More

    ಹೈನುಗಾರಿಕೆ, ರೇಷ್ಮೆ ಕೃಷಿಯಿಂದ ಲಾಭ

    ಮಳವಳ್ಳಿ: ರೈತ ಸಮುದಾಯ ಹೈನುಗಾರಿಕೆ ಮತ್ತು ರೇಷ್ಮೆ ಕೃಷಿಯನ್ನು ಜೀವನೋಪಯಕ್ಕಾಗಿ ಅಳವಡಿಸಿಕೊಂಡಿರುವುದು ಪ್ರಸ್ತುತ ದಿನಮಾನಕ್ಕೆ ಉತ್ತಮ ಬೆಳವಣಿಗೆ ಎಂದು ಶಾಸಕ ನರೇಂದ್ರಸ್ವಾಮಿ ತಿಳಿಸಿದರು.

    ತಾಲೂಕಿನ ನೆಲ್ಲೂರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನಿರ್ಮಿಸಿರುವ ಗೋದಾಮು ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಹಸು ಸಾಕಣೆಯಿಂದ ಜೀವನ ನಿರ್ವಹಣೆ ನಡೆದರೆ, ರೇಷ್ಮೆ ಬೆಳೆಯಿಂದ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಒಳ್ಳೆಯ ಆಲೋಚನೆಯಾಗಿದೆ. ಮುಂದಿನ ದಿನಗಳಲ್ಲೂ ತೋಟಗಾರಿಕೆ ಮತ್ತು ಬಹು ಬೆಳೆ ಕೃಷಿ ಪದ್ಧತಿಗಳನ್ನು ರಾಸಾಯನಿಕಮುಕ್ತವಾಗಿ ರೂಢಿಸಿಕೊಳ್ಳುವ ಮೂಲಕ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.

    ಡೇರಿ ಅಧ್ಯಕ್ಷ ಶಂಕರೇಗೌಡ, ಉಪಾಧ್ಯಕ್ಷೆ ಮಂಗಳಗೌರಿ, ಮನ್‌ಮುಲ್ ತಾಲೂಕು ವಿಸ್ತರಣಾಧಿಕಾರಿ ಮಧುಶಂಕರ್, ಕಾರ್ಯದರ್ಶಿ ನಂಜುಂಡೇಗೌಡ, ನಿರ್ದೇಶಕರಾದ ಅಂಕೇಗೌಡ, ನಿಂಗೇಗೌಡ, ಸಿದ್ದರಾಮ, ಜಯರಾಮು, ಸೋಮಣ್ಣ, ಚಿಕ್ಕಣ್ಣ, ಲಕ್ಷ್ಮೀ, ಶಿವರುದ್ರಪ್ಪ, ಭಾಗ್ಯ, ನೆಲಮಾಕನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಗಳಮ್ಮ, ಸದಸ್ಯರಾದ ನಾಗಪ್ಪ, ಶಕುಂತಲಾ, ಭಾಗ್ಯಮ್ಮ, ಆಂಜನೇಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts