ ಶನಿವಾರ ಸೋಂಕು ಖಚಿತವಾಗಿತ್ತು. ಕರ್ಮಲ ನಿವಾಸಿ 48 ವರ್ಷದ ಮಹಿಳೆ, ನರಿಮೊಗರು ಗ್ರಾಮದ 45 ವರ್ಷದ ಮಹಿಳೆಯಲ್ಲಿ ಭಾನುವಾರ ಕರೊನಾ ಪಾಸಿಟಿವ್ ಬಂದಿದೆ.

    ಕಾಸರಗೋಡಿನ 57 ಮಂದಿಗೆ ಪಾಸಿಟಿವ್
    ಕಾಸರಗೋಡು: ಜಿಲ್ಲೆಯ 57 ಮಂದಿ ಸಹಿತ ಕೇರಳದಲ್ಲಿ ಭಾನುವಾರ 821 ಮಂದಿಯಲ್ಲಿ ಕೋವಿಡ್-19 ರೋಗ ಕಾಣಿಸಿಕೊಂಡಿದೆ. ಇವರಲ್ಲಿ 110 ಮಂದಿ ವಿದೇಶದಿಂದ, 69 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರಾಗಿದ್ದರೆ, 629 ಮಂದಿಗೆ ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದೆ. ಕಾಸರಗೋಡಿನ ಒಬ್ಬರ ಸಹಿತ ಕೇರಳದಲ್ಲಿ ಒಟ್ಟು 13 ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೋಂಕು ತಗುಲಿದೆ. ಕಾಸರಗೋಡು ಜಿಲ್ಲೆಯ 12 ಮಂದಿ ಒಳಗೊಂಡಂತೆ ರೋಗ ಬಾಧಿಸಿ ಚಿಕಿತ್ಸೆಯಲ್ಲಿದ್ದವರಲ್ಲಿ ಭಾನುವಾರ 172 ಮಂದಿ ಗುಣಮುಖರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts