More

    ನಿತ್ಯ ಭವಿಷ್ಯ: ಈ ರಾಶಿಯವರು ರೇಸ್-ಬೆಟ್ಟಿಂಗ್​ನಂಥ ಅದೃಷ್ಟದಾಟದಲ್ಲಿ ಭಾಗವಹಿಸದಿರುವುದೇ ಉತ್ತಮ.

    ಮೇಷ: ಸಮಸ್ತ ಪ್ರಪಂಚಕ್ಕೇ ಜ್ಞಾನದ ಬೆಳಕನ್ನು ಕರುಣಿಸುವ ಶಾರದಾಂಬೆಯು ನಿಮ್ಮನ್ನು ಕಾಪಾಡಲಿದ್ದಾಳೆ. ನಿರಾಳರಾಗಿರಿ. ಶುಭಸಂಖ್ಯೆ: 5

    ವೃಷಭ: ಶತಮೂರ್ಖ ಜನರು ನಿಮ್ಮ ಮಾನವನ್ನು ಕಳೆಯುವ ಸಂಕಷ್ಟ ತರಬಹುದು. ಅವರ ಜತೆಗೆ ಮಾತಾಡಲು ಹೋಗದಿರಿ. ಶುಭಸಂಖ್ಯೆ: 7

    ಮಿಥುನ: ಕುಲದೇವರ ದಿವ್ಯನಾಮವನ್ನು ಪಠಿಸಿ. ದೇವರ ಕೃಪಾಶೀರ್ವಾದದಿಂದ ಅನೇಕ ಇಷ್ಟಾರ್ಥಗಳು ಕೈಗೂಡಲಿವೆ. ಶುಭಸಂಖ್ಯೆ: 9

    ಕಟಕ: ಸೂರ್ಯದೇವನನ್ನು ಆದಿತ್ಯಹೃದಯ ಸ್ತೋತ್ರದಿಂದ ಸ್ತುತಿಸುವ ಕಾರ್ಯ ಜರುಗಲಿ. ವಿಶಿಷ್ಟ ಸಿದ್ಧಿ ಒದಗಿಬರಲಿದೆ. ಶುಭಸಂಖ್ಯೆ: 3

    ಸಿಂಹ: ನಿಮ್ಮ ಹಲವಾರು ಯೋಜನೆಗಳು ಒಮ್ಮೆಲೇ ಸಾಕಾರಗೊಳ್ಳುವುದು ಕಷ್ಟ. ಅನೇಕ ಜನರನ್ನು ಭೇಟಿ ಮಾಡಬೇಕಾಗುತ್ತದೆ. ಶುಭಸಂಖ್ಯೆ: 1

    ಕನ್ಯಾ: ರೇಸ್, ಬೆಟ್ಟಿಂಗ್​ನಂತಹ ಅದೃಷ್ಟದಾಟದಲ್ಲಿ ಭಾಗವಹಿಸದಿರುವುದೇ ಉತ್ತಮ. ಅದು ನಿಮ್ಮ ಧನನಾಶಕ್ಕೆ ಕಾರಣವಾದೀತು. ಶುಭಸಂಖ್ಯೆ: 8

    ತುಲಾ: ಜಮೀನಿನ ವಿಚಾರದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತ ಬಂದಿದ್ದೀರಿ. ಅವುಗಳೆಲ್ಲವೂ ಬಹು ಬೇಗ ಪರಿಹಾರಗೊಳ್ಳಲಿವೆ. ಶುಭಸಂಖ್ಯೆ: 2

    ವೃಶ್ಚಿಕ: ಸುಗಂಧದ್ರವ್ಯಗಳ ಮಾರಾಟಗಾರರು, ಹೈನೋದ್ಯಮಿಗಳು, ಪತ್ರಿಕೋದ್ಯಮಿಗಳಿಗೆ ವಿಶೇಷವಾದ ಲಾಭವಾಗಲಿದೆ. ಶುಭಸಂಖ್ಯೆ: 6

    ಧನುಸ್ಸು: ವಾಸಸ್ಥಳದ ಬದಲಾವಣೆಗೆ ಅನುಕೂಲಕರ ದಾರಿಗಳು ಸಿಗಲಿವೆ. ಇದು ನಿಮ್ಮ ಪಾಲಿಗೆ ಸಂತಸ ಉಂಟುಮಾಡಲಿದೆ. ಶುಭಸಂಖ್ಯೆ: 4

    ಮಕರ: ಯಾವುದೇ ಬಗೆಯ ವಿಷಮ ಸಂದರ್ಭವನ್ನು ಎದುರಿಸಲು ಸಿದ್ಧರಾಗಿ. ನಿಮ್ಮ ಜಾಣ್ಮೆಗೆ ಮನ್ನಣೆ ದೊರಕಲಿದೆ. ಶುಭಸಂಖ್ಯೆ: 5

    ಕುಂಭ: ಎಲ್ಲ ಸಲವೂ ನಿಮಗೆ ನೀವೇ ಗುರುವಾಗದಿರಿ. ತಿಳಿದವರ ಬಳಿ ಕೇಳಿ ತಿಳಿದುಕೊಳ್ಳಿ. ಕ್ಷೇಮದ ದಾರಿಯೊಂದು ಕಾಣಿಸಲಿದೆ. ಶುಭಸಂಖ್ಯೆ: 9

    ಮೀನ: ವಿಶೇಷ ಲಾಭಕ್ಕೆ ಹೇರಳವಾದ ಅವಕಾಶಗಳು ತೆರೆದುಕೊಳ್ಳಲಿವೆ. ಮಹಾಲಕ್ಷ್ಮಿದೇವಿಯನ್ನು ಶ್ರದ್ಧೆಯಿಂದ ಆರಾಧನೆ ಮಾಡಿ. ಶುಭಸಂಖ್ಯೆ: 7

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts